SUDDILIVE || SHIVAMOGGA
ಮುಸ್ಲಿಂ ಸಮಾಜಕ್ಕೆ ಪರ್ಯಾಯ ಸಿಕ್ಕರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ: ಮುಕ್ತಿಯಾರ್ ಅಹಮದ್ ಗುಡುಗು-It will be difficult for Congress to come to power if the Muslim community finds an alternative: Mukhtiar Ahmed Gudugu
ಶಿವಮೊಗ್ಗ: ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಹೊರತಾಗಿ ಪರ್ಯಾಯ ರಾಜಕೀಯ ವೇದಿಕೆ ಸಿಕ್ಕರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ ಎಂದು ಮುಕ್ತಿಯಾರ್ ಅಹಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ತುಂಗಾನಗರದಲ್ಲಿರುವ ಫಾರೂಕ್ ಎ ಶಾದಿ ಮಹಲ್‌ನಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಜನರು ಪರ್ಯಾಯ ರಾಜಕೀಯ ವ್ಯವಸ್ಥೆಯ ಬಗ್ಗೆ ಯೋಚಿಸದೆ ತಮ್ಮೊಂದಿಗೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ. ಮುಸ್ಲೀಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ಅಧಿಕಾರ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ. ಪರ್ಯಾಯವಾದ ರಾಜಕೀಯ ಪಕ್ಷ ಮುಸ್ಲೀಂರಿಗೆ ಸಿಕ್ಕರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ ಎಂದರು.
ಮುಸ್ಲಿಂ ಸಮಾಜದ ಜನರಿಗೆ ಉದ್ದೇಶಿಸಿ ಮಾತನಾಡಿದ ಮುಕ್ತಿಯಾರ್ ಅಹಮದ್, ಸಮಾಜದ ಪ್ರತಿಯೊಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದು, ತಮ್ಮ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕು ಎಂದು ಹೇಳಿದರು. ಪ್ರತಿ ತಾಲೂಕಿನಲ್ಲೂ ಮುಸ್ಲೀಂರಿಗೆ ಸರ್ಕಾರದ ಅಧಿಕಾರ ನೀಡಬೇಕೆಂದು ಆಗ್ರಹಿಸಿದರು.
“ನಮಗೆ ಪರ್ಯಾಯ ರಾಜಕೀಯ ವೇದಿಕೆ ಸಿಕ್ಕಿತು ಎಂದಾದರೆ ಕಾಂಗ್ರೆಸ್ ಆರಾಮದಾಯಕ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ಪರ್ಯಾಯದ ಬಗ್ಗೆ ಯೋಚನೆ ಮಾಡಬೇಡಿ, ನಮ್ಮೊಂದಿಗೆ ಕೈಜೋಡಿಸಿ” ಎಂಬರ್ಥದಲ್ಲಿ ಅವರು ಮಾತನಾಡಿದರು.
ಸಮಾಜದ ಜನರು ತಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ತಮ್ಮಿಂದ ಏನಾದರೂ ತಪ್ಪುಗಳಾಗಿದ್ದರೆ ಅದನ್ನು ನೇರವಾಗಿ ತಿಳಿಸುವಂತೆ ಹೇಳಿದರು. ಜನರ ಸಮಸ್ಯೆಗಳನ್ನು ಪರಿಹರಿಸಲು ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ ಅವರು, ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮುಕ್ತಿಯಾರ್ ಅಹಮದ್ ನೀಡಿದ ಈ ಹೇಳಿಕೆ, ಮುಸ್ಲಿಂ ಸಮಾಜದ ರಾಜಕೀಯ ಬೆಂಬಲ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ರಾಜಕೀಯ ವ್ಯವಸ್ಥೆಯ ವಿಚಾರವನ್ನು ಮುನ್ನೆಲೆಗೆ ತಂದಿದೆ.
