ತೀರ್ಥಹಳ್ಳಿ ತುಂಗಾ ನದಿಯಲ್ಲಿ ನವಜಾತ ಹೆಣ್ಣು ಮಗುವಿನ ಶವ ಪತ್ತೆ-Body of newborn baby girl found in Tunga River, Tirthahalli

SUDDILIVE || THIRTHAHALLI

ತೀರ್ಥಹಳ್ಳಿ ತುಂಗಾ ನದಿಯಲ್ಲಿ ನವಜಾತ ಹೆಣ್ಣು ಮಗುವಿನ ಶವ ಪತ್ತೆ-Body of newborn baby girl found in Tunga River, Tirthahalli    

Tunga, river



ತೀರ್ಥಹಳ್ಳಿ: ತಾಲೂಕಿನ ಹೊರಬೈಲು ಸಮೀಪ ತುಂಗಾ ನದಿಯಲ್ಲಿ ನವಜಾತ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು, ಮಗುವಿನ ಜನನವನ್ನು ಮರೆಮಾಚುವ ಉದ್ದೇಶದಿಂದ ನದಿಗೆ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಹೊರಬೈಲು ಸಮೀಪ ತುಂಗಾ ನದಿಯಲ್ಲಿ ಮೀನು ಹಿಡಿಯುತ್ತಿದ್ದವರಿಗೆ ಬಂಡೆಗಳ ನಡುವೆ ಚೀಲವೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ಅನುಮಾನಗೊಂಡ ಅವರು ಚೀಲವನ್ನು ಪರಿಶೀಲಿಸಿದಾಗ ಅದರೊಳಗೆ ನವಜಾತ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ.

ಮಗು ನಿನ್ನೆಯಷ್ಟೇ ಜನಿಸಿರಬಹುದು ಎಂದು ಶಂಕಿಸಲಾಗಿದ್ದು, ಜನನದ ವಿಚಾರವನ್ನು ಮರೆಮಾಚುವ ಉದ್ದೇಶದಿಂದ ಮಗುವನ್ನು ಚೀಲದಲ್ಲಿ ತುಂಬಿ ನದಿಗೆ ಎಸೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಹಾಗೂ ಆಘಾತ ಉಂಟಾಗಿದೆ. ಮಗುವಿನ ಸಾವಿಗೆ ನಿಖರ ಕಾರಣವೇನು ಮತ್ತು ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಈ ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಕೈಗೊಳ್ಳಬೇಕಿದೆ.

Body of newborn baby girl found in Tunga River, Tirthahalli    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close