ಹೊಳೆಹೊನ್ನೂರು: ಸಾಲಬಾಧೆ ತಾಳಲಾರದೆ ರೈತ ಮಹೇಶ್ ಆತ್ಮ*ಹತ್ಯೆ- Holehonnur: Unable to bear the burden of debt, farmer Mahesh commits sui*cide

 SUDDILIVE || HOLEHONNURU

ಹೊಳೆಹೊನ್ನೂರು: ಸಾಲಬಾಧೆ ತಾಳಲಾರದೆ ರೈತ ಮಹೇಶ್ ಆತ್ಮಹತ್ಯೆ- Holehonnur: Unable to bear the burden of debt, farmer Mahesh commits suicide  

Holehonnuru, farmer


ಹೊಳೆಹೊನ್ನೂರು: ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸೈದರಕಲ್ಲಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಸೈದರಕಲ್ಲಹಳ್ಳಿ ಗ್ರಾಮದ ಮಹೇಶ್ (36) ಎಂದು ಗುರುತಿಸಲಾಗಿದೆ.

ಮಹೇಶ್ ಅವರು ಜಮೀನು ಅಭಿವೃದ್ಧಿ ಹಾಗೂ ಮನೆ ನಿರ್ಮಾಣಕ್ಕಾಗಿ ಖಾಸಗಿ ಫೈನಾನ್ಸ್ ಕಂಪನಿಗಳಿಂದ ಸುಮಾರು 7 ಲಕ್ಷ ರೂ. ಸಾಲ ಪಡೆದಿದ್ದರು. ಇದರ ಜೊತೆಗೆ ಸ್ಥಳೀಯವಾಗಿ 6 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಒಟ್ಟು ಸುಮಾರು 13 ಲಕ್ಷ ರೂ. ಸಾಲದ ಹೊರೆ ಅವರ ಮೇಲಿತ್ತು ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಖಾಸಗಿ ಫೈನಾನ್ಸ್ ಕಂಪನಿಯವರು ಮಹೇಶ್ ಅವರ ಮನೆಗೆ ಬೀಗ ಹಾಕಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಮನನೊಂದಿದ್ದ ಮಹೇಶ್ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ಮಂಗಳವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಸಾಲದ ಒತ್ತಡದಿಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮದಲ್ಲಿ ದುಃಖಕ್ಕೆ ಕಾರಣವಾಗಿದೆ.

Holehonnur: Unable to bear the burden of debt, farmer Mahesh commits suicide  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close