ಹೈಡ್ರಾಮಾ ನಡೆಸಿದ ಪುಕ್ಕಿ- Pukki performed by Hydrarama

 SUDDILIVE || SHIVAMOGGA

ಹೈಡ್ರಾಮಾ ನಡೆಸಿದ ಪುಕ್ಕಿ- Pukki performed by Hydrarama   

Akif, highdrama



ಶಿವಮೊಗ್ಗ: ಗಡಿಪಾರು ಆದೇಶಕ್ಕೆ ಒಳಗಾಗಿದ್ದ ಆರೋಪಿ ಅಕೀಫ್ ಯಾನೆ ಪುಕ್ಕಿ ಪೊಲೀಸರ ಎದುರು ಕಲ್ಲಿನಿಂದ ತಾನೇ ಹೊಡೆದುಕೊಂಡು, ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಘಟನೆ ಶಿವಮೊಗ್ಗದಲ್ಲಿ ಇಂದು ರಾತ್ರಿ ನಡೆದಿದೆ. ಈ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮುರಾದ್ ನಗರದ ನಾಲ್ಕನೇ ತಿರುವಿನ ಬಳಿ ನಡೆದಿದೆ ಎಂದು ತಿಳಿದುಬಂದಿದೆ.

ಪೊಲೀಸರ ದಾಳಿ ವೇಳೆ ಆರೋಪಿ ಪತ್ತೆ

ಮುರಾದ್ ನಗರದ ನಾಲ್ಕನೇ ತಿರುವಿನ ಬಳಿ ಅಕೀಫ್ ಮತ್ತು ಆತನ ಸಹಚರರು ಇರುವ ಬಗ್ಗೆ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಗಡಿಪಾರಾದ ವೇಳೆ ಅಕೀಫ್ ತಲೆಮರೆಸಿಕೊಂಡಿದ್ದನು. ಹೀಗಾಗಿ ಗಡಿಪಾರಾದರೂ ಆತ ಪತ್ತೆಯಾಗಿರಲಿಲ್ಲ. 

ಇಂದು ಮುರಾದ್ ನಗರದಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನ ಬಂಧಿಸಲು ಹೋದ  ವೇಳೆ ಪೊಲೀಸರನ್ನು ಕಂಡ ಅಕೀಫ್‌ನ ಸಹಚರರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅಕೀಫ್ ಪೊಲೀಸರ ಕೈಗೆ ಸಿಕ್ಕಿದ್ದಾನೆ ಎಂದು ತಿಳಿದುಬಂದಿದೆ.

ಕಲ್ಲಿನಿಂದ ಹೊಡೆದುಕೊಂಡು ಪೊಲೀಸರ ವಿರುದ್ಧ ಆರೋಪ

ಅತನ ಬಳಿ ಪೊಲೀಸರು ತಪಾಸಣೆ ಮಾಡುವ ವೇಳೆಯಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಕೀಫ್ ತನ್ನ ಬಳಿ ಇದ್ದ ಕಲ್ಲಿನಿಂದ ಎರಡು ಬಾರಿ ತಾನೇ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಬಳಿಕ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಘಟನೆಯ ಬಳಿಕ ಗಾಯಗೊಂಡ ಅಕೀಫ್ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. 

ಮಾದಕ ವಸ್ತುಗಳ ವಿಚಾರವಾಗಿ ಅನುಮಾನ

ಅಕೀಫ್ ಬಳಿ ಗಾಂಜಾ ಅಥವಾ ಐಎಂಡಿ ಮಾದರಿಯ ಮಾದಕ ವಸ್ತುಗಳು ಇದ್ದಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಪೊಲೀಸರ ಕೈಗೆ ಸಿಕ್ಕ ಸಂದರ್ಭದಲ್ಲಿ ಮಾದಕ ವಸ್ತುಗಳ ಪತ್ತೆಯಾಗದಂತೆ ಈ ರೀತಿಯ ನಾಟಕವಾಡಿರಬಹುದು ಎಂಬ ಶಂಕೆ ಕೇಳಿಬಂದಿದೆ.

ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಕೀಫ್ ಬಳಿ ಮಾದಕ ವಸ್ತುಗಳು ಪತ್ತೆಯಾಗಿದ್ದವೆಯೇ ಅಥವಾ ಇಲ್ಲವೇ ಎಂಬುದು ದೃಢಪಟ್ಟಿಲ್ಲ.

ಪೊಲೀಸರೇ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬದ ಆರೋಪ

ಇತ್ತ ಚಿಕಿತ್ಸೆ ಪಡೆಯುತ್ತಿರುವ ಅಕೀಫ್ ಹಾಗೂ ಆತನ ಕುಟುಂಬದವರು ಈ ಘಟನೆಯನ್ನು ತಳ್ಳಿ ಹಾಕಿದ್ದು, ಪೊಲೀಸರೇ ಅಕೀಫ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಕೀಫ್ ವಿರುದ್ಧ ಕೊಲೆಯತ್ನ ಸೇರಿದಂತೆ 9 ಪ್ರಕರಣಗಳು ವಿವಿಧ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರ್ಚ್ 2027 ರವರೆಗೆ ಅಕೀಫ್ ಗಡಿಪಾರಿನಲ್ಲಿದ್ದರೂ ಶಿವಮೊಗ್ಗಕ್ಕೆ ಬಂದು ಡ್ರಾಮಾ ನಡೆಸಿರುವುದು ಕುತೂಹಲ ಮೂಡಿಸಿದೆ. 

Pukki performed by Hydrarama   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close