SUDDILIVE || SHIVAMOGGA
ಶಿವಮೊಗ್ಗ: ಆನ್‌ಲೈನ್‌ನಲ್ಲಿ ಅಕ್ರಮ ಪಟಾಕಿ ಮಾರಾಟ ಆರೋಪ; ನವೀಸ್ ಕಿಡ್ಸ್‌ಗೆ ಎಸಿ ಡಾ. ಮೈತ್ರಿ ಭೇಟಿ- Shivamogga: Accused of selling illegal firecrackers online; AC Dr. Maitri visits Navi's Kids
ಶಿವಮೊಗ್ಗ: ಅಕ್ರಮವಾಗಿ ಪಟಾಕಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಾಗೂ ಆನ್‌ಲೈನ್ ಮೂಲಕ ಪಟಾಕಿ ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ತಂಡ ನಿನ್ನೆ ಪರಿಶೀಲನೆ ನಡೆಸಿದೆ.
ಜಯನಗರದ ನವೀಸ್ ಕಿಡ್ಸ್‌ನಲ್ಲಿ ಆನ್‌ಲೈನ್ ಮೂಲಕ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಡಾ. ಮೈತ್ರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನ್‌ಲೈನ್ ಮೂಲಕ ಪಟಾಕಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಪರಿಶೀಲನೆ ವೇಳೆ ಪಟಾಕಿಗಳನ್ನು ಗೋದಾಮಿಗೆ ಸ್ಥಳಾಂತರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದಾದ ಬಳಿಕ ಮಲ್ಲಿಗೇನಹಳ್ಳಿಯ ಪಟಾಕಿ ಸ್ಟಾಲ್‌ಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿಗಳ ತಂಡ, ಪಟಾಕಿ ಮಾರಾಟದ ಕುರಿತು ಸೂಕ್ತ ಎಚ್ಚರಿಕೆ ನೀಡಿದ್ದು, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದೆ ಎಂದು ತಿಳಿದು ಬಂದಿದೆ.
ಪಟಾಕಿ ಮಾರಾಟದ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸುರಕ್ಷತಾ ಕ್ರಮಗಳ ಪಾಲನೆಗೆ ಸೂಚನೆ ನೀಡಿದ್ದಾರೆ.
