Girl in a jacket

10‌ಜನರನ್ನ ಉಚ್ಚಾಟಿಸುವಂತೆ ಕೋರಿ ನಗರ ಬಿಜೆಪಿ ಘಟಕದಿಂದ ಜಿಲ್ಲಾಧ್ಯಕ್ಷರಿಗೆ ಪತ್ರ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರ ಬಿಜೆಪಿ ಘಟಕ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಈಶ್ವರಪ್ಪನವರ ಜೊತೆ ಗುರುತಿಸಿಕೊಂಡಿರುವ 10 ಜನ ಬಿಜೆಪಿಯ ಮಾಜಿ ಕಾರ್ಪರೇಟರ್, ಕೋರ್ ಕಮಿಟಿ ಸದಸ್ಯರನ್ನ ಉಚ್ಚಾಟಿಸುವಂತೆ ಜಿಲ್ಲಾ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಿದೆ.

ಬಿಜೆಪಿಯಿಂದ ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಈಶ್ವರಪ್ಪ ನವರು ಇದೇ ಬಿಜೆಪಿಯ ಮಾಜಿ ಕಾರ್ಪರೇಟರ್ ಗಳ ಜೊತೆ ಭರ್ಜರಿಪ್ರಚಾರದಲ್ಲಿ ತೊಡಗಿಸಿಕೊಂಡ 10 ಜನರನ್ನ ಉಚ್ಚಾಟನೆ ಮಾಡುವಂತೆ ಜಿಲ್ಲಾಧ್ಯಕ್ಷ ಮೇಘರಾಜರಿಗೆ ಪತ್ರ ಬರೆದಿದ್ದಾರೆ.

ನೇರವಾಗಿ ಉಚ್ಚಾಟಿಸಬಹುದಾಗಿದ್ದ ಸನ್ನಿವೇಶದಲ್ಲಿ ನಗರ ಘಟಕ ಯಾಕೆ ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿಕೊಂಡಿರುವುದು ಕುತೂಹಲಕ್ಕೆ ಮೂಡಿದೆ. ಆದರೂ ಈ ಪತ್ರ ಕುತೂಹಲಕ್ಕೆ ಕಾರಣವಾಗಿದೆ.

ನಾಜಿ ಕಾರ್ಪರೇಟರ್ ಇ ವಿಶ್ವಾಸ್, ಮಾಜಿ ಉಪಮೇಯರ್ ಶಂಕರ್ ಗನ್ನಿ, 28 ನೇ ವಾರ್ಡ್ ನ ಎಸ್ ಜಿ ರಾಜು, ಉಪಮೇಯರ್ ಎಸ್ ಜಿ ರಾಜು, ಮಾಜಿ ಮೇಯರ್ ಸುವರ್ಣ ಶಂಕರ್, 10 ನೇ ವಾರ್ಡ್ ನ ಮಾಜಿ ಕಾರ್ಪೋರೇಟರ್ ಆರತಿ ಆ.ಮಾ.ಪ್ರಕಾಶ್, ಮಾಜಿ ಮೇಯರ್ ಲತಾ ಗಣೇಶ್, ಬಿಜೆಪಿ ಕೋರ್ ಕಮಿಟಿ ಸದಸ್ಯ ಕೆ.ಇ.ಕಾಂತೇಶ್,

ಬಿಜೆಪಿ ನಗರ ಉಪಾಧ್ಯಕ್ಷ ಮೋಹನ್ ರಾವ್ ಜಾದವ್, ಸಹ್ಯಾದ್ರಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನಿತಾ ಮಂಜುನಾಥ್ ರನ್ನ ಉಚ್ಚಾಟಿಸುವಂತೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/13822

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು