ರಾಜ್ಯಪಾಲರು ಬಾಯ್ ಕಾಟ್ ಮಾಡಿಲ್ಲ, ಕಾಂಗ್ರೆಸಿನ ಮೊಂಡುತನದಿಂದ ಭಾಷಣ ಮೊಟಕುಗೊಳಿಸಿದ್ದಾರೆ-ಕಾರಜೋಳ-The Governor did not boycott

SUDDILIVE || SHIVAMOGGA

ರಾಜ್ಯಪಾಲರು ಬಾಯ್ ಕಾಟ್ ಮಾಡಿಲ್ಲ, ಕಾಂಗ್ರೆಸಿನ ಮೊಂಡುತನದಿಂದ ಭಾಷಣ ಮೊಟಕುಗೊಳಿಸಿದ್ದಾರೆ-ಕಾರಜೋಳ-The Governor did not boycott, he cut short his speech due to Congress' stubbornness - Karajola     

Boycott, Governor


ಗವರ್ನರ್ ಜೊತೆ ಕಾಂಗ್ರೆಸ್ ನಡೆದುಕೊಂಡ ರೀತಿ ವಿಚಾರದಲ್ಲಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಸಂಸದ ಗೋವಿಂದ ಕಾರಜೋಳ ಕಾಂಗ್ರೆಸ್ನವರು ನಡೆದುಕೊಂಡ ರೀತಿ ಸಂವಿಧಾನ ವಿರೋಧಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಕ್ಕೂಟಕ್ಕೆ ಧಕ್ಕೆ ತರುವ ಭಾಷಣವನ್ನು ಬರೆದು ಕೊಟ್ಟಿದ್ದರು ಹಾಗಾಗಿ ಕೆಲವು ಬದಲಾವಣೆಗಳಿಗಾಗಿ ಸೂಚನೆ ಗವರ್ನರ್ ನೀಡಿದ್ದರು. ಕೇಂದ್ರ ಸರ್ಕಾರ ಹಾಗೂ ಮೋದಿಯವರನ್ನು ಟೀಕೆ ಮಾಡುವುದಕ್ಕೆ ಗವರ್ನರ್ ಉಪಯೋಗ ಮಾಡಬೇಕಾಗಿಲ್ಲ. ವಿಧಾನಸಭೆ ಇದೆ ಹಾಗೂ ವಿಧಾನಸಭೆ ಹೊರಗೂ ಕೂಡ ನೀವು ಟೀಕೆ ಮಾಡಬಹುದು ಎಂದರು. 

ರಾಜ್ಯಪಾಲರ ಬಾಯಲ್ಲಿ ಹೇಳಿಸುವುದು ಸರಿಯಾದ ಕ್ರಮವಲ್ಲ. 11 ಪ್ಯಾರಗಳನ್ನ ಬದಲಾವಣೆ ಮಾಡಲು ಸೂಚನೆ ನೀಡಿದ್ದರು. ಆದರೆ ಇವರ ಮಂಡತನದಿಂದ ರಾಜ್ಯಪಾಲರು ಭಾಷಣವನ್ನು ಮಟಕುಗೊಳಿಸಿದ್ದಾರೆ. ರಾಜ್ಯಪಾಲರು ಭಾಷಣವನ್ನು ಬಾಯ್ ಕಾಟ್ ಮಾಡಲಿಲ್ಲ. ಕಾಂಗ್ರೆಸ್ನವರು ಜಿ ರಾಮ ಜಿ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ನರೇಗಾ ಯೋಜನೆ ಮೊದಲು ಜಾರಿಗೆ ತಂದಾಗ ಜವಾಹರ್ ಯೋಜನೆ ಎಂದು ಜಾರಿಗೆ ತರಲಾಗಿತ್ತು ಎಂದು ನೆನಪಿಸಿದರು. 

ಮಹಾತ್ಮ ಗಾಂಧಿ ಹೆಸರು ಮೊದಲು ತಂದಿರಲಿಲ್ಲ. ಗಾಂಧೀಜಿ ಮೇಲೆ ಅಷ್ಟು ಪ್ರೀತಿ ಇದ್ದರೆ ಎಲ್ಲಾ ಯೋಜನೆಗಳಿಗೆ ಗಾಂಧಿಯವರ ಹೆಸರನ್ನ ಇಡಬೇಕಾಗಿತ್ತು. ಕರ್ನಾಟಕದಲ್ಲಿ 25 ಯೋಜನೆಗಳಲ್ಲಿ ಕೆಲವು ಯೋಜನೆಗಳಿಗೆ ನಕಲಿ ಗಾಂಧಿಗಳ ಹೆಸರನ್ನ ಇಟ್ಟಿದ್ದೀರಿ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗಾಂಧೀಜಿಯವರ ಆಶ್ರಮವನ್ನು ಅಭಿವೃದ್ಧಿಪಡಿಸಿದ್ದರು. 

ನೆಹರು ಇಂದ ಇಲ್ಲಿಯವರೆಗೂ ಹಲವು ಕಾಂಗ್ರೆಸ್ ನಾಯಕರು ಆ ಗಾಂಧಿ ಕಡೆ ತಿರುಗಿ ಕೂಡ ನೋಡಲಿಲ್ಲ. ರಾಜ್ಯಪಾಲರಿಗೆ ಮುತ್ತಿಗೆ ಹಾಕಿದ್ದು ಅಕ್ಷರ ಸಹ ಅಪರಾಧವಾಗಿದೆ. ಅವರು ರಾಜ್ಯಪಾಲರನ್ನ ತಡೆಯುವ ಕೆಲಸ ಯಾವತ್ತು ಆಗಬಾರದು. ಯಾರು ಈ ರೀತಿ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಂಡು ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು

The Governor did not boycott

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close