Girl in a jacket

ರೋಡ್ ಶೋ ಮೂಲಕ ಬಿವೈಆರ್ ಪರ ಶಾಸಕ ಚೆನ್ನಿ ಮತಯಾಚನೆ

ಸುದ್ದಿಲೈವ್/ಶಿವಮೊಗ್ಗ

ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.20 ರ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಬಿಜೆಪಿಯ ರೋಡ್ ಶೋನ ನಡೆದಿದೆ. ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ರೋಡ್ ಶೋನಲ್ಲಿ ಭಾಗವಹಿಸಿ, ಸಂಸದರಾದ ಬಿ.ವೈ ರಾಘವೇಂದ್ರ ಅವರ ಪರವಾಗಿ ಮತಯಾಚಿಸಿದರು.

ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿ ಸರಕಾರದ ಸಾಧನೆಗಳು ಹಾಗೂ ಜನಪರ ಯೋಜನೆಗಳ ಕುರಿತು ಮಾತನಾಡಿ, ಬಿ.ವೈ ರಾಘವೇಂದ್ರ ಅವರನ್ನು ಅತಿ ಹೆಚ್ಚು ಮತಗಳನ್ನು ನೀಡಿ, ಗೆಲ್ಲಿಸುವಂತೆ ಮನವಿ ಮಾಡಿದರು.

ರೋಡ್ ಶೋ ನಲ್ಲಿ ಶಿವಮೊಗ್ಗ ನಗರ ಚುನಾವಣಾ ಪ್ರಭಾರಿ ಜ್ಞಾನೇಶ್ವರ, ಚುನಾವಣೆ ಶಿವಮೊಗ್ಗ ಕ್ಷೇತ್ರ ಸಂಚಾಲಕರಾದ ಎಂ ಜೆ ನಾಗರಾಜ್ , ಭವಾನಿ, ಜೆಡಿಎಸ್ ನರಸಿಂಹ ಗಂಧದ ಮನೆ , ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಶಿವಮೊಗ್ಗದ ಪ್ರಜ್ಞಾವಂತ ಮತಬಾಂಧವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/13937

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು