ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ಶೀಘ್ರದಲ್ಲಿಯೇ ಪ್ರತಿಭಟನೆ-BJP to protest against state government's failure soon

 SUDDILIVE || SHIVAMOGGA

ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ಶೀಘ್ರದಲ್ಲಿಯೇ ಪ್ರತಿಭಟನೆ-BJP to protest against state government's failure soon

Bjp, protest

ಎರಡುವರೆ ವರ್ಷ ಸಂಪೂರ್ಣಗೊಳಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲವಿದೆ. ಅಭಿವರದ್ಧಿ ಏನೂ ನಡೆಯಿತಾ‌ಇಲ್ಲ. ರೈತರನ್ನ ಕಡೆಗಣಿಸಲಾಗಿದೆ. ಹಾಗಾಗಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, BSY ಸರ್ಕಾರವಿದ್ದಾಗ ಅತಿವೃಷ್ಠಿ ಅನಾವೃಷ್ಠಿಗೆ ಎಕರೆಗೆ 13 ಸಾವಿರ ರೂ. ನಿಗದಿಪಡಿಸಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಖುಷ್ಕಿ ಬೆಳೆಗೆ ಹೆಕ್ಟರ್ ಗೆ 17 ಸಾವಿರ ಕೊಡುತ್ತಿದೆ. ನೀರವರಿಗೆ 25 ಸಾವಿರ 500 ರೂ. ತೋಟಗಾರಿಕೆಗೆ 31 ಸಾವಿರ ನೀಡಲಾಗುತ್ತಿದೆ. ಬಿಎಸ್ ವೈ ಸರ್ಕಾರವಿದ್ದಾಗ  2009/10 ರಲ್ಲಿ ರಾಜ್ಯ ಸರ್ಜಾರದ ಬಜೆಟ್ ಗಾತ್ರ 85,194 ಕೋಟಿಯಿತ್ತು‌ ಇಂದಿನ ಗಾತ್ರ 4.17 ಲಕ್ಷ  ಕೋಟಿ ರೂ. ಇದೆ. ಆದರೆ ಪರಿಹಾರ ಸರಿಯಿಲ್ಲ ಎಂದು ದೂರಿದರು.

ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶೀಘ್ರದಲ್ಲಿಯೇ ಪ್ರತಿಭಟಿಸಲಾಗುವುದು ಎಂದರು. 

ಬಿಜೆಪಿ ಶಾಸಕ ಜೀವರಾಜ್ ಮಾತನಾಡಿ, ಕಾಡುಪ್ರಾಣಿ ಹಾವಳಿ ಬಯಲು ಸೀಮೆಯಲ್ಲೂ ಹೆಚ್ಚಾಗಿದೆ.  ಮಲೆನಾಡಿನಲ್ಲಿ ಆನೆತುಳಿತಕ್ಕೆ ಮತ್ತಿತರೆ ಹಾವಳಿಯಿಂದ 11ಜನ ಬಲಿಯಾಗಿದ್ದಾರೆ. ರೈತನಿಗೆ ಪರಿಹಾರ ಕೊಡಬಹುದು ನಮ್ಮ‌ಜಾಗಕ್ಕೆ ಕಾಡುಪ್ರಾಣಿ ಬಂದರೆ ರಕ್ಷಣೆ ನೀಡಬೇಕು ಎಂದರು. 

ಪ್ರಾಣಿ ನಮ್ಮ‌ಮೇಲೆ ಅಟ್ಯಾಕ್ ಮಾಡಿದರೆ ದೂರು ದಾಖಲಾಗಲ್ಲ. ಪ್ರಾಣಿ ಹತ್ಯೆಯಾದರೆ ದೂರು ದಾಖಲಾಗುತ್ತದೆ. ಹಾಗಾಗಿ ಪ್ರಾಣಿ ಮನುಷ್ಯನನ್ನ ಕೊಂದರೆ ಅರಣ್ಯ ಇಲಾಖೆಯ ಮೇಲೆ ದೂರು ದಾಖಲಾಗಬೇಕು. ಪರಿಹಾರ ತಕ್ಷಣ ಸಿಗಬೇಕು ಎಂದರು. 

4(1) ಎಂದರೆ ಅರಣ್ಯ ಆಗಲ್ಲ 17 ಆದಮೇಲೆ ಅರಣ್ಯ ಆಗಲಿದೆ. ರಕ್ಷಣೆಗೆ ಬಿಪಿಎಲ್ ಕಾರ್ಡ್ ವಾಪಾಸ್ ಪಡೆಯಬೇಡಿ ಸಾಹುಕಾರರ ಕಾರ್ಡ್ ತೆಗೆಯುತ್ತಿಲ್ಲ. ಕಾರು ಮತ್ತು ವಾಹನ ಇರುವವರ ಬಿಪಿಎಲ್ ಕಾರ್ಡ್ ತೆಗೆಯಬೇಡಿ ಎಂದ ಅವರು ಜನರ ತೆರಿಗೆಹಣವನ್ನ ಗ್ಯಾರೆಂಟಿ ಹಣವಾಗಿ ನೀಡಲಾಗುತ್ತಿಸೆ.‌ಗೃಹಲಕ್ಷ್ಮಿ ಹಣವನ್ನ 6 ತಿಂಗಳಿಂದ ನೀಡಲಾಗುತ್ತಿಲ್ಲ ಎಂದರು. 

BJP to protest against state government's failure soon

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close