ಸಂಚಲನ ಮೂಡಿಸಿದ ಮಹಿಳ ಆಯೋಗದ ಅಧ್ಯಕ್ಷೆಯ ಮೊಬೈಲ್ ಕುರಿತ ಪಿಸು ಮಾತು-The Women's Commission chairperson's controversial remark about her mobile phone caused a stir

 SUDDILIVE || SHIVAMOGGA

ಸಂಚಲನ ಮೂಡಿಸಿದ ಮಹಿಳ ಆಯೋಗದ ಅಧ್ಯಕ್ಷೆಯ ಮೊಬೈಲ್ ಕುರಿತ ಪಿಸು ಮಾತು-The Women's Commission chairperson's controversial remark about her mobile phone caused a stir.

Hostel, commission


ಶಿವಮೊಗ್ಗದ ದೇವರಾಜ್ ಅರಸ್ ಹಿಂದುಳಿದ ಹಾಸ್ಟೆಲ್ ನಲ್ಲಿ ಮಹಿಳ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಬುದ್ದಿವಾದ ಹೇಳಿದ್ದಾರೆ. ಮೊಬೈಲ್ ನಿಂದ ದೂರ ಇರುವಂತೆ ಮನಮುಟ್ಟುವಂತೆ ಹೇಳಿರುವುದು ಗಮನ ಸೇಳೆದಿದೆ. ಆದರೆ ಕೊನೆಗೆ ಮೊಬೈಲ್ ಸಹಾಯದಿಂದಲೇ ಎಲ್ಲಾ ಕೆಲಸವು ಗಪ್ ಚುಪ್ ಆಗಿ ಮುಗಿದಿರುವುದಿರುವುದು ಗಮನಸೆಳೆದಿದೆ. 

ಮೊಬೈಲ್ ಗೀಳಿನಿಂದ ದೂರವಿರಲು ಮಹಿಳ ಅಧ್ಯಕ್ಷರ ಮಾತು ಕೇವಲ ಹಾಸ್ಟೆಲ್ ವಿಸಿಟ್ ವೇಳೆ ಮಾತ್ರ ಹೊರಹೊಮ್ಮಿಲ್ಲ. ನಗರದ ಅಂಬೇಡ್ಕರ್ ಭವನದಲ್ಲಿಯೂ ಕಾಲೇಜು ವಿದ್ಯಾರ್ಥಿನಿಯರ ಜೊತೆಗಿನ ಸಂವಾದದ ವೇಳೆಯೂ ವಿದ್ಯಾರ್ಥಿನಿಯೊಂದಿಗೆ ಇದೇ ಸಲಹೆ ನೀಡಿರುವುದು ಗಮನಸೆಳೆದಿದೆ. 

ಮೊಬೈಲ್ ಯುವಕ ಯುವತಿಯ ಹದಿಹರೆಯರಲ್ಲಿ ಸಂಚಲನ ಮೂಡಿಸಿದೆ. ಒಳ್ಳೆಯ ಟೈಮ್ ಪಾಸ್ ಸಹ ಆಗಿರುವುದರಿಂದ ವಿದ್ಯಾರ್ಥಿನಿಯರು ಈ ಆಧುನಿಕ ಯಂತ್ರದಿಂದ ದೂರವಿರುವ ಸಲಹೆ ನೀಡಿದ್ದಾರೆ. ಓದುವಿನ ಕಡೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ.‌ 

ದೇವರಾಜ್ ಅರಸ್ ಹಿಂದುಳಿದ ಶ್ರೀಮತಿ ಇಂದಿರಾ ಗಾಂಧಿ ನರ್ಸಿಂಗ್ ಮಹಿಳಾ ವಿದ್ಯಾರ್ಥಿಗಳು ಸಹ ಮಹಿಳಾ ಆಯೋಗ ಅಧ್ಯಕ್ಷೆಯ ಸಲಹೆಯನ್ನ ಎಷ್ಟು ಪಡೆದರೋ ಬಿಟ್ಟರೋ ಗೊತ್ತಿಲ್ಲ. ಆದರೆ ಇನ್ ಸ್ಟಾಗ್ರಾಮ್ ನಲ್ಲಿ ಅವರ ವಿಡಿಯೋವನ್ನ ಗುರುತಿಸಿದ ವಿದ್ಯಾರ್ಥಿನಿ ನಾನು ನಿಮ್ಮ‌ಫ್ಯಾನು ಎಂದು ಹೇಳುವ ಮೂಲಕ ಅಧ್ಯಕ್ಷೆಗೆ ಶಾಕ್ ನೀಡಿದ್ಸಾರೆ. 

ಯಾವ ವಿದ್ತಾರ್ಥಿನಿಯರನ್ನ ಮೊಬೈಲ್ ನಿಂದ ದೂರ ಇರುವಂತೆ ಸೂಚಿಸಿದ ಅಧ್ಯಕ್ಷೆಗೆ ವಿದ್ಯಾರ್ಥಿನಿಯ ಹೇಳಿಕೆ ಸಂಚಲನ ಮೂಡಿಸಿದೆ. ಮೊಬೈಲ್ ನ್ನ ಎಷ್ಟು ಬಳಸಬೇಕೋ ಅಷ್ಟು ಬಳಸಿ ಧನಾತ್ಮಕ ವಿಷಯದ ಕಡೆ ಗಮನ ಕೊಡಿ. ಓದುವಿನಿಂತ ವಿಕಸನದ ವಿಷಯಕ್ಕೆ ಅಧ್ಯಕ್ಷೆ ಒಮ್ಮೆಲೆ ಸ್ಟನ್ ಸಹ ಆಗಿದ್ದು ಹೌದು. 

ನಂತರ ವಿದ್ತಾರ್ಥಿನಿಯರು ಅಧ್ಯಕ್ಷೆಯೊಂದಿಗೆ ಸೇರಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಮೊಬೈಲ್ ಈ ವೇಳೆಯೇ ಹೆಚ್ಚು ಸದ್ಬಳಕೆಯಾಗುವ ಮೂಲಕ ವಿದ್ಯಾರ್ಥಿನಿ ಮತ್ತು ಅಧ್ಯಕ್ಷೆಗೆ ಗೊತ್ತಿಲ್ಲದ ಹಾಗೆ ಸಂಚಲನ ಉಂಟು ಮಾಡಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close