Girl in a jacket

ಸರ್ಕಾರ ಸ್ವೇಚ್ಛಾಚಾರವಾಗಿ ಹಣ ಖರ್ಚು ಮಾಡ್ತಾಯಿದೆ-ಕುಮಾರ ಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ ಅಭಿಪ್ರಾಯಪಟ್ಟರು.

ಅವರು ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿ ಬಗ್ಗೆ ಚರ್ಚೆ ಆಗ್ತಾ‌ಇದೆ. ಐದನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ. ಮೂರನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯವ ನಿರೀಕ್ಷೆ ಇದೆ ಅದು‌ ಮೋದಿ ಅವರ ಆಡಳಿತದಲ್ಲಿ ಎಂದರು.

2028 ರ ವರೆಗೆ 80 ಲಕ್ಷ ಕುಟುಂಬಕ್ಕೆ ಉಚಿತವಾಗಿ ಕೊಡಲಾಗುತ್ತಿದ್ದ ಅಕ್ಕಿ ಕೊಡಲಿದ್ದಾರೆ. ಐದು ಕೆಜಿ ಅಕ್ಕಿ ಕೇಂದ್ರದಿಂದ ಉಚಿತವಾಗಿ ಸಿಗಲಿದೆ. ಐದು ಗ್ಯಾರೆಂಟಿ ಗಳು ಮಾತ್ರ ಕಾಂಗ್ರೆಸ್ ಸಾಧನೆಯಾಗಿದೆ. ಸರ್ಕಾರದಿಂದ ಯಾವುದೇ ಕಾರ್ಯಕ್ರಮಗಳಿಲ್ಲ. ಕಾಂಗ್ರೆಸ್ ಸುಳ್ಳನ್ನ ಹೇಳಿ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.

ರಾಜ್ಯದ ಖಜಾನೆ ಖಾಲಿ ಮಾಡ್ತಾ‌ಇದ್ದಾರೆ. 75 ವರ್ಷದಲ್ಲಿ ಅನುದಾನ ವಿಷಯದಲ್ಲಿ ಯಾವುದೇ ರಾಜ್ಯ ಕೇಂದ್ರದ ಜೊತೆ ಜಟಾಪಟಿಗೆ ಬಿದ್ದಿಲ್ಲ. ಐದು ಗ್ಯಾರೆಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಏಪ್ರಿಲ್ ನಲ್ಲಿ ಮಳೆ ಬರಬೇಕಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದು ವರ್ಷ ಮಳೆ ಬರೊಲ್ಲ. ಪಕ್ಷ ಅಧಿಕಾರಕ್ಕೆ ಬರುವ ಜೊತೆ ಬರಗಾಲವನ್ನೂ ತರಲಿದೆ. ರಾಘವೇಂದ್ರ ನಾಮಪತ್ರ ಹಾಕಿದಾಗ ಬಂದ ಮಳೆ ಶಿವಮೊಗ್ಗದಲ್ಲಿ ಮತ್ತೆ ಸುರಿದಿಲ್ಲ. ಸಿಗಂದೂರು ತಾಯಿಯ ಕೃಪೆಯಿಂದ ಉತ್ತಮ ಮಳೆಯಾಗಲಿ ರೈತರು ನೆಮ್ಮದಿ ಬದುಕು ಕಾಣಲಿ ಎಂದರು.

ಹಲವಾರು ಕಡೆ 2000 ಸಾವಿರ ರೂ‌ ಬಳಕೆ ಆಗುತ್ತಿಲ್ಲ. ಕೇಂದ್ರ ಬರಪರಿಹಾರ ಎಲ್ಲಿ ಬಳಸಬೇಕು ಎಂಬುದು ಸರ್ಕಾರದ ಗಮನದಲ್ಲಿ ಇಲ್ಲ. ಕಾಂಗ್ರೆಸ್ ನ 94 ಜನ ಶಾಸಕರು ದುಡ್ಡಿಲ್ಲ ಎನ್ನುತ್ತಾರೆ.ಖಾಲಿ ಚೊಂಬು ತೋರಿಸುತ್ತಿರುವುದು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬುದರ ಸಂಕೇತ ಎಂದರು.

ಸರ್ಕಾರದ ಕೋಟ್ಯಾಂತರ ರೂ. ಹಣವನ್ನ ಸ್ಚೇಚ್ಛಾಚಾರವಾಗಿ ಖಾಲಿ ಮಾಡ್ತಾ ಇದ್ದಾರೆ. ಸಚಿವ ಸಂಪುಟದಲ್ಲಿ 34 ಹೊಸ‌ ಕಾರು ಖರೀದಿಯಾಗಿದೆ. ನನ್ನ ಅವಧಿಯಲ್ಲಿ ಸಂಪೂರ್ಣ ಸಾಲಮನ್ನ‌ ಮಾಡಲು ಆಗಲಿಲ್ಲ. ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದ ಕಾರಣ ಮೋದಿ ಬಳಿ ಹೋಗಲಿಲ್ಲ. ನಿಭಾಯಿಸಿದೆ. 2000 ಹಣ ಕೊಡುತ್ತಿರುವರು ಜನರನ್ನ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ ಎಂದು ದೂರಿದರು.

6½ ಲಕ್ಷಕೋಟಿ ರಾಜ್ಯ ಸರ್ಕಾರದ ಸಾಲವಿದೆ. ಪ್ರತಿ ವ್ಯಕ್ತಿ ಮೇಲೆ 36 ಸಾವಿರ ಕೋಟಿ ಇದೆ. 50 ರೂ ಇದ್ದ ಒಂದು ಕ್ವಾರ್ ಬಾಟಲು 150 ರೂ. ಆಗಿದೆ ಪಿಕ್ ಪ್ಯಾಜೆಟ್ ಸರ್ಕಾರವಾಗಿದೆ. ರಾಜ್ಯ ಸರ್ಕಾರದಲ್ಲಿ ನಿಜವಾದ ಜನಪರ ಸರ್ಕಾರವಲ್ಲ. ಮೋದಿ ಬಡಕುಟುಂಬಕ್ಕೆ ಹಲವಾರು ಯೋಜನೆ ತಂದಿದ್ದಾರೆ. ಬಳಕೆ ಮಾಡಿದರೆ ಸ್ವಾಭಿಮಾನದ ಬದುಕು ಬದುಕಲು ಸಾಧ್ಯವಾಗಿದೆ.‌ ಆರ್ಥಿಕ ಶಕ್ತಿ ಬೆಳೆಸವ ಸರ್ಕಾರ ಬೇಕು. ಅದಕ್ಜೆ‌ಮೋದಿ ಸರ್ಕಾರ ಬೇಕು ಎಂದರು

ಮೈತ್ರಿ ಸರ್ಕಾರ ನಮ್ಮ ಸ್ವಾರ್ಥಕ್ಕೆ ಮಾಡಿಕೊಂಡಿಲ್ಲ. ನೀರು ಮತ್ತು ಮಾರುಕಟ್ಟೆ ದೊರೆಕಿದರೆ ರೈತರು ಸ್ವಾಭಿಮಾನವಾಗಿ ಬದುಕುತ್ತಾರೆ. ಎನ್ ಡಿಎ ಸರ್ಕಾರ ಬಂದರೆ ಸಚಿವರಾಗಿ ನಾನು ಮತ್ತು ರಾಘವೇಂದ್ರ ಅವರು ದೆಹಲಿಗೆ ಹೋಗುವ ಸಾಧ್ಯತೆ ಇದೆ. ಮಂಡ್ಯದಲ್ಲಿ 2½ ರಿಂದ 3 ಲಕ್ಷ‌ಬಹುಮತದಿಂದ ಗೆಲ್ಲಲಿದ್ದೇನೆ. ಶಾರದ ಪೂರ್ಯನಾಯ್ಕ್ ರನ್ನ ಗೆಲ್ಲಿಸಿದಂತೆ ರಾಘವೇಂದ್ರರನ್ನ‌ ಗೆಲ್ಲಿಸುವಂತೆ ಕೋರಿದರು.‌

ಇದನ್ನೂ ಓದಿ-https://suddilive.in/archives/13834

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close