Girl in a jacket

ವಿಶೇಷ ಚೇತನರು ಮತ್ತು ವಯೋವೃದ್ಧರ ಮತ ಚಲಾವಣೆ

ಸುದ್ದಿಲೈವ್/ಶಿವಮೊಗ್ಗ

85 ವರ್ಷದ ವಯೋಮಾನದವರಿಗೆ ಮತ್ತು ವಿಶೇಷ ಚೇತನರಿಗೆ ಮನೆ ಮನೆಗೆ ತೆರಳಿ ಮತದಾನ ಶುರುವಾಗಿದೆ.

ಇಂದು ಸಹ ಮತದಾನ ನಡೆದಿದ್ದು ಮಾಜಿ ಮಹಾನಗರ ಪಾಲಿಕೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪಾಲಾಕ್ಷಿ ಅವರ ತಾಯಿ ಲಕ್ಷ್ಮಮ್ಮ ಅವರು ಮತ ಚಲಾಯಿಸಿದ್ದಾರೆ.

ಅದರಂತೆ ನಿನ್ನೆ ಮತದಾನ ನಡೆದಿದ್ದು, 85 ವರ್ಷದ ಮೇಲಿನ ವಯಸ್ಸಿನವರು ಮತಗಳನ್ನ 44.57% ರಷ್ಟು ಚಲಾಯಿಸಿದ್ದಾರೆ. ಶಿವಮೊಗ್ಗ ಲೋಕಸಭ ಕ್ಷೇತ್ರದಲ್ಲಿ 2515 ಮತಗಳಿದ್ದು ಇದರಲ್ಲಿ 1121 ಮತಗಳು ಚಲಾವಣೆಯಾಗಿದೆ.

ಮನೆಗಳಿಗೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ವಿಶೇಷ ಚೇತನರ ಮತ್ತು 85 ವಯಸ್ಸಿನ ಮೇಲಿನ ವಯೋವೃದ್ಧರಿಗೆ ಮತಚಲಾಯಿಸಲು ಅವಕಾಶ ನೀಡಿದ್ದಾರೆ.‌ ಅದರಂತೆ ವಿಶೇಷ ಚೇತನರ ಮತಗಳು ಶೇ.53.76 ಮತಗಳು ಚಲಾವಣೆಗೊಂಡಿವೆ. 1064 ಮತಗಳಲ್ಲಿ 572 ಮತಗಳು ಚಲಾವಣೆಗೊಂಡಿವೆ.

ಇದನ್ನೂ ಓದಿ-https://suddilive.in/archives/13657

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು