Girl in a jacket

ಮೋದಿ ಈ ಬಾರಿ ಮನೆಗೆ ಹೋಗ್ತಾರೆ-ಸಂತೋಷ್ ಲಾಡ್

ಸುದ್ದಿಲೈವ್/ಶಿವಮೊಗ್ಗ

ಪ್ರಧಾನಿ ಮೋದಿ ಮಾಂಗಲ್ಯ ಸರದ ಬಗ್ಗೆ ನರೇಷನ್ ನೀಡುದ್ರು, ಅವರು ಹೇಗೆ ಬೇಕಾದರೂ ಮಾಡಬಹುದು ರಾಹುಲ್ ಗಾಂಧಿ ಮಾತನಾಡುವ ಹಾಗಿಲ್ಲವಾ? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಾಲು ಎಸೆಯುವೆ ಮಾಧ್ಯಮಗಳಿಗೆ ಬಂದು ಅವರು ಮಾತನಾಡಲಿ. ಬಡತನ ನಿರ್ಮೂಲನೆ ಆಗಿದ್ದರೆ ಮತಯಾಕೆ ಕೇಳಬೇಕು? ಮೂಲತಃವಾಗಿ ಅವರಿಗೆ ಪ್ರಚಾರ ಬೇಕಿದೆ ಅಷ್ಟೆ ಎಂದರು.

40% ದೇಶದ ಸಂಪತ್ತು 1% ಜನರ ಕೈಯಲಿದೆ. ಇಂದಿರಾಗಾಂಧಿ ಉಳುವವನೆ‌ ಭೂಮಿ ಒಡೆಯ ಕಾನೂನು ತಂದರು. ಬ್ಯಾಂಕ್ ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಇವರ ಸಾಧನೆ ಏನು? ಮೋದಿ ಸಾಲದ ಬಗ್ಗೆ ಮಾತನಾಡುವುದಿಲ್ಲ. 80% ಹಿಂದೂ ಇರುವ ನೇಪಾಳಕ್ಕೆ ಹೋಗಲ್ಲ ಯಾಕೆ ಎಂದು ದೂರಿದರು.

10 ವರ್ಷದ ಆಡಳಿತದಲ್ಲಿ ಹಿಂದೂ ಮುಸ್ಲೀಂ ಮತ್ತು ಶ್ರೀರಾಮ ಮಂದಿರದ ಬಗ್ಗೆ ಕೇಳಿಸಿಕೊಳ್ಳಲಾಯಿತು ಬಿಟ್ಟರೆ ಬೇರೆಯ ಅಭಿವೃದ್ಧಿಯ ವಿಷಯವಿಲ್ಲ.  . ಅವರ ಚರ್ಚೆ ಒಂದರ ಬಗ್ಗೆ ಹೇಳಲ್ಲ. ಬಿಲ್ ಗೇಟ್ಸ್ ಗೆ ಮೋದಿ ಸಲಹೆ ಕೊಡುವಂತೆ ಮಾತನಾಡುತ್ತಾರೆ. ಇದಕ್ಕಿಂತ ದುರಂತ ಸಂಗತಿ ಇಲ್ಲ ಎಂದರು.

ಮೋದಿ ಇಷ್ಟು ಬೆಳೆಯಲು ಮಾಧ್ಯಮಗಳು ಕಾರಣ, 2004 ರಿಂದ 2014 ರವರೆಗೆ ಆಡಳಿತದ ಬಗ್ಗೆ ಮತ್ತು 2014 ರಿಂದ 2024 ರವರೆಗೆ ಆಡಳಿತದ ಬಗ್ಗೆ ಚರ್ಚಿಸೋಣ. ಪರ್ ಇನ್ ಕಂ ನ್ನ ಬಾಂಗ್ಲ ದೇಶಕ್ಕೆ ಹೋಲಿಸಿದರೆ ಭಾರದ ಪರ್ ಇನ್ ಕಮ್ ಕ್ಯಾಪಿಟ ಕಡಿಮೆ ಇದೆ. ಈ ಬಗ್ಗೆ ಚರ್ಚಿಸೊಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಹಾರದಲ್ಲಿ 7%ಮತ ಕಡಿಮೆಯಾಗಿದೆ ಯಾಕೆ? ಮೋದಿ ಬಿಟ್ಟರೆ ಬೇರೆಯವರು ಬ್ರ್ಯಾಂಡ್ ಇಲ್ವಾ ಬಿಜೆಪಿಯಲ್ಲಿ? ಅಡ್ವಾಣಿ ಮತ್ತು ಇತರರು ಯಾಕೆ ಬೆಳೆಯುತ್ತಿಲ್ಲ. ಅವರು ಪರ್ಸೆಪ್ಷನ್ ಸೆಟ್ ಮಾಡಿದ್ದಾರೆ. 10 ವರ್ಷದಲ್ಲಿ ನೆಗೆಟಿವ್ಇಲ್ವಾ? ಆರ್ ಕೆ ವರದಿ ಪ್ರಕಾರ ಬಿಜೆಪಿ ಸರ್ಕಾರ ವಿಜ್ಞಾನದ ಮೇಲೆ ಶೂನ್ಯ ಬಂಡವಾಳ ಹೂಡಿದ್ದಾರೆ. ಜೊತೆಗೆ ಬೀಫ್ ರಫ್ತು ವಿಷಯದಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ ಇದೆ ಮೋದಿ ಅವರ ಸಾಧನೆ ಎಂದು ಹೇಳಿದರು

NCRB ವರದಿಯ ಪ್ರಕಾರ 13 ಲಕ್ಷ‌ಮಹಿಳೆಯರು ದೇಶದಲ್ಲಿ ಕಾಣೆಯಾಗಿದ್ದಾರೆ. 54 ರೂ ಇದ್ದ ಡಾಲರ್ ಡಾಲರ್ 83 ರೂಗೆ ಏರಿಕೆಯಾಗಿದೆ. ಪ್ರತಿ ದಿನ ವಿಶ್ವವಿದ್ಯಾಲಯ ನಿರ್ಮಾಣವಾಗುತ್ತಿದೆ ಎಂದು ವಿದೇಶದಲ್ಲಿ ಹೋಗಿ ಮೋದಿ ಮಾತನಾಡುತ್ತಾರೆ. ಪುಲ್ವಾಮಾ ದಾಳಿಯ ಬಗ್ಗೆ ಯಾಕೆ ಇವತ್ತು ಮಾತನಾಡುತ್ತಿಲ್ಲ. ಘಟನೆ ಕುರಿತು ಅಮಿತ್ ಶಾ ತಕ್ಷಣವೇ ಸುದ್ದಿಗೋಷ್ಠಿ ನಡೆಸುತ್ತಾರೆ. ಮುಂಚಿತವಾಗಿ ಮಾತನಾಡುತ್ತಾರೆ. ಇದೆಲ್ಲ ಎಷ್ಟು ಪಾರದರ್ಶಕವಾಗಿದೆ ಎಂದು ಪ್ರಶ್ನಿಸಿದರು.

ಪೆನ್ ಡ್ರೈವ್ ಆಚನಾಕ್ಕಾಗಿ ಸಂಭವಿಸಿದೆ. ಇದು ಸಂಭವಿಸಬಾರದು. ಸರ್ಕಾರ ಸಿಟ್ ತನಿಖೆ ನಡೆಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ಬಗ್ಗೆ ಅಪಪ್ರಚಾರವಾಗಬಾರದು. ಈ ಚುನಾವಣೆ ಸತ್ಯ ಮತ್ತು ಅಸತ್ಯದ ಕುರಿತು ನಡೆಯುತ್ತಿದೆ. ಶೋಷಿತರು ಮತ್ತು ಶ್ರೀಮಂತರ ನಡುವಿನ ಸಂಘರ್ಷದ ಚುನಾವಣೆಯಾಗಿದೆ. ಎಂದರು.

ಗೊಂದಲ, ಭಯ ಸೃಷ್ಠಿ ಮಾಡಲು ಬಿಜೆಪಿ ಮುಂದಾಗಿದೆ. ಚುನಾವಣೆ ನಂತರ ಮೋದಿ ಮನೆಗೆ ಹೋಗ್ತಾರೆ. ವಿಜೇಂದ್ರರಿಗೆ ಸಹಿಸಿಕೊಳ್ಳಲು ಆಗ್ತಾ‌ಇಲ್ಲ. ಸಿದ್ದರಾಮಯ್ಯವಿರುದ್ಧ ಮತ್ತು ನನ್ನ ವಿರುದ್ಧ ಮಾತನಾಡುತ್ತಾರೆ. ಇದರ ನೋಕಮೆಂಟ್ಸ್ ಎಂದ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸರ್ಕಾರ ಕಾಂಗ್ರೆಸ್ ನ ವಿಷಯಗಳನ್ನ ಕತ್ತರಿ ಹಾಕಲಿದೆ. ಮೋದಿಯವರು ಕಾಂಗ್ರೆಸ್ ವಿಷಯಗಳನ್ನ ಕತ್ತರಿ ಹಾಕಿಲ್ವಾ? ಎಂದು ಪ್ರಶ್ನಿಸಿದರು.

ಮೇಕಿಂಗ್ ಇಂಡಿಯಾ ಎಲ್ಲಿದೆ ಪ್ರತಿಯೊಂದು ವಸ್ತುಗಳು ಚೀನಾದಿಂದ ಆಮದು ಆಗ್ತಾ ಇದೆ. ಸಂಸತ್ ನಲ್ಲಿ ರಚನೆಯಾದ ಕಾನೂನು ಎಲೆಕ್ಟ್ರೋಲ್ ಬಾಂಡ್ ನಲ್ಲಿ ತರಲಾಗಿದೆ. ಇದು ವಿಶ್ವಗುರುವಿನ‌ ಅಗಾಧ ಜ್ಞಾನ ಬಳುವಳಿಯಾಗಿದೆ. ಮೀನಿನ ಹೆಜ್ಜೆ ಕಂಡು ಹಿಡಿಯಬಹುದು ಆದರೆ ಮೋದಿಯವರ ನಡೆ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.‌

ದೇಶದಲ್ಲಿ ಬಿಜೆಪಿ 180-200 ಸ್ಥಾನ ಪಡೆಯಲಿದೆ ಶೇ.31% ಮತ ಬೀಳಲಿದೆ. ಇವಿಎಂ ಟ್ಯಾಂಪರ್ ಆಗಲಿಲ್ಲ ಎಂದರೆ ಕಾಂಗ್ರೆಸ್ ಗೆಲ್ಲಿಲಿದೆ. ಸೋರ್ಸ್ ಕೋಡ್ ಪಡೆದು ಟ್ಯಾಂಪರ್ ಮಾಡಬಹುದು. ಕಾಂಗ್ರೆಸ್ 14 ಸ್ಥಾನದಲ್ಲಿ 10 ಸ್ಥಾನ ಗೆಲ್ಲಲಿದೆ ಎಂದ ಅವರು ಸೋಲುವ ನಾಲ್ಕು ಸ್ಥಾನದ ಹೆಸರು ಹೇಳಲಿಲ್ಲ.

ಇದನ್ನೂ ಓದಿ-https://suddilive.in/archives/13810

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು