ಸುದ್ದಿಲೈವ್/ಶಿವಮೊಗ್ಗ
ಮೇ.25 ರಂದು ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಂತೇಕಡೂರು ಗ್ರಾಮದ 66/11 ಕೆವಿ ವಿ.ವಿ.ಕೇಂದ್ರದ ಎಫ್-2 ಮತ್ತು ಎಫ್-4ರ ಮಾರ್ಗಗಳ ವ್ಯಾಪ್ತಿಯಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಮತ್ತು ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ -25 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರ ವರಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಸಂತೇಕಡೂರು, ಶ್ರೀರಾಮನಗರ, ರಾಂಪುರ, ಮಳಲಿಕೊಪ್ಪ, ಭಂಡಾರಿಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದಲ್ಲಿ ವಿದ್ಯುತ್ ವ್ಯತ್ಯಯ
ಮೆಗ್ಗಾನ್ ವಿ.ವಿ.ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂಜಿಎಫ್ 1,2,4 ಮತ್ತು 5ರಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ -25 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರ ವರಗೆ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಹೊಸಮನೆ, ಜೈಲ್ ರಸ್ತೆ, ಕುವೆಂಪುರಸ್ತೆ, ಯುನಿಟಿ ಆಸ್ಪತ್ರೆ, ಶಿವಶಂಕರ್ ಗ್ಯಾರೇಜ್, ದೈವಜ್ಞ ಕಲ್ಯಾಣ ಮಂದಿರ, ಸುಬ್ಬಯ್ಯ ಆಸ್ಪತ್ರೆ, ನರ್ಸ್ ಕ್ವಾಟ್ರಸ್, ಆಯುರ್ವೇದ ಆಸ್ಪತ್ರೆ, ಸಾಗರ ರಸ್ತೆ ಸುರಂಗ, ಬಿ.ಎಸ್.ಎನ್.ಎಲ್ ಕ್ವಾಟ್ರಸ್, ಗೊಮ್ಮಟೇಶ್ವರ ದೇವಸ್ಥಾನ, ಎಸ್‍ಪಿ ಕಚೇರಿ, ಪೊಲೀಸ್ ಠಾಣೆ, ಪೊಲೀಸ್ ಕ್ವಾಟ್ರಸ್, ಸಾಗರ ಮುಖ್ಯರಸ್ತೆ, ಅಶೋಕ್‍ನಗರ,
ಎ.ಆರ್.ಬಿ.ಕಾಲೋನಿ, ನಾಗರಾಜಪುರ ಬಡಾವಣೆ, ಕುವೆಂಪುರಸ್ತೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್‍ಲೈನ್ ರಸ್ತೆ, ಎಲ್‍ಐಸಿ ಕಚೇರಿ, ಮಿಷನ್ ಕಾಂಪೌಂಡ್, ಜೈಲ್ ಸರ್ಕಲ್ ರಸ್ತೆ, ಜಿಲ್ಲಾ ಪಂಚಾಯತ್ ಕಚೇರಿ, ಪಾರ್ಕ್ ಬಡಾವಣೆ, ಆರ್.ಎಂ.ಆರ್.ರಸ್ತೆ,
ತಿಲಕ್‍ನಗರ, ಜಯನಗರ, ಬಸವನಗುಡಿ, ಅಚ್ಯುತ್‍ರಾವ್ ಲೇಔಟ್, ಸವಳಂಗ ರಸ್ತೆ, ನೆಹರು ರಸ್ತೆ, ಡಿ.ಸಿ.ಕಚೇರಿ ಮತ್ತು ನಂಜಪ್ಪ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ-https://suddilive.in/archives/15418