Girl in a jacket

ಕಾಂಗ್ರೆಸ್ ಈ ಬಾರಿ ಎರಡು ಸ್ಥಾನಗೆದ್ದರೂ ಸಾಮರ್ಥ್ಯ ವೃದ್ಧಿಯಾದಂಗೆ, ಹಾಗಾದರೆ ಬಿಜೆಪಿ ಕಥೆಯೇನು?

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಮುಗಿದಿದೆ. ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಈ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಗೆಲುವಿನ ಲೆಕ್ಕಾಚಾರ ಜೋರಾಗಿದೆ.

ಶಾಸಕ ಬಿ.ವೈ.ವಿಜೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಚುನಾವಣೆ ಎದುರಿಸಲಾಗುತ್ತಿದೆ. 28 ಸ್ಥಾನವಿದ್ದ ಬಿಜೆಪಿ ಈ ಬಾರಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು 28 ಸ್ಥಾನವನ್ನ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ28 ಸ್ಥಾನದಲ್ಲಿ 25 ಸ್ಥಾನವನ್ನ ಗೆದ್ದಿತ್ತು. ಆ ಸ್ಥಾನಗಳನ್ನೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮುನ್ನುಗ್ಗುತ್ತಿದೆ.

ಆದರೆ ಆಂತರಿಕ ವರದಿಯ ಪ್ರಕಾರ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿಯಂತೂ ಕಮಲ ಪಡೆಯ ನಾಯಕರು ಇದ್ದಾರೆ. ಆದರೆ, ಅವರು ಅಂದುಕೊಂಡ ಗುರಿ ಮುಟ್ಟುವುದು ಇರಲಿ, ಕಳೆದ ಬಾರಿ ಪಡೆದ ಸ್ಥಾನಗಳನ್ನು ಉಳಿಸಿಕೊಳ್ಳುವುದು ಡೌಟ್‌ ಎಂದು ಹೇಳಲಾಗಿದೆ.

ಒಂದು ವೇಳೆ ಈ ಗುರಿ ತಲುಪಲಿಲ್ಲವೆಂದರೆ ಬಿಜೆಪಿಯ ರಾಜ್ಯಾಧ್ಯಕ್ಷರ ಸಾಮರ್ಥ್ಯವನ್ನೇ ಪ್ರಶ್ನಿಸುವಂತಾಗುವುದಿಲ್ಲವೇ ಎಂಬ ಚರ್ಚೆ ಆರಂಭವಾಗಿದೆ. ಕಳೆದ ಬಾರಿ ಕಾಂಗ್ರೆಸ್ 1 ಸ್ಥಾನವನ್ನ ಗೆದ್ದಿತ್ತು. ಈ ಬಾರಿ ಎರಡು ಸ್ಥಾನ ಗೆದ್ದರೂ ಅದರ ಸಾಮರ್ಥ್ಯ ದುಪ್ಪಟ್ಟಾಗಲಿದೆ. ಕನಿಷ್ಠ 7 ಸ್ಥಾನ ಪಡೆದರೂ ಏಳು ಪಟ್ಟು ಸಾಮರ್ಥ್ಯ ವೃದ್ಧಿಸಿಕೊಂಡಂತಾಗುತ್ತದೆ. ಅದೇ ರೀತಿಯಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡರೂ ಅದರ ಸಾಮರ್ಥ್ಯ ಕುಗ್ಗಿದಂತೆಯೇ ಅಲ್ಲವೇ? ಅದು ಅದರ ರಾಜ್ಯಧ್ಯಕ್ಷರ ಸಾಮರ್ಥ್ಯವನ್ನ ಪ್ರಶ್ನಿಸುವಂತೆ ಮಾಡುವುದಿಲ್ಲವೇ?

ಈ ಬಗ್ಗೆ  ತಮ್ಮ ಆಂತರಿಕ ವರದಿ ಪ್ರಕಾರ 17 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದು, ಐದು ಕ್ಷೇತ್ರಗಳಲ್ಲಿ 50 – 50 ಚಾನ್ಸ್‌ ಇದ್ದು, ಅಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಭಾರೀ ಪೈಪೋಟಿ ಇದೆ ಎನ್ನಲಾಗಿದೆ. 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ಆಂತರಿಕ ವರದಿ ಹೇಳಿದೆ.

ಬಿಜೆಪಿಯ ಇಂಟರ್ನಲ್‌ ರಿಪೋರ್ಟ್‌ ಪ್ರಕಾರ ಹಳೇ ಮೈಸೂರು ಪ್ರಾಂತ್ಯದ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬಹುದು ಎಂಬ ಮಾಹಿತಿ ಇದೆ. ಅದೇ ರೀತಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಅಂದ್ರೇ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ಮಲೆನಾಡು ಹಾಗೂ ಕರಾವಳಿ ಭಾಗದ ಉಡುಪಿ – ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿಯೂ ಕಮಲ ಚಿಹ್ನೆಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸದಲ್ಲಿ ಕೇಸರಿ ನಾಯಕರು ಇದ್ದಾರೆ. ಇತ್ತ, ಮುಂಬೈ ಕರ್ನಾಟಕದ ಕಡೆ ಬಂದರೆ ಹುಬ್ಬಳ್ಳಿ – ಧಾರವಾಡ, ಬಾಗಲಕೋಟೆ, ಹಾವೇರಿ, ವಿಜಯಪುರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ಕಮಲ ಪಾಳಯದ ಆಂತರಿಕ ವರದಿ ಹೇಳಿದೆ.

ಬೆಳಗಾವಿ, ದಾವಣಗೆರೆ, ಹಾಸನ, ಕಲಲಬುರಗಿ ಹಾಗೂ ಬಳ್ಳಾರಿಯಲ್ಲಿ ಬಿಜೆಪಿಗೆ 50 – 50 ಚಾನ್ಸ್‌ ಇದೆ ಎಂದು ಕಮಲದ ಆಂತರಿಕ ವರದಿ ಹೇಳಿದೆ. ಆದರೆ, ಚಾಮರಾಜನಗರ, ಚಿಕ್ಕೋಡಿ, ಬೀದರ್‌, ರಾಯಚೂರು, ಕೊಪ್ಪಳ, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲುವ ಆತಂಕ ಇದೆ ಎಂದು ಇಂಟರ್ನಲ್‌ ರಿಪೋರ್ಟ್‌ ಹೇಳಿದೆ. ಜೆಡಿಎಸ್‌ ಸ್ಪರ್ಧಿಸಿದ ಮೂರು ಕ್ಷೇತ್ರಗಳಲ್ಲಿ ಎರಡನ್ನು ಗೆಲ್ಲಬಹುದು ಎಂದು ಹೇಳಲಾಗಿದ್ದು, ಒಂದು ಕ್ಷೇತ್ರದಲ್ಲಿ 50-50 ಚಾನ್ಸ್‌ ಇದೆ ಎಂದು ಆಂತರಿಕ ವರದಿ ಹೇಳಿದೆ.

ಇದನ್ನೂ ಓದಿ-https://suddilive.in/archives/15541

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close