Girl in a jacket

ಶಿವಮೊಗ್ಗದಲ್ಲಿ ಮುಂದುವರೆದ ನೈಟ್ ಲ್ಯಾಂಡಿಂಗ್ ಸಮಸ್ಯೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭಗೊಂಡು ಒಂದು ವರ್ಷ ಕಳೆದಿದೆ. ಒಂದು ವರ್ಷದಿಂದಲೂ ನೈಟ್ ಲ್ಯಾಂಡಿಂಗ್ ಸಮಸ್ಯೆ ಎದುರಿಸುತ್ತಿದೆ. ಈ ಹಿಂದೆ ಇಂಡಿಗೋ ವಿಮಾನ ಬೆಂಗಳೂರಿನಿಂದ ಹಾರಿ ಬಂದು ಶಿವಮೊಗ್ಗ ತಲುಪಿ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿತ್ತು.

ಈಗ ಸ್ಟಾರ್ ಏರ್ ವೇಸ್ ನ ವಿಮಾನದ ಸರದಿ.   ತಿರುಪತಿಯಿಂದ ಬಂದ ವಿಮಾನ ಹೈದರಾಬಾದ್‌ಗೆ ವಾಪಸ್‌ ಆಗಿ ಮತ್ತೆ ವಾಪಾಸ್ ಶಿವಮೊಗ್ಗಕ್ಕೆ ಬಂದು ಲ್ಯಾಂಡ್ ಆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ  ಸ್ಟಾರ್ ಏರ್ ವಿಮಾನವು ಹವಾಮಾನ ವೈಪರಿತ್ಯದಿಂದ ಶಿವಮೊಗ್ಗದಲ್ಲಿ ಲ್ಯಾಂಡ್‌ ಆಗಲಿಲ್ಲ, ತಿರುಪತಿಯಿಂದ ಮಧ್ಯಾಹ್ನ 2 ಗಂಟೆಗೆ ಬಂದ ವಿಮಾನ ಏರ್‌ಪೋರ್ಟ್‌ನಲ್ಲಿ ಇಳಿಯದೇ ಹೈದರಾಬಾದ್‌ಗೆ ತೆರಳಿದೆ

ರನ್‌ವೇ ಸ್ಪಷ್ಟವಾಗಿ ಕಾಣದೇ ಇದ್ದುದ್ದರಿಂದ ವಿಮಾನ ಲ್ಯಾಂಡ್‌ ಆಗಲಿಲ್ಲ ಎನ್ನಲಾಗಿದೆ. ಇನ್ನೂ ಹೈದರಾಬಾದ್ ಗೆ ತೆರಳಿದ ವಿಮಾನ ಅಲ್ಲಿಂದ ಮತ್ತೆ ಶಿವಮೊಗ್ಗಕ್ಕೆ ಸಂಜೆ 4.30 ರ ಸುಮಾರಿಗೆ ಆಗಮಿಸಿದೆ. ವಿಮಾನದ ಲ್ಯಾಂಡಿಂಗ್‌ ಸಮಸ್ಯೆಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/15546

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು