Girl in a jacket

ರಘುಪತಿ ಭಟ್ಟರಿಗೆ ನೋಟಿಸ್ಸೂ ಬರಲಿದೆ ಪೆನ್ ಡ್ರೈವೂ ಬಿಡುಗಡೆ ಆಗಲಿದೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ರಾಜಕಾರಣದಲ್ಲಿ ವ್ಯಕ್ತಿ ನೋಡಿತ್ತಿದ್ದಂತೆ ಜಾತಿ ನೆನಪಾಗುತ್ತದೆ.‌ ರಘುಪತಿ ಭಟ್ ಬಂದಂತಹ ಊರು ಉಡುಪಿ. ದೇಶದಲ್ಲಿ ಕೃಷ್ಣ ನ ದೇವಸ್ಥಾನಗಳು ಅನೇಕವಿದೆ.‌ ಆದರೆ ಉಡುಪಿಯಲ್ಲಿ ದರ್ಶನ ನೀಡಿದ ಕೃಷ್ಣ, ಕನಕನ ಜಾತಿ ನೋಡಿ ದರ್ಶನ ನೋಡಲಿಲ್ಲ ಭಕ್ತಿಗೆ ಒಲಿದಿದ್ದಾನೆ. ಅದೇ ನಮಗೆ ಸ್ಪೂರ್ತಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಅವರು ಇಂದು ಈಶ್ವರಪ್ಪನವರ ಸ್ವಗೃಹದಲ್ಲಿ ನಡೆದ ಸೌಎಯಲ್ಲಿ ಮಾತನಾಡಿ, ಭಕ್ತ ಕನಕನಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ನೀಡದಿದ್ದಾಗ, ಕನಕ ಊರನ್ನ. ಸುತ್ತುತ್ತಿದ್ದ ಕೃಷ್ಣ ದರ್ಶನವನ್ನ‌ ಕನಕನಿಗೆ ನೀಡಿದ್ದರಿಂದ ಭಗವಂತ ಜಾತಿಗಿಂತ ಧರ್ಮ ನೋಡಿದ್ದಾನೆ ಎಂಬುದು ಎತ್ತಿಹಿಡಿದಿದೆ. ಹಾಗೇಯೇ ಭಟ್ಟರು ಪರಿಷತ್ ಚುನಾವಣೆ ಗೆದ್ದು ರಾಷ್ಟ್ರಧರ್ಮವನ್ನ ಎತ್ತಿಹಿಡಿಯಲಿದ್ದಾರೆ  ಎಂದರು.

ಪರಿಷತ್ ಚುನಾವಣೆಗೆ ಮೂವರು ಲಿಂಗಾಯಿತರು ನಿಂತಿದ್ದಾರೆ. ಬ್ರಾಹ್ಮಣರು ನಿಂತಿದ್ದಾರೆ ಎಂದು ಮಾತು ಕೇಳಿಬರುತ್ತಿದೆ. ಆದರೆ ರಘುಪತಿ ಭಟ್ಟರು ಜಾತಿ ನೋಡದ ವ್ಯಕ್ತಿಯಾಗಿದ್ದಾರೆ. ಇವತ್ತಿನಿಂದ 10 ದಿನ ಪ್ರಚಾರಕ್ಕೆ ಅವಕಾಶವಿದೆ. ಓಟರ್ ಲಿಸ್ಟ್ ಬಹಳ‌ಮುಖ್ಯವಾಗಿದೆ. ನಾವು ಮತದಾರರನ್ನ ಭೇಟಿ ಮಾಡುವ ಮತ್ತು ಓಟರ್ ಲೀಸ್ಟ್ ಸಂಗ್ರಹಿಸುವುದು ನಮ್ಮ‌ಜವಬ್ದಾರಿ ಎಂದರು.

ನನಗೆ ಬೇಸರವಾಗಿತ್ತು, ನನಗೆ ಒಬ್ಬನಿಗೆ ಪಕ್ಷದಿಂದ ನೋಟೀಸ್ ಬಂದಿದೆ ಅಂತ ಇವತ್ತು ತಪ್ಪಿದರೆ ನಾಳೆ ಭಟ್ಟರಿಗೂ ನೋಟೀಸ್ ಬರಬಹುದು. ಆದರೆ ನಾನು ಮತ್ತು ಭಟ್ಟರು ಸ್ಪರ್ಧೆ ಮಾಡುತ್ತಿರುವುದು ಪಕ್ಷದ ಶುದ್ಧೀಕರಣಕ್ಕೆ ಅಂತ ಗೊತ್ತಾಗಲಿದೆ ಎಂದರು.

ರಘುಪತಿ ಭಟ್ಟರನ್ನ ಹೆದರಿಸಲು ಪೆನ್ ಡ್ರೈವ್ ಬರಬಹುದು. ಭಟ್ಟರಿಗೆ ಹೇಗೆ ಬೇಕಾದರೂ ಮೋಸ ನಡೆಯಲಿದೆ. ನಾನು ಮೋಸ ಹೋದವನು. ಹಾಗಾಗಿ ಎಚ್ಚರದಿಂದ ಇರಬೇಕೆಂದು ನೆಗೆಯ ಚಟಾಕಿಯ ಮೂಲಕ ತಮ್ಮ ಅನುಭವನ್ನ ಈಶ್ವರಪ್ಪ ವಿವರಿಸಿದರು.

ಭಟ್ಟರು ಎಂಎಲ್ ಸಿ ಆಗಬೇಕು ಹೌದು, ಆದರೆ ಪಕ್ಷದಲ್ಲಿ ಶುದ್ಧೀಕರಣವಾಗಬೇಕಿದೆ. ಎಂ ಆನಂದ್ ರಾವ್ ಸ್ಪರ್ಧಿಸುವಾಗಲೂ ಗೊಂದಲ ಉಂಟಾಯಿತು. ಆಗ ನಾನು ಯುವಕನಾಗಿದ್ದೆ. ಅವರನ್ನ ಗೆಲ್ಲಿಸಿಕೊಂಡು ಬಂದಿದ್ದೇವೆ. ಆವಾಗ ಬಿಎಸ್ ವೈ, ಆನಂದರಾಯರು ಕರಂಬಳ್ಳಿ ಸಂಜೀವ್ ಶೆಟ್ಟರು ಕುಳಿತು ಚರ್ಚಿಸಿ ಟಿಕೆಟ್ ಹಂಚಲಾಗುತ್ತಿತ್ತು. ಈಗ ಅದು ಇಲ್ಲ. ಹಾಗಾಗಿ ಪಕ್ಷ ಶುದ್ಧೀಕರಣವಾಗ ಬೇಕಿದೆ ಎಂದರು.

ಪಕ್ಷದ ನಿಷ್ಠರಿಗೆ ಮತ ಕೇಳೋಣ,ಆಯನೂರು ಮಂಜುನಾಥ್ ಎಷ್ಟು ಪಕ್ಷ ನಿಷ್ಠರು. ಬಿಎಸ್ ವೈ ಎಷ್ಟು ಪಕ್ಷಕ್ಕೆ ಹೋಗಿ ಬಂದರು. ಆದರೆ ರಘುಪತಿ ಭಟ್ಟರು ಪಕ್ಷ ನಿಷ್ಠರು. ನಾನು ಯಾವ ಅಭ್ಯರ್ಥಿಗಳ ಬಗ್ಗೆ ಹೇಳಲ್ಲ. ಆದರೆ ಕಾರ್ಯಕರ್ತರು ಚಿಂತಿಸಿಲಿ ಎಂದರು.

ಈ ವೇಳೆ ತೀರ್ಥಹಳ್ಳಿಯ ಮನದನ್, ಮನನ ಅಜಿ ನಗರ ಸಭೆ ಅಧ್ಯಕ್ಷ ಬಿ.ಎಲ್ ಶಂಕರ್, ಕಾಂತೇಶ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/15164

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು