Girl in a jacket

ಹಳೆಯ ವಿಡಿಯೋ ವೈರಲ್-ಅಪಪ್ರಚಾರದ ವಿರುದ್ಧ ಈಶ್ವರಪ್ಪ ಗರಂ

ಸುದ್ದಿಲೈವ್/ಶಿವಮೊಗ್ಗ

ಮತದಾನದ ದಿನದಂದು ವೈರಲ್ ಆಗಿರುವ ವಿಡಿಯೋ ವಿರುದ್ಧ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದಿದ್ದಾರೆ.

ಸಂಸದ ರಾಘವೇಂದ್ರನವರ ಪರ ಮತಯಾಚಿಸಿದ  ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಮಾತನಾಡಿರುವ ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ರಾಘವೇಂದ್ರರಿಂದ ನೀಚ ಕೃತ್ಯಕ್ಜೆ ಇಳಿದಿದ್ದಾರೆ ಎಂದು ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳಿಗೆ ತಿಳಿಸಿದರು

ಮತದಾನದ ದಿನ ರಾಘವೇಂದ್ರ ಹಳೆಯ ವಿಡಿಯೋವೊಂದನ್ನ ವೈರಲ್ ಮಾಡಲಾಗುತ್ತಿದೆ. ಆದರೆ ಜನ ತೀರ್ಮಾನಿಸಿದ್ದಾರೆ ಗೀತ ಶಿವರಾಜ್ ಕುಮಾರ್ ಗೆ ಮತ ಹಾಕೊಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/14338

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು