Girl in a jacket

ರೈತ ಉತ್ಪಾದಕರ ಸಂಸ್ಥೆಗಳಿಗೆ ಹಣ‌ನೀಡುವಂತೆ ಬಿಜೆಪಿ ರೈತ ಮೋರ್ಚ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರದಿಂದ ರಚನೆ ಆಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

2015 ರಿಂದ ಇಲ್ಲಿಯ ವರೆಗೂ ನಾಬಾಡ್ ಪ್ರಾಯೋಜಿತ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಪ್ರಧಾನಮಂತ್ರಿಗಳು 10 ಸಾವಿರ ರೈತ ಉತ್ಪಾದಕಯೋಜನೆ ಅಡಿ ಒಟ್ಟು 3 ಯೋಜನೆಗಳಿಂದ 710 ರೈತ ಉತ್ಪಾದಕರ ಸಂಸ್ಥೆಗಳು ಪ್ರಾರಂಭವಾಗಿದೆ.

ಅಂದಾಜು 200 ಕೋಟಿ ರೂಪಾಯಿಗಳಲ್ಲಿ 182 ಕೋಟಿ ರೂ ಬಿಡುಗಡೆಯಾಗಿದೆ. ಇವೆಲ್ಲವೂ ಬಿಜೆಪಿ ಸರ್ಕಾರ ಬಿಡುಗಡೆಯ ಅನುದಾನವಾದರೆ ಕಾಂಗ್ರೆಸ್ ಸರ್ಕಾರ ಯಾವುದೇ ಹೊಸ ಉತ್ಪಾದಕರಿಗೆ ಉತ್ತೇಜನ ನೀಡದೆ ರೈತರ ಉತ್ಪಾದಕತೆಗೆ ಕುಂಠಿತವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಹೊಸನಗರ, ಸಾಗರ ಸೊರಬ ಮಂಡಲ ಗಳಲ್ಲಿ ಪಶು ವೈದ್ಯಾಧಿಕಾರಿಗಳು ನಿರ್ಲಕ್ಷ ಅಸಮರ್ಪಕ ಗೈರು ರೈತರಿಗೆ ಪಶು ಅಸ್ಪತೆ ಗಳ ಸೇವೆ ಕುಂಟಿತ ವಾಗಿದೆ. ತಕ್ಷಣ ಜಿಲ್ಲೆಯಲ್ಲಿ ಟಿಕ್ಕಾಣಿ ಹೂಡಿರುವ ಗ್ರಾಮಗಳಿಗೆ ಮತ್ತು ಆಯಾ ಕೇಂದ್ರ ಸ್ಥಾನಗಳಿಗೆ ಕಳಿಸಿ, ಸಮರ್ಪಕ ಸೇವೆ ಒದಗಿಸಬೇಕಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.

ಆಹಾರ ಇಲಾಖೆ ಕಳೆದ ಮೂರು ತಿಂಗಳಿಂದ ಸರ್ವ ಸಮಸ್ಯೆಯಿಂದ ಬಳಲುತ್ತಿರುವ ಆಷ್ಮಾನ್ ಭಾರತ್ ಯೋಜನೆ ಪಡೆಯುವಲ್ಲಿ ರೋಗಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ವಿಷಯವನ್ನ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿಯು ಇನ್ನೂ ಸರ್ವರ್ ಗಳ ಸಮಸ್ಯಯನ್ನು ಸರಿಪಡಿಸದೆ ಇರುವುದು ಶೋನೀಯ ಹಾಗೂ ಖಂಡನಿಯ.

ತಕ್ಷಣದಿಂದ ರೈತರಿಗೆ ರೇಷನ್ ಕಾರ್ಡ್ ನೋಂದಣಿ ಹಾಗೂ ಆಷ್ಮಾನ್ ಆರೋಗ್ಯ ಸೇವೆಯನ್ನು ಪಡೆಯಲು ರೋಗಿಗಳಿಗೆ ತುರ್ತಾಗಿ ಸರ್ವರ್ ಒದಗಿಸಿಕೊಡಬೇಕಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ-https://suddilive.in/archives/15197

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು