ಸುದ್ದಿಲೈವ್/ಶಿವಮೊಗ್ಗ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮರ್ ಅವರ 64 ನೇ ಹುಟ್ಟುಹಬ್ಬವನ್ನ ರಾಜ್ಯಾದ್ಯಂತ ಆಚರಿಸಲಾಗಿದೆ. ಶಿವಮೊಗ್ಗದಲ್ಲೂ ಡಿಸಿಎಂ ಅವರ ಹುಟ್ಟುಹಬ್ಬವನ್ನ ಆಚರಿಸಲಾಯಿತು.
ಎನ್ ಎಸ್ ಯುಐವತಿಯಿಂದ ನಗರದ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬವನ್ನ ಆಚರಿಸಲಾಯಿತು. ಈ ವೇಳೆ ಎನ್ ಎಸ್ ಯು ಐನ ಜಿಲ್ಲಾಧ್ಯಕ್ಷ ವಿಜಯ್ ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರ್, ನಗರಾಧ್ಯಕ್ಷ ಚರಣ್, ಮಧು ಸೂಧನ್ ಚೇತನ್ ಮೊದಲಾದವರು ಉಪಸ್ಥಿತರಿದ್ದರು.
ಡಿಕೆಶಿ ಅಭಿಮಾನಿ ಬಳಗದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆದಿದೆ. ನಗರದ ಶುಭಂಹೋಟೆಲ್ ನಲ್ಲಿ ಡಿಕೆಶಿ ಅಭಿಮಾನಿ ಬಳಗ ಆರ್ ಮೋಹನ್ ವತಿಯಿಂದ ಜರುಗಿದೆ.
ಅದೇ ರೀತಿ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಡಿಕೆ ಶಿವಕುಮಾರ್ ಬ್ರಿಗೇಡ್ ಮತ್ತು ಐಎನ್ ಟಿಸಿಯು ಮಹಿಳಾ ಘಗಟಕದ ವತಿಯಿಂದ ಉಪಮುಖ್ಯಮಂತ್ರಿ ಅವರ 64 ನೇ ಹುಟ್ಟುಹಬ್ಬ ಆಚರಿಸಿಲಾಯಿತು.
ಡಿಕೆಶಿಯ ಫೋಟೊಗೆ ಹಾಲಿನ ಅಭಿಷೇಕ ಮಾಡಲಾಯಿತು. ನಂತರ ಪಟಾಕಿ ಸಿಡಿಸಿ ಸಹಿ ಹಂಚಲಾಯಿತು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ, ಐಎನ್ ಟಿಯಿಸಿ ಮಹಿಳಾ ಘಟಕದ ಕವಿತಾ ರಾಘವೇಂದ್ರ, ರಾಘವೇಂದ್ರ, ಪಾಲಾಕ್ಷಿ, ಭದ್ರಾವತಿಯ ರವಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/14789