Girl in a jacket

ಸಡಗರ ಸಂಭ್ರಮದ ಬಸವಜಯಂತಿ ಆಚರಣೆ

ಸುದ್ದಿಲೈವ್/ಶಿವಮೊಗ್ಗ

ಬಸವ ಜಯಂತಿಯನ್ನ ನಗರದ ಪ್ರಮಖ ಕೇಂದ್ರಗಳಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಕ್ಕಿನಕಲ್ಮಠದಲ್ಲಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳಿಂದ ಅಂಬಲಿ ದಾಸೋಹ ನಡೆದಿದೆ.

ರಸ್ತೆಯ ಮೇಲೆ ಟೇಬಲ್ ಇಟ್ಟು ಬ್ಯಾನರ್ ಕಟ್ಟಿ ಭಕ್ತರಿಗೆ ಹುಸಳಿಕಾಳು ಮತ್ತು ಅಂಬಲಿಯನ್ನ ಹಂಚಲಾಗುತ್ತಿದೆ. ಗಾಂಧಿ ಪಾರ್ಕ್ ಬಳಿ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಮಾಲಾರ್ಪಣೆ ಮಾಡಲಾಗಿದೆ.

ಕುವೆಂಪು ರಂಗ ಮಂದಿರಲ್ಲಿ ಬಸವ ಜಯಂತಿ ಮತ್ತು ಹೆಮ್ಮರೆಡ್ಡಿ ಮಲ್ಲಮ್ಮನ ಜಯಂತಿ ನಡೆಯಬೇಕಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಬಸವಣ್ಣನವರ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ನಡೆದಿದೆ. ಉತ್ಸವದ ಮೆರವಣಿಗೆ ಬಸವಕೇಂದ್ರದಿಂದ ಹೊರಟು ವೆಂಕಟೇಶ್ ನಗರದ 5 ನೇ ಅಡ್ಡರಸ್ತೆ, ಅನಕೃ ಅಡ್ಡರಸ್ತೆ ಮೂಲಕ ಬಸವಕೇಂದ್ರ ತಲುಪಿದೆ.

ಅದರಂತೆ 15 ಕಡೆ ಅಂಬಲಿ ದಾಸೋಹ ಮತ್ತು ಬಸವಕೇಂದ್ರದಲ್ಲಿ ರಾಮನವಮಿ ರೀತಿ ಬಸವ ಜಯಂತಿಯನ್ನ ಆಚರಿಸಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/14546

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು