Girl in a jacket

ಸಾಂಪ್ರದಾಯಿಕ ಮತಗಳಿಗೆ ನೋವಾಗಿದೆ ಹಾಗಾಗಿ ಪದವೀಧರ ಕ್ಷೇತ್ರಕ್ಕೆ ಸ್ಪರ್ಧೆ-ಕೆರಘುಪತಿ ಭಟ್

ಸುದ್ದಿಲೈವ್/ಶಿವಮೊಗ್ಗ

2004 ಮತ್ತು 2008 ರಲ್ಲಿ ಶಾಸಕನಾದೆ 2013 ರಲ್ಲಿಟಿಕೇಟ್ ತಪ್ಪಿತು. 2018 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು ಬಂದು ಮತ್ತೆ ಇತಿಹಾಸ ನಿರ್ಮಿಸಿದ್ದೆ. ಅಲ್ ಟೈಮ್ ಅವೆಲೆಬಲಿಟಿ ಶಾಸಕನಾಗಿರುವೆ ಎಂದು ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತನೀಡಿದ ವಿಶ್ವಾಸದಮೇಲೆ ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿರುವೆ. ಶಿವಳ್ಳಿ ನಗರಸಭೆ ಸಧಸ್ಯನಾಗಿ ಯುವಮೋರ್ಚದಲ್ಲಿ 1994 ರಿಂದ ಬಿಜೆಪಿಯಲ್ಲಿ ಸಕ್ರೀಯವಾಗಿ ತೊಡಗಿದ್ದೇನೆ ಎಂದರು.

1999 ರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿದ್ದೇನೆ. ಉಡುಪಿಯಲ್ಲಿ ಕಂಜೆಸೆನ್ ಸಿಟಯಾಗಿತ್ತು. ಒಂದೇ ರಸ್ತೆ ಇತ್ತು. ವಿ.ಎಸ್ ಆಚಾರ್ ನೇತೃತ್ವದ ಹೋರಾಟದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುಕೂಲವಾಗಿತ್ತು. ಉಪ್ಪುನೀರು ತಡೆಗಟ್ಟುವ ಚಳುವಳಿಯನ್ನೂ ತಾರ್ಕಿಕ ಅಂತ್ಯ ಕಾಣುವ ವರೆಗೆ ಹೋರಾಟ ಮಾಡಿರುವೆ ಎಂದರು.

ವಿಶೇಷವಾಗಿ ಎಂದರೆ ಬೀಡುಬಿಟ್ಟ ಹೊಲದಲ್ಲಿ ಕೃಷಿ ಆಂದೋಲನ, ನಡೆಸಿರುವುದು ಯಶಸ್ವಿ ನೀಡಿದೆ 2020 ರಲ್ಲಿ ನಿಟ್ಟೂರು ಹೈಸ್ಕೂಲ್ ಸಮಾರಂಭದ ಕಾರ್ಯಕ್ರಮದಲ್ಲಿ 50 ಎಕರೆಯಲ್ಲಿ ಸಾವಯವ ಕೃಷಿ ಭೂಮಿ ಮಾಡುವ ನಿರ್ಣಯಿಸಿ 252 ಕಿಮಿ‌ ಉದ್ದದ ತೋಡನ್ನ ನಿರ್ಮಿಸಲಾಯಿತು. ಕೃಷಿಗೆ ದಕ್ಷಿಣ ಕನ್ನಡದಲ್ಲಿ ತೋಡು ಬಹುಮುಖ್ಯ ಪಾತ್ರವಹಿಸುತ್ತದೆ.

ಇದರಿಂದ ನಂತರ 1½ ಸಾವಿರ ಗದ್ದೆಯಲ್ಲಿ ನಡೆದ ಕೃಷಿ. ರಾಷ್ಟ್ರೀಯ ಮಟ್ಟದ ಆಂದೋಲನವಾಯಿತು. ಸಿನಿಮಾನಟ‌ನಟಿಯರು, ಮಠಾಧೀಶರು, ಮೌಲ್ವಿಗಳು, ಬಿಷಪ್ ಗಳು ಭಾಗಿಯಾಗಿದ್ದರು. 800 ಟನ್ ಬೆಳೆದೆವು. ಸ್ವಯಂ ಸೇವಕರ ತಂಡದ ಮೂಲಕ ಕೆಲಸ ಮಾಡಿದೆವು. ಟಿಎಂಐ ಆಸ್ಪತ್ರೆಯಲ್ಲಿ 200 ಬೆಡ್ ನಿರ್ಮಿಸಲಾಯಿತು. ಹೀಗೆ ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ತೀರ್ಮಾನ ಕೈಗೊಳ್ಳಲಾಯಿತು.

ಈ ರೀತಿ ಕ್ರಿಯಾಶೀಲನಾಗಿ ಕೆಲಸ ಮಾಡಿಕೊಂಡು ಬಂದಿರುವೆ, ಸಂಕಷ್ಟ ಬಂದಾಗ ಜನರೊಂದಿಗೆ ಇದ್ದವನು ನಾನು. ಯಾರನ್ನೋ ಸೋಲಿಸುವುದು ಸೇಡು ತೀರಿಸಿಕೊಳ್ಳಲು ಪದವೀದರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿಲ್ಲ. ರಾಜಕೀಯದಲ್ಲಿ ಸಕ್ರಿಯನಾಗಿರಲು ಬಯಸಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.

ಮೂರು ಬಾರಿ ಶಾಸಕನಾದರೂ, ಅಧಿಕಾರವನ್ನ‌ ಕೇಳಿ ಪಡೆದಿಲ್ಲ.ಲಾಭಿಮಾಡಿ ಹುದ್ದೆ ಕೇಳಿಲ್ಲ. ಆಯನೂರು ಮಂಜುನಾಥ್ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಆ ಸ್ಥಾವನ್ನ ಕೇಳಿದ್ದೆ. ಟಿಕೇಟ್ ಕೊಡುವುದಾಗಿಹೇಳಿ ಭರವಸೆ ನೀಡಿದರು. ನಂತರ ಟಿಕೇಟ್ ನೀಡಲಿಲ್ಲ.

ಅನೇಕರು ಕರೆ ಮಾಡಿದರು. ಪಕ್ಷದ ವಿರುಧ್ಧ ನಿಂತಿಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯಿಂದ ಚುನಾವಣೆಗೆ ಇಳಿದಿರುವೆ. ಸರ್ಕಾರಿ ನೌಕರರ ಬೇಡಿಕೆ ಇದೆ. ಒಪಿಎಸ್ ಬೇಡಿಕೆ ಇದೆ. ಇದನ್ನ ವಿಶೇಷವಾಗಿ ವಿಧಾನ ಪರಿಷತ್ ಒಳಗೆ ಧ್ವನಿಯಾಗಬೇಕಿದೆ ಎಂದರು.

ಸಿಆರ್ ಜೆಡ್ ಮರಳನ್ನ ನಮ್ಮ ಕ್ಷೇತ್ರಕ್ಕೆ ತರುವ ಹೋರಾಟ ಮಾಡಿ ಯಶಸ್ವಿಯಾಗಿರುವೆ. ನಾನು ಪದವೀಧರ ಕ್ಷೆತ್ರಕ್ಕೆ ಸ್ಪರ್ಧಿಸುತ್ತಿರುವೆ. ಚಿಹ್ನೆಯೆದುರು ಸ್ಪರ್ಧಿಸುತ್ತಿಲ್ಲ. ಕೆಲಸಗಳನ್ನ‌ ವಿನೂತನ ರೀತಿಯಲ್ಲಿ ಮಾಡುತ್ತಿರುವೆ. ಪರಿಷತ್ ಸದಸ್ಯನಾದರೂ ಏನೇನು ಕೆಲಸ ಅಗತ್ಯವಿದೆಯೋ ಅದನ್ನ ಮಾಡುವೆ ಎಂದು ವಿವರಿಸಿದರು.

ಗೆದ್ದ ನಂತರಬಿಜೆಪಿಯ ಶಾಸಕನಾಗಿ ಕೆಲಸ ಮಾಡುವೆ. ಸೋತರೆ ಪಕ್ಷದ ಕಾರ್ಯಕರ್ತನಾಗಿ ಮುಂದುವರೆಯುವೆ. ನಾನುಕೆಲಸ ಮಾಡಲು ಪರಿಷತ್ ಸದಸ್ಯನಾಗಬೇಕು. ಹಾಗಾಗಿ ಸ್ಪರ್ಧೆ ಬಯಸಿರುವೆ. ಪಕ್ಷದ ಎಲ್ಲಾ ನಾಯಕರ ಬಗ್ಗೆ ಅಭಿಮಾನವಿದೆ. ಆದರೆ ಮೋಸ ಆಗಿದೆ. ಬಕೆಟ್ ಹಿಡಿಯುವ ಸಂಸ್ಕೃತಿ ನನ್ನ ಹತ್ತಿರಯಿಲ್ಲ. ಈಗ ಪಕ್ಷದಲ್ಲಿ ಗಣಪತಿ ಮತ್ತು ಷಣ್ಮುಖನ ಪರಿಸ್ಥಿತಿ ಇದೆ. ನಾನು ಗಣಪತಿಯಲ್ಲ ಷಣ್ಮುಖನಾಗಿರುವೆ ಹಾಗಾಗಿ ಈ ಹಿಂದೆ ಮೋಸವಾಗಿದೆ. ಚುನಾವಣೆಯಲ್ಲಿ ಗೆದ್ದು ಸರಿಪಡಿಸಬೇಕಿದೆ ಎಂದರು.

ಈಶ್ವರಪ್ಪನವರು ಪಕ್ಷದಿಂದ  ಹೊರಗೆ ಬಂದು ಸ್ಪರ್ಧಿಸಿದರು. ಬಿಜೆಪಿಗೆ ಹಳೆಯ ಪದ್ದತಿ ಬರಬೇಕು. ಹಿರಿಯರ ಸಲಹೆ ಐವಾಶ್ ರೀತಿಯಾಗಿದೆ. ಕಾರ್ಯಕರ್ತರ ಅಭಿಪ್ರಾಯಗಳಿಗೆ ಒಮ್ಮತವಿಲ್ಲ. ಡಾ.ಸರ್ಜಿ ಇದುವರೆಗೂ ಬಂದು ಮಾತನಾಡಿಸಲಿಲ್ಲ. ನನ್ನ ಸ್ಪರ್ಧೆಯಿಂದ ಸರಿಯೋ ತಪ್ಪೋ ನಿರ್ಧಾರವಾಗುತ್ತದೆ ಎಂದರು.

ಸ್ವಾಭಾವಿಕವಾಗಿ ನೈರಯತ್ಯ ಪದವೀಧರ ಕ್ಷೇತ್ರಕ್ಕೆ ಘಟ್ಟದ ಮೇಲಿನ ಜನರಿಗೆ ಟಿಕೇಟ್ ನೀಡಿದರೆ ಶಿಕ್ಷಕರ ಕ್ಷೇತ್ರವನ್ನ ಘಟ್ಟದ ಕೆಳಗಿನವರಿಗೆ ನೀಡಬೇಕು. ಶಿಕ್ಷಕರ ಕ್ಷೇತ್ರವನ್ನ ಮೈತ್ರಿಗೆ ನೀಡಲಾಗಿದೆ. ಸ್ವಾಭಾವಿಕವಾಗಿ ಪದವೀಧರ ಕ್ಷೇತ್ರ ಘಟ್ಟದ ಕೆಳಗಿನವರಿಗೆ ಸಿಗಬೇಕಿತ್ತು. ವಿಕಾಸ ಪುತ್ತೂರಿಗೆ ಅಥವಾ ಭಂಡಾರಿಗೆ ಕೊಟ್ಟಿದ್ದರೆ ನಾನು ಬಂಡಾಯ ಏಳುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು