Girl in a jacket

ಸಿಎಂ ಸಿದ್ದರಾಮಯ್ಯನವರು ವಿಧಾನ ಸಭೆ ಚುನಾವಣೆ ಗುಂಗಿನಿಂದ ಹೊರಬಂದಿಲ್ಲ-ಬಿಎಸ್ ವೈ

ಸುದ್ದಿಲೈವ್/ಶಿವಮೊಗ್ಗ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದೆ 28 ಲೋಕಸಭ ಕ್ಷೇತ್ರದ ಪೈಕಿ 14 ಸ್ಥಾನದಲ್ಲಿ ಚುನಾವಣೆ ಮುಗಿದಿದೆ. 14‌ಕ್ಕೆ 14 ಲೋಕಸಭಾ ಕ್ಷೇತ್ರವನ್ನ ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 14 ಕ್ಷೇತ್ರಗಳಲ್ಲಿ ಶೇ. 69.56 ಶೇಕಡ ನಡೆದಿದೆ. ಶೇ. 81.67, ಮಂಡ್ಯದಲ್ಲಿ ಮತದಾನವಾಗಿದೆ. ಮತದಾರರಲ್ಲಿ ಮೋದಿಯವರ ಬಗ್ಗೆ ಇರುವ ಒಳ್ಞೆಯ ಅಭಿಪ್ರಾಯ ಮತ್ತು ಹಂಬಲ ಈ ಮತದಾನ ಹೆಚ್ಚಾಗುವಂತೆ ಮಾಡಿದೆ. ಎರಡನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ ದೇಶದಲ್ಲಿ ಇದು ಮೂರನೇ ಹಂತದ ಚುನಾವಣೆಯಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಐದು ಸಮಾವೇಶ ನಡೆಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ತಮಿಳುನಾಡಿದ ಬಿಜೆಪಿ ಅಧ್ಯಕ್ಷ‌ ಅಣ್ಣಮಲೈ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಿದ್ರಾಮಯ್ಯ ವಿಧಾನ ಸಭಾ ಚುನಾವಣೆಯ ಗುಂಗಿನಿಂದ ಹೊರ ಬಂದಿಲ್ಲ ಎಂದರು.

ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂದು ಅವರ ಗಮನದಲ್ಲಿ ಇದ್ದಂಗೆ ಕಾಣುತ್ತಿಲ್ಲ. ಸಿದ್ದರಾಮಯ್ಯ ಕೇಂದ್ರ ಸರ್ಕಾರ ವಿರುದ್ಧ ಮಾತನಾಡಿ ಅದರ ಮೂಲಕ ವಿರೋದಿ ಅಲೆಯಿಂದ ಮತ ಪಡೆಯಲು ಮುಂದಾಗಿದ್ದಾರೆ. ಅವರ ನಾಯಕರು ಯಾರು ಪ್ರಧಾನಿ ಆಗಲಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರಲ್ಲಿ ಗೊಂದಲ‌ಮೂಡಿದೆ ಎಂದರು.

ಬಿಜೆಪಿ ಗುರಿ ಸ್ಪಷ್ಟವಿದೆ. 2 ಕೋಟಿ ಹುದ್ದೆ ಕೊಟ್ರಾ ಎಂಬುದು ಕಾಂಗ್ರೆಸ್ ಪದೇ ಪದೇ ಪ್ರಶ್ನಿಸಿದೆ. 2014 14.54 ಭವಿಷ್ಯ ನಿದಿ ಇತ್ತು 2022 ರಲ್ಲಿ ಅದು ಶೇ 22 ಕ್ಕೆ ಏರಿಕೆಯಾಗಿದೆ. 7 ಕೋಟಿ ಹುದ್ದೆ ಹೆಚ್ಚಾಗಿದೆ ಎಂದ ಮಾಜಿ ಮುಖ್ಯಮಂತ್ರಿಗಳು. ಕಾಂಗ್ರೆಸ್ ಸರ್ಕಾರ ತುಷ್ಠೀಕರದ ಚುನಾವಣೆ ಮಾಡುತ್ತಿದೆ. ಸಂವಿಧಾನವನ್ನ ದಿಕ್ಕರಿಸಿ, ಅಂಬೇಡ್ಕರ್ ಅವರನ್ನ ದಿಕ್ಕರಿಸಿ ಮುಸ್ಲೀಂರಿಗೆ ಮೀಸಲಾತಿ ನೀಡಲು ಮುಂದಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದವರ ಮತ್ತು ಒಬಿಸಿಯ ಮೀಸಲಾತಿ ಅಪಾಯಕ್ಕೆ ಸಿಲುಕಲಿದೆ. ಇದು ತುಷ್ಠೀಕರಣದ ರಾಜಕೀಯ ಎಂದರು. ಮುಸ್ಲೀಂರಿಗೆ ಆಸ್ತಿ ಕೊಡಲು ಕಾಂಗ್ರೆಸ್ ಯೋಜಿಸಿತ್ತು. ಅದನ್ನೇ ಮುಂದು ವರೆಸಿಕೊಂಡು ಬಂದಿದ್ದಾರೆ. ಬರವಿದೆ ರೈತ ಸಂಕಷ್ಟದಲ್ಲಿದ್ದಾನೆ. 26,395 ಕೋಟಿ ಎಸ್ ಟಿ ಗೆ ಮೀಸಲಿಟ್ಟ ಹಣವನ್ನ‌ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ ಎಂದರು.

INDIA ಒಕ್ಕೂಟ ಗೆದ್ದರೆ ದೇಶದ ಪ್ರಧಾನಿಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದವರಿಗೆ ಜನ ಬೆಂಬಲಿಸಬೇಕಾ? ಕಾಂಗ್ರೆಸ್ ಹಿಂದುಳಿದ ಜನರನ್ನ ಅದೋಗತಿಗೆ ತಳ್ಳುವ ಮುನ್ಸೂಚನೆ ಇದೆ.‌ ನೇಹಾ ಹತ್ಯೆ, ಸ್ವಾಮೀಜಿಗಳ ಮೇಲೆ ಹಲ್ಲೆ ನಡೆಸುವವರ ಮೇಲೆ ಕಾಂಗ್ರೆಸ್ ಬೆಂಬಲಿತವಾಗಿದೆ. ಇವುಗಳ ಮೂಲಕ ಕಾಂಗ್ರೆಸ್ ತನ್ನ ಕಾಲಿನ‌ಮೇಲೆ ಕಲ್ಲು ಎತ್ತು ಹಾಕಿಕೊಂಡಿದೆ ಎಂದು ಸಹ ಆರೋಪಿಸಿದರು.

ಕಾಂಗ್ರೆಸ್ ನಲ್ಲಿ ಮೂರು ಬಣಗಳಿವೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಬಣ ಡಿಕೆಶಿ ಬಣ ಎಂಬ ಮೂರು ಬಣವಿದೆ. ಯುವರಾಜ ರಾಹುಲ್ ಕ್ಷೇತ್ರ ಬಿಟ್ಟು ಕ್ಷೇತ್ರಕ್ಕೆ ವಲಸೆ ಹೋಗುತ್ತಿದ್ದಾರೆ. ಮಗನಿಗೆ ರಾಯ್ ಬರೇಲಿ ಕ್ಷೇತ್ರ ಬಿಟ್ಟುಕೊಟ್ಟ ಸೋನಿಯಾಗಾಂಧಿ ರಾಜ್ಯಸಭೆ ಸದಸ್ಯರಾಗಿದ್ದಾರೆ. ರಾಯ್ ಬರೇಲಿಯಲ್ಲಿ ರಾಹುಲ್ ಸೋಲು ಖಚಿತ ಎಂದರು.

ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ 28 ಸ್ಣಾನ ಗೆಲ್ತೀವಿ. ಗ್ಯಾರೆಂಟಿಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಜನರೂ ಸಹ ತಲೆ ಕೆಡೆಸಿಕೊಳ್ತ ಇಲ್ಲ. ಮೋದಿ ಗ್ಯಾರೆಂಟಿ ಬಗ್ಗೆ ಜನ ನಂಬಿದ್ದಾರೆ. ಸೊರಬದಲ್ಲಿ ನಡೆದ ನಿನ್ನೆ ಸಮಾವೇಶದಲ್ಲಿ 25 ಸಾವಿರ ಜನ ಸೇರಿದ್ದಾರೆ. 100 ಕ್ಕೆ 25 ಭಾಗ ಮಹಿಳೆಯರು ಭಾಗಿಯಾಗಿದ್ದಾರೆ ಎಂದರು.

ಈಶ್ವರಪ್ಪನವರ ಸ್ಪರ್ಧೆ ಪರಿಣಾಮ ಬೀರುತ್ತಾ? ಎಂದ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ ದಯಮಾಡಿ ಕ್ಷಮಿಸಿ ನಾನು ಯಾವ ಅಭ್ಯರ್ಥಿ ವಿರುದ್ಧ ಮಾತನಾಡೊಲ್ಲ. ಪ್ರಜ್ವಲ್ ರೇವಣ್ಣರ ಪ್ರಕರಣ ಮೈತ್ರಿ ಗೆಲುವಿಗೆ ಅಡ್ಡಿಯಾಗಲ್ಲ. ದೇವೇಗೌಡರು ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳದೆ ಆರೋಗ್ಯ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಸಂಸದ ರಾಘವೇಂದ್ರ,  ಚಾಮರಾಜ್ ನಗರದ ಅಭ್ಯರ್ಥಿ, ಎ ಬಾಲರಾಜ್, ಶಾಸಕ ಚೆನ್ನಬಸಪ್ಪ, ಭಾನುಪ್ರಾಶ್, ಸಿದ್ದರಾಮಣ್ಣ, ರುದ್ರೇಗೌಡ. ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/14234

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು