
ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಬೆಂಗಳೂರು-ಕುಂದಾಪುರ KSRTC ಬಸ್ ನಲ್ಲಿ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಹುಲಿಕಲ್ ಘಾಟ್ ನಲ್ಲಿ ಬಸ್ ಏಕಾಏಕಿ ನಿಂತ ಪರಿಣಾಮ ಪ್ರಯಾಣಿಕರು ಒದ್ದಾಡುವಂತೆ ಆಗಿದೆ.
ಆಗಿದ್ದೇನು?
ಬೆಂಗಳೂರಿನಿಂದ ಶಿವಮೊಗ್ಗ ಮೂಲಕ ಕುಂದಾಪುರಕ್ಕೆ ಸೇರುವ KSRTC ಬಸ್ ನಿನ್ನೆ 5-20 ರ ಸಮಯದಲ್ಲಿ ಹುಲಿಕಲ್ ಘಾಟ್ ಬಳಿ ಏಕಾಏಕಿ ನಿಂತಿದೆ. ಚಾಲಕ ನಿರ್ವಾಹಕರು ಕೇಳಿದರೆ ಡಿಸೇಲ್ ಖಾಲಿ ಎಂದು ಹೇಳುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದರು.
ಇದೇ ವೇಳೆ ಪ್ರಯಾಣಿಕರ ನೆರವಿಗೆ ಬಂದ ಬಿಜೆಪಿಯ ಯುವ ಮುಖಂಡ ನಗರ ನಿತಿನ್ ಕುಂದಾಪುರ ಡಿಪೊ ಮ್ಯಾನೇಜರ್ ಗೆ ಮೊಬೈಲ್ ಕರೆ ಮಾಡಿದ್ದಾರೆ. ಇಂಧನದ ಸಮಸ್ಯೆನಾ ಎಂದು ಪ್ರಯಾಣಿಕರು ದೂರಿದ್ದಾರೆ. ಡಿಪೋ ಮ್ಯಾನೇಜರ್ ಇಂಧನದ ಸಮಸ್ಯೆ ಅಲ್ಲ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ 98 ಪ್ರಯಾಣಿಕರನ್ನ ಹೊತ್ತ ksrtc ಬಸ್ ನ ಪ್ರಯಾಣಿಕರು ಸುಮಾರು ಒಂದು ವರೆ ಗಂಟೆಯ ನಂತರ ಬದಲೀ ಬಸ್ ನಲ್ಲಿ ಪ್ರಯಾಣಿಸುವಂತೆ ಆಗಿದೆ. ಅಲ್ಲಿಯ ವರೆಗೂ ಪ್ರಯಾಣಿಕರನ್ನ ಸುರಕ್ಷಿತೆಗೆ ನಿಂತಿದ್ದು ಬಿಜೆಪಿಯ ಯುವ ಮುಖಂಡ ನಗರದ ನಿತಿನ್.
ತೊಂದರೆ ಆಗಿದ್ದೇ ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರಿಗೆ
ಬಸ್ ನಲ್ಲಿ ತೊಂದರೆ ಆಗಿದ್ದೇ ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರಿಗೆ. ಸುಮಾರು 30 ಜನರಿದ್ದ ಮಹಿಳಾ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. KSRTC ಬಸ್ ನ ಶಕ್ತಿ ಯೋಜನೆಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ತೊಂದರೆಗೊಳಪಟ್ಟಿದ್ದಾರೆ.
ಮತ್ತೊಂದು KSRTC ಬಸ್ ಬರುವ ತನಕ ಹುಲಿಕಲ್ ಘಾಟಿಯ ನಸುಕಿನಲ್ಲಿ ಒದ್ದಾಡುವಂತಾಗಿದೆ. ಇದೇ ಬಸ್ ಒಂದೇ ತಿಂಗಳಲ್ಲಿ ಈ ರೀತಿ ಕೆಟ್ಟು ನಿಲ್ಲುತ್ತಿದ್ದಿದ್ದು ಇದು ನಾಲ್ಕನೇ ಬಾರಿ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ-https://suddilive.in/archives/15322