ಮಂಗಳವಾರ, ಜೂನ್ 18, 2024

ಮಾಧ್ಯಮಗಳಿಗೆ ಮಾಹಿತಿ ನೀಡದೆ ಪಾಲಿಕೆ ಆಯುಕ್ತರ ಅಧಿಕಾರ ಸ್ವೀಕಾರ!?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ನಗರ ಪಾಲಿಕೆ ಆಯುಕ್ತರಾಗಿ ಕವಿತಾಅರೆಅ ಯೋಗಪ್ಪನವರ್ ಅಧಿಕಾರ ಸ್ವೀಕರಿಸಿದ್ದಾರೆ. ಪಾಲಿಕೆ ಆಯುಕ್ತ ಮಾಯಣ್ಷ ಗೌಡ ಅವರು ಹೂವಿನ ಗುಚ್ಚ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದ್ದಾರೆ.

ಕಳೆದವಾರ ಹಿಂದಷ್ಟೆ ಬಿಬಿಎಂಪಿಯ ಭೂಸ್ವಾಧೀನ ಅಧಿಕಾರಿ ಆಗಿದ್ದ  ಕವಿತಾ ಯೋಗಪ್ಪನವರ್ ಇಂದು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ದಕ್ಷ ಅಧಿಕಾರಿಯಾಗಿದ್ದ  ಮಾಯಣ್ಣ‌ಗೌಡರ್ ಅವರು ತವರು ಇಲಾಖೆಗೆ ವಾಪಾಸಾಗಲಿದ್ದಾರೆ.

ಮೀಡಿಯಾಗೆ ಕರೆ ಇಲ್ಲ

ಅಧಿಕಾರ ಸ್ವೀಕಾರದ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ ಮಾಧ್ಯಮಗಳಿಗೆ ಹೊರಗಿಟ್ಟು ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆದಿದೆ. ಈ ಅಧಿಕಾರಿಯ  ಅಧಿಕಾರ ಸ್ವೀಕಾರ ಕಾರ್ಯಕ್ರಮ ಒಂದೇ ಹೀಗೆ ನಡೆಯುತ್ತಿದೆ ಎಂದು ಹೇಳುತ್ತಿಲ್ಲ. ಎಸ್ಪಿ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮವೊಂದನ್ನ ಹೊರತು ಪಡಿಸಿ ಉಳಿದ ಎಲ್ಲಾ ಅಧಿಕಾರಿಗಳ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿರುವುದು ಮಾಧ್ಯಮವನ್ನ ಹೊರಗಿಡುವ ಪ್ರಯತ್ನವೂ ಒಂದಾಗಿದೆ.

ಅಧಿಕಾರ ಸ್ವೀಕಾರದ ನಂತರ ಒಂದು ಫೋಟೊ ಕಳುಹಿಸಲಾಗುತ್ತದೆ. ಅದನ್ನೇ ಸುದ್ದಿ ಮಾಡುವ ದುಸ್ಥಿತಿ ಮಾಧ್ಯಮಗಳಿಗೆ ಬಂದೊದಗಿದೆ. ಇನ್ನೂ ಸಾರ್ವಜನಿಕರ ಜೊತೆ ಅಧಿಕಾರಿಗಳು ಹೇಗೆ ನಡೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ. ವಾರ್ತಾ ಇಲಾಖೆಯಲ್ಲೂ ಮಾಹಿತಿ ನೀಡದೆ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆದಿದೆ ಎಂದರೆ ಮಾಧ್ಯಮಗಳ ಬಗ್ಗೆ ಅಸಡ್ಡೆ ಎದ್ದುತೋರುತ್ತದೆ.

ಇದನ್ನೂ ಓದಿ-https://suddilive.in/archives/17152

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ