Girl in a jacket

ಶಾಂತಿ ಸಭೆಯಲ್ಲಿ ಏನೆಲ್ಲಾ ನಡೆಯಿತು

ಸುದ್ದಿಲೈವ್/ಶಿವಮೊಗ್ಗ

ಜೂ.17 ರಂದು ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಣೆ ನಡೆಸಲಾಗುತ್ತಿದೆ. ಹಬ್ವದ ವೇಳೆ ಅಹಿತಕರ ಘಟನೆ ನಡೆಯದಂತೆ ಶಿವಮೊಗ್ಗದ ಡಿಎಆರ್ ಹಾಲ್ ನಲ್ಲಿ ಡಿಸಿ ಗುರುದತ್ತ ಹೆಗಡೆ ಮತ್ತು ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ.

ಸಭೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ನಡೆಯುವ ಕುರುಬಾನಿ ಸಂವಿಧಾನದ ಪ್ರಯುಕ್ತ ನಡೆಯುವಂತೆ ಹಾಗೂ ಇಲ್ಲಿನ ನಾಯಕರು ಸ್ಥಳದಲ್ಲಿ ಗಲಭೆಯಾದರೆ ಜವಬ್ದಾರಿ ಎತ್ತುಕೊಳ್ಳುವಂತೆ ಹಿಂದೂ ಸಂಘಟನೆಯ ಮುಖಂಡ ರಮೇಶ್ ಬಾಬು ಆಗ್ರಹಿಸಿದರು.

ಅಂಜುಮಾನ್ ಸಂಸ್ಥೆಯ ಮುಖಂಡರಾದ ಮುರ್ತುಜಾ ಖಾನ್ ಭದ್ತಾವತಿ ಅವರು ಮಾತನಾಡಿ, ಪ್ರವಾದಿಯವರ ಕಾಲದಲ್ಲಿ ಮಗನಿಗೆ ಬಲಿಕೊಡಲಾಗಿತ್ತು. ಅದು ಈಗ ಕುರಿಯ ಮೂಲಕ ಬಲಿಕೊಡಲಾಗುತ್ತಿದೆ. ಭದ್ರಾವತಿಯಲ್ಲಿ 8-30 ರಂದು ಹಬ್ಬದ ಪ್ರಾರ್ಥನೆ ನಡೆಯಲಿದೆ ಎಂದರು.

ಹಬ್ಬದಲ್ಲಿ ನೀರಿನ್ನ ಹೆಚ್ಚಿನ ಅವಧಿಯವರೆಗೆ ಒದಗಿಸುವಂತೆ ಹಾಗೂ ಭದ್ರಾವತಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ನಮ್ಮ ಸಹಕಾರವಿದೆ. ಹಿಙದೂ ಮಹಾಸಭ ಗಣಪತಿಯ ಸಮಿತಿ ಸಹ ಈ ಹಬ್ಬಕ್ಕೆ ಸಹಕಾರವಿದೆ. ಮಿಲಾದ್ ಹಬ್ಬ ಬದಲಾಯಿಸಲು ಅವಕಾಶವಿಲ್ಲ.‌ ಹಬ್ಬವನ್ನ ನಿಗದಿತ ದಿನಾಂಕದಂತೆ ನಡೆಸಿ ಮೆರವಣಿಗೆ ದಿನ ಬದಲಾಯಿಸಲಾಗಿದೆ ಎಂದರು.

ರಂಜಾನ್ ಹಬ್ಬದಲ್ಲಿ ಬಲಿದಾನವಿರಲ್ಲ. ಆದರೆ ಬಕ್ರೀದ್ ಹಬ್ವದಲ್ಲಿ ಇದೆ. ಅನ್ಯಕೋಮಿನನವರಿಗೆ ತೊಂದರೆ ಆಗದಂತೆ ಕುರುಬಾನಿ ಮತ್ತು ನಮಾಜ್ ಗೆ ತೊಂದರೆ ಆಗದಂತೆ ಹಬ್ಬ ಆಚರಣೆ ನಡೆಯುತ್ತೆ. ಸಣ್ಣಪುಟ್ಟ ಸಮಸ್ಯೆ ಕಙಡರೂ ಅನ್ಯ ಕೋಮಿನವರು ಸಹಕರಿಸುವಂತೆ ಭದ್ರಾವತಿಯ ಮುಸ್ಲೀಂ ಮುಝಂಡರು ತಿಳಿಸಿದರು.

ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ನೀರನ್ನ ಹೆಚ್ಚು ಮುತವರ್ಜಿಯಿಂದ 20-25 ಟ್ಯಾಂಕ್ ನ್ನ ಸಿದ್ದಪಡಿಸಿಕೊಳ್ಳಲಾಗಿದೆ. ಯಾವ ಮೊಹಲ್ಲಾ ಗಳಿಗೆ ನೀರು ಬೇಕು ಅಲ್ಲಿ ಒದಗಿಸಲಾಗುವುದು. ದೂರ ಸಂಪರ್ಕದಲ್ಲಿ ಸಹಕರಿಸಿದರೆ ಟ್ಯಾಂಕರ್ ಒದಗಿಸಲಾಗುವುದು ಎಂದರು.

ಸಿದು ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ನೀರು ಹೊರತು ಪಡಿಸಿ ಈ ಟ್ಯಾಂಜರ್ ಒದಗಿಸಲಾಗುವುದು. ಪೌರಕಾರ್ಮಿಕರಿಗೆ ರಜಾ ಇದ್ದರೂ ಅದನ್ನ ಬದಲಾಯಿಸಲಾಗುತ್ತಿದೆ. ಸ್ವಚ್ಛತೆಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಸಂಭ್ರಮ ಮತ್ತು ಸಡಗರದಿಂದ ಹಬ್ಬ ಮಾಡೋಣ ಎಂದರು.

ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ಹಬ್ಬ ಆಚರಣೆಯನ್ನ ವಿಜೃಂಭಣೆಯನ್ನ ಮಾಡಬೇಕು. ಯಾರು ಹಬ್ಬ ಮಾಡೊಲ್ಲ ಹಬ್ಬ ಮಾಡುವರಿಗೆ ಸಹಕರಿಸೋಣ. ಸಭೆಕರೆದಿರುವ ಉದ್ದೇಶ ನಿಮ್ಮ‌ಮಸೀದಿ ದೇವಸ್ಥಾನದಲ್ಲಿ ಸಂದೇಶ ಕಳುಹಿಸಲಿ ಎಂದು ನಡೆಸಲಾಗುತ್ತಿದೆ.

ಈಗಾಗಲೇ ಮೊಹಲ್ಲಾ ಸಭೆ ನಡೆಸಲಾಗುತ್ತಿದೆ. ಅದನ್ನ ಸೂಕ್ಷಗಮ ಪ್ರದೇಶದಲ್ಲಿ ನಡೆಸಲಾಗುತ್ಯಿದೆ. ಕುರುಬಾನಿ ನೀಡುವ ವೇಳೆ ಸಾರ್ವಜನಿಕ ಸ್ಥಳದಲ್ಲಿ ನಡೆಸಬಾರದು. ಅದನ್ನ‌ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಇದನ್ನ ನಡೆಸದಂತೆ ಮನವಿ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಹರಿಬಿಡದಂತೆ, ಜೂ.17,18,19 ರ ವರೆಗೆ ಹಬ್ಬನಡೆಯಲಿದೆ. ಕಳೆದ ಬಾರಿಯ ಹಬ್ವದ ವೇಳೆ ಶಿಕಾರಿಪುರ ತಾಲೂಕಿನಲ್ಲಿ ಸಮಸ್ಯೆಯಾಗಿತ್ತು. ಕಳೆದ ಮೂರು ವರ್ಷದಿಂದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬೈಂಡ್ ಓವರ್ ಮಾಡಲಾಗಿದೆ.‌

213 ಜಾಗಗಳಲ್ಲಿ ಮಸೀದಿ ಮತ್ತು ಈದ್ಗಾ ಮೈದಾನದಲ್ಲಿ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಸಹಕಾರ ಬೇಕು ನಾವು ಕೊಡ್ತೀವಿ ಎಂಬ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಗುರುತ್ತ ಹೆಗಡೆ ಮಾತನಾಡಿ, ಹಬ್ಬವನ್ನ ಜೊತೆಗೆ ಆಚರಿಸೋಣ ಒಂದು ಕೋಮು ಆಚರಿಸಿದರೆ ಮತ್ತೊಂದು ಕೋಮು ರಕ್ಷಣೆ ಮೂಲಕ ಹಬ್ವದಲ್ಲಿ ಪಾಲ್ಗೊಳ್ಳುವಂತಾಗಲಿ. ಜಿಲ್ಲಾಡಳಿತದಿಂದ ಹಬ್ಬ ಆಚರಣೆಗೆ ಸಂಪೂರ್ಣ ಬೆಂಬಲವಿದೆ. ಯುವಕರಿಗೆ ತಿದ್ದಿಬುದ್ದಿವಾದ ಹೇಳಿ. ಸಮಸ್ಯೆ ಇದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ. ಅದನ್ನ‌ ಏಕಾಏಕಿ ಸಾಮಾಜಿಕ ಜಾಲತಾಣದಿಂದ ಹರಿಬಿಡಬೇಡಿ ಎಂದು ಮನವಿ ಮಾಡಿದರು.

ಜಾಮೀಯ ಮಸೀದಿ ಗಾಂಧಿಬಜಾರ್, ಸುನ್ನೀ ಜಮಾಯತ್ ಉಲ್ಮ ಕಮಿಟಿ ದರ್ಗಾ ಕಮಿಟಿ, ಹಿಂದೂ ಸಂಘಟನೆಗಳು ಸೇರಿ 100 ಕ್ಕೂ ಹೆಚ್ಚು ಜನ ಸಭೆಯಲ್ಲಿ ಭಾಗಿಯಾದರು.

ಇದನ್ನೂ ಓದಿ-https://suddilive.in/archives/16801

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು