ಸುದ್ದಿಲೈವ್/ಶಿವಮೊಗ್ಗ
ರೈತರ ಮೇಲೆ ಸರ್ಕಾರದ ದೌರ್ಜನ್ಯ, ಹಕ್ಕು ಪತ್ರ ವಜಾ ಖಂಡಿಸಿ ಮಲೆನಾಡ ರೈತರ ಹೋರಾಟ ಸಮಿತಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.
ಶಿವಮೊಗ್ಗ ತಾಲ್ಲೂಕು, ಕುಂಚೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಚೇನಹಳ್ಳಿ ಗ್ರಾಮ ಬಡವರು ದಲಿತರ ಗ್ರಾಮವಾಗಿದೆ. ಕಳೆದ 50 ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿರುವ ಜಮೀನಿಗೆ 1998ರಲ್ಲಿ ಫಾರಂ ನಂ.53 ರಲ್ಲಿ ಬಗರುಹುಕುಂ ಸಾಗುವಳಿ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.
ಅರಣ್ಯ ಇಲಾಖೆ ಹಕ್ಕುಪತ್ರ ನೀಡಲು ಎನ್.ಓ.ಸಿ ನೀಡಿರುತ್ತದೆ. ಕುಂಚೇನಹಳ್ಳಿ ಸನಂ: 82, 99, 43 ಬೀರನಕೆರೆ 45, 102 ಕಲ್ಲಾಪುರಗಳಲ್ಲಿ ಸುಮಾರು 110 ಕುಟುಂಬಗಳವರಿಗೆ 2023ರಲ್ಲಿ ಹಕ್ಕು ಪತ್ರ ಕೊಡಲಾಗಿದೆ. ಈಗ ಹಕ್ಕು ಪತ್ರ ನೀಡಿದ ಕಂದಾಯ ಇಲಾಖೆಯೇ ಹಕ್ಕು ಪತ್ರ ಪಹಣಿ ವಜಾ ಮಾಡಿದೆ. ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಲಾಗಿದೆ. ಬಡ ಕುಟುಂಬಗಳಿಗೆ ಈ ಭೂಮಿ ಜೀವನಾಧಾರವಾಗಿದೆ.
ಹಕ್ಕು ದಾಖಲೆ ವಜಾ ಮಾಡಿದರೆ ಈ ಕುಟುಂಬಗಳವರಿಗೆ ಭೂಮಿ ಹಕ್ಕು ಇಲ್ಲದಂತಾಗುತ್ತದೆ. ಯಾವುದೇ ಸರ್ಕಾರದ ಸೌಲಭ್ಯ ಸಿಗುವುದಿಲ್ಲ. ಮುಂದೆ ಆರಣ್ಯ ಇಲಾಖೆ ಸಾಗುವಳಿಗೆ ಕಂಟಕ ತರುವುದು ನಿಶ್ಚಿತವಾಗಿದೆ.
ಆದ್ದರಿಂದ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳೂ ಭೂ ಹಕ್ಕಿನಿಂದ ರೈತರನ್ನು ವಂಚಿತರನ್ನಾಗಿ ಮಾಡಬಾರದು ಜನ ಪ್ರತಿನಿಧಿಗಳು ಸರ್ಕಾರ ರೈತರಿಗೆ ಭೂ ಹಕ್ಕು ಕೊಡಬೇಕು. ಇಲ್ಲವಾದಲ್ಲಿ ರೈತರು ತೀವ್ರ ಹೋರಾಟದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಮುಂದೆ ಆಗುವ ಹಾನಿಗೆ ಸರ್ಕಾರವೇ ಹೊಣೆ ಎಂದು ತಿಳಿಸಿರುತ್ತೇವೆ.
ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕ ತೀ.ನಾಶ್ರೀನಿವಾಸ್, ವಕೀಲ ಶ್ರೀಪಾಲ, ಕೃಷ್ಣನಾಯ್ಕ್, ಹನುಮಂತ ನಾಯ್ಕ್, ಶಿವಾಜಿ ನಾಯ್ಕ್ ಮೊದಲಾದವರು ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/17810