Girl in a jacket

ಎಂಪಿಎಂ ಭೂಮಿಯ ಲೀಸ್ ನ್ನ ಮುಂದುವರೆಸದಂತೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಎಂಪಿಎಂಗೆ ನೀಡಿದ್ದ 20 ಸಾವಿರ ಹೆಕ್ಟೇರ್ ಅಕೇಶಿಯ ಭೂಮಿಯನ್ನ ವಾಪಾಸ್ ಅರಣ್ಯ ಇಲಾಖೆಗೆ ನೀಡುವಂತೆ ನಮ್ಮೂರಿಗೆ ಅಕೇಶಿಯ ಮರ ಬೇಡ ಎಂಬ ಸಂಘಟನೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಙಘಟನೆಯ ಶ್ರೀಪಾಲ್, ರಾಮಕೃಷ್ಣ ಹೆಗಡೆಯವರ ಕಲದಲ್ಲಿ 20,0000.5 ಹೆಕ್ಟೇರ್ ಭೂಮಿಯನ್ನ ಚಿಕ್ಕಮಗಳೂರು ಶಿವಮೊಗ್ಗ ದಾವಣಗೆರೆ ಜಿಲ್ಲೆಗೆ ನೀಡಲಾಗಿತ್ತು ಇದರ ಅವಧಿ 40 ವರ್ಷ ಲೀಸ್ ನೀಡಲಾಗಿತ್ತು.

ಆದರೆ ನವೆಂಬರ್ ನಲ್ಲಿ 2020 ವರ್ಷದಲ್ಲಿ ಲೀಸ್ ಅಗ್ರಿಮೆಂಟ್ ಮಾಡಿಕೊಂಡು ಲೀಜ್ ನೀಡುವಂತೆ ಕೇಂದ್ರಕ್ಕೆ ಮುಂದುವರೆಸಲು ಕೇಳಿಕೊಂಡಿದೆ. ಆದರೆ ಕೇಂದ್ರ ನೀಡಿಲ್ಲ. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಕೇಶಿಯ ಬೆಳೆಯಲು ಬಿಟ್ಟಿರಲಿಲ್ಲ.

20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಅಕೇಶಿಯ ಮರವನ್ನ ಎಂಪಿಎಂಗೆ ನೀಡಿ ಈ ಜಾಗದಲ್ಲಿ ಸ್ವಾಭಾವಿಕವಾಗಿ ಮರ ಬೆಳಸಲು ಕೋರಲಾಗಿದೆ. ಸಿದ್ದರಾಮಯ್ಯನಚರಿಗೆ ಮನವಿ ನೀಡಲಾಗಿದೆ. ಆದರೆ ಈಶ್ವರ್ ಖಂಡ್ರೆ ಮತ್ತು ಅವರ ಪುತ್ರ ಸಂಸದರಾಗಿ ಆಯ್ಕೆಯಾಗಿ ಮತ್ತೆ ಕೇಂದ್ರ ಸರ್ಕಾರದ ಸಚಿವರಿಗೆ 20 ಸಾವಿರ ಹೆಕ್ಟೇರ್ ಎಂಪಿಎಂಗೆ ಮುಂದುವರೆಸಿ ಎಙದು ಕೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ವಿರುದ್ಧ ಮುಂದಿನ ದಿನಗಳಲ್ಲಿ

ಮೈಸೂರಿನ ಕಾರ್ಖಾನೆ ಮುಚ್ಚಲಾಗಿದೆ. ಅಜೇಶಿಯ ಭೂಮಿ ಅರಣ್ಯಕ್ಕೆ ಬರಬೇಕು. ಆಗುಂಬೆಯಲ್ಲೂ ಅಕೇಶಿಯ ಮರಗಳು ಇವೆ. ಒಂದು ಇಂಚು ಭೂಮಿಯನ್ನ ಕಾರ್ಖಾನೆಗೆ ನೀಡಲು ನಮ್ಮೂರಿಗೆ ಅಕೇಶಿಯ ಬೇಡ ಎಂದು ಆಗ್ರಹಿಸಲಿದೆ. ಕಾರ್ಖಾನೆ ಹೆಸರಿನಲ್ಲಿರುವ ಭೂಮಿ ಫಲವತ್ತತೆ ಕರೆದುಕೊಂಡಿವೆ. ಖಾಸಗೀ ಅವರಿಗೆ ನೀಡಬಾರದು.

ಐಟಿಸಿಗೆ ನೀಡಲು ಯೋಚಿಸಕಾಗಿತ್ತು. ಐಟಿಸಿ ಕಂಪನಿ ಸಿಗರೇಟ್ ಬಿಟ್ಟರೆ ಬೇರೆ ಯೋಜನೆಗಳಿಲ್ಲ. ಬಿಎಸ್ ವೈ 380 ಕೋಟಿ ರೂ ಕಾರ್ಖಾನೆ ಪುನಶ್ಚೇತನಕ್ಕೆ ನೀಡಲಾಹಿತ್ತು. ಯಾವುದೇ ಲಾಭಬಾರದೆ ಕಾರ್ಖಾನೆ ನಷ್ಟಕ್ಕೆ ಜಾರಿತು. ಈಗ ಅದರ ಜಾಗದ ಮೇಲೆ ಸರ್ಕಾರವೇ ಕಣ್ಣು ಹಾಕಿರುವುದು ದುರಂತ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ.ರಾಜೇಂದ್ರ ಚಿನ್ನಿ, ಡಿಎಸ್ ಎಸ್ ನ ಗುರುಮೂರ್ತಿ, ಸುರೇಶ್ ಅರಸಾಳು ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/18039

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು