ಸುದ್ದಿಲೈವ್/ಶಿವಮೊಗ್ಗ
ಶಿವಣ್ಣ ಬೆಂಬಲಿಗರಿಂದ ಬೆಂಗಳೂರಿನಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ಮನೆಗೆ ಮುತ್ತಿಗೆ ಹಾಕಿದ ಬೆನ್ನಲ್ಲೇ ಮಾಜಿ ಸಚಿವರು ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕಿ ಕುತೂಹಲ ಮೂಡಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಪ್ರಚಂಡ ಬಹುಮತದಿಂದ ವಿಜಯಶಾಲಿಯಾದ ಬಿ.ವೈ.ರಾಘವೇಂದ್ರ ಅವರಿಗೆ ಹೃದಯಪೂರಕ ವಂದನೆಗಳು ಎಂದು ಎಕ್ಸ್ ಖಾತೆ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಕುಮಾರ್ ಬಂಗಾರಪ್ಪ ಅದಕ್ಕೆ ಕುತೂಹಲಕಾರಿಯಾದ ಮುಂಬರಹ ಸೇರಿಸಿದ್ದಾರೆ.
ಇದರಿಂದ ತಂಗಿ ಗೀತಶಿವರಾಜ್ ಕುಮಾರ್ ಮತ್ತು ಭಾವ ಡಾ.ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪನವರಿಗೆ ನೇರವಾಗಿ ಟಾಂಗ್ ನೀಡಿ ಪೋಸ್ಟ್ ಮಾಡಿದರೂ ಸಹ, ಎಲ್ಲೂ ಮೂವರ ಹೆಸರು ಬಳಕೆ ಮಾಡಿಕೊಂಡಿಲ್ಲ. ಯಾರ ಹೆಸರು ಹೇಳದೆ ಇರುವುದರಿಂದ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಗಳು ಕುತೂಹಲ ಮೂಡಿಸಿದೆ.
https://x.com/kumarbangarappa/status/1799369830619099230?t=OfPXAP2xm_q9QX_irwR0Ow&s=19
ಬಬ್ರುವಾಹನ: ಅಬ್ಬರಿಸಿ ಬೊಬ್ಬರಿದರೆ ಇಲ್ಲಿ ಯಾರಿಗೂ ಭಯವಿಲ್ಲ ಎಂಬ ಪೋಸ್ಟ್ ನ ಹೆಡ್ ಲೈನ್ ಮತ್ತು ಬಿ.ವೈ.ಆರ್ ಅವರಿಗೆ ಹೃದಯ ಪೂರಕ ಅಭಿನಂದನೆಯ ಪೋಸ್ಟ್ ಮೇಲುಗಡೆ, ‘ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನೇ ಇದ್ದರು ಗಂಟಲಿನ ಒಳಗೆ, ನಾಲ್ಕು ಗೋಡೆಗಳ ಒಳಗೆ, ತಮ್ಮಪಟಾಲಂಗಳ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು.
ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು ಎಂದು ಟ್ವೀಟ್ ಮತ್ತು ಫೇಸ್ ಬುಕ್ ನಲ್ಲಿ ಬರೆದಿರುವುದು ಕುತೂಹ ಮೂಡಿಸಿದೆ.
ಇದನ್ನೂ ಓದಿ-https://suddilive.in/archives/16501