ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಉತ್ಪಾದಕ ವಸ್ತುಗಳ ಮಾರಾಟದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಾಫ್ಟೋ ನೆಸ್ ವೆಬ್ ಪೇಜ್ ಕಾರ್ಯಾರಂಭ ಮಾಡಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಾಫ್ಟೋನೆಸ್ ಸಂಸ್ಥೆಯ ಹೆಚ್ ಆರ್ ಶ್ರೀಮತಿ ಆಶಾ ಮಾತನಾಡಿ, ಜಸ್ಟ್ ಡಯಲ್ ಈಗಾಗಲೇ ಮಾಹಿತಿ ನೀಡುತ್ತಿದೆ. ಸರ್ವೀಸಸ್, ಬಟ್ಟೆ, ಚಿನ್ನಾಭರಣ, ವಾಹನಗಳು, ಆಟೋಮೊಬೈಲ್, ಮದುವೆ ಮತ್ತು ಸಮಾರಂಭದ ಬಗ್ಗೆ ನಿಮಗೆ ಮಾಹಿತಿ ನೀಡಲಿದೆ. ಪುಟ ತಿರುಗಿಸುವ ಶಬ್ದ ಸಹ ಈ ವೆಬ್ ಪೋರ್ಟಲ್ ನಲ್ಲಿ ಮಾಹಿತಿ ಸಿಗಲಿದೆ.
ಸ್ಥಳದೊಂದಿಗೆ, ಮೊಬೈಲ್ ನಂಬರ್ ಸಹ ದೊರೆಯಲಿದೆ. ಮೊದಲು ಅಂಗಡಿಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿ ವೆಬ್ ಪೋರ್ಟಲ್ ನಲ್ಲಿ ಮಾಹಿತಿ ತಿಳಿಸಲಾಗುವುದು.
ಜಸ್ಟ್ ಡಯಲ್ ನಲ್ಲಿ ಮೊದಲು ಕಂಪನಿಗೆ ಹೋಗಿ ನಂತರ ಸಂಬಂಧಪಟ್ಟವರಿಗೆ ಕರೆ ಅಥವ ಸೇವೆ ಲಭ್ಯಚಾಗುತ್ತದೆ. ಮೀಡಿಯೇಟರ್ ಗೆ ಕಾಲ್ ಹೋಗುತ್ತದೆ. ಆದರೆ ಸಾಫ್ಟೋನೆಸ್ ಸಂಸ್ಥೆ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ.
ಅಂಗಡಿ ಮಾಲೀಜರ ಬಳಿ ಮೊದಲು ಸಂಸ್ಥೆಯ ಪ್ರತಿನಿಧಿಗಳು ಹೋಗಿ ಮಾಹಿತಿ ನೀಡಲಿದ್ದಾರೆ. ಅಥವಾ ಗೂಗಲ್ ಫಾರಂ ನಲ್ಲಿ ಸಂಪರ್ಕಿಸಿ ಅಂಗಡಿ ಮಾಲೀಕರು ಮಾಹಿತಿ ನೀಡಬಹುದು. ಇದನ್ನ ಸಾಮಾಜಿಕ ಜಾಲತಾಣದಲ್ಲಿ ಇದನ್ನ ಮಾರುಕಟ್ಟೆ ಮಾಡಿಕೊಡಲಿದ್ದೇವೆ ಎಂದು ಕಂಪನಿಯ ಹೆಚ್ ಆರ್ ಶ್ರೀಮತಿ ಆಶಾ ತಿಳಿಸಿದರು.
ಸಾಫ್ಟೋನೆಸ್ ಸಂಸ್ಥೆ ಸಧ್ಯಕ್ಕೆ ಶಿವಮೊಗ್ಗದಲ್ಲಿ ಆರಂಭವಾಗುತ್ತದೆ. ಅಂಗಡಿಯವರಿಗೆ ಮೊದಲು ರಿಜಿಸ್ಟ್ರೇಷನ್ ಫ್ರೀ ಇರುತ್ತದೆ. ನಂತರ ವರ್ಷದ ನಂತರ ಅರ್ಧ ಪೇಜ್ ಉಚಿತ ಅರ್ಧ ಪೇಜ್ ದರ ನಿಗದಿಯಾಗಲಿದೆ. ನಗರದಲ್ಲಿ 35 ವಾರ್ಡ್ ನಲ್ಲಿ 80 ಸಾವಿರ ಅಂಗಡಿ ಮಳಿಗೆಗಳಿದ್ದು, ಇವುಗಳ ಮಾಹಿತಿ ಸಿಗಲಿದೆ ಎಂದರು.
ಅಶೋಕ ನಗರದ ಎರಡನೇ ತಿರುವಿನಲ್ಲಿ ಕಚೇರಿ ಬರಲಿದೆ. ಗೂಗಲ್ ನಲ್ಲಿ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ-https://suddilive.in/archives/17050