ಸುದ್ದಿಲೈವ್/ಶಿವಮೊಗ್ಗ
ಸತತ ಸುರಿಯುತ್ತಿರುವ ಮಳೆಗೆ ಮಲೆನಾಡಿನ ಪ್ರದೇಶಗಳಲ್ಲಿ ಹಳ್ಳದಿಣ್ಣೆಗಳು ತುಂಬಲು ಆರಂಭವಾಗಿದೆ. ಅದರಂತೆ ಜೋಗ ಜಲಪಾತ ರಮಣೀಯವಾಗಿ ಕಾಣಲು ಆರಂಭವಾಗುತ್ತಿದೆ. ಅದರಂತೆ ಶಿವಮೊಗ್ಗದ ಗಾಜನೂರಿನ ತುಂಗ ನದಿ ಡ್ಯಾಂ ಭರ್ತಿಯಾಗಿದೆ.
ಮತ್ತೆ ಕಳೆಗಟ್ಟಿದ ಜೋಗದ ವೈಯ್ಯಾರ ನೋಡಲು ಪ್ರವಾಸಿಗರ ದಂಡು ಆಗಮಿಸಲು ಆರಂಭವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಮೋಡಗಟ್ಟಿದ ವಾತಾವರಣದಿಂದ ಜೋಗ ಜಲಪಾತದಲ್ಲಿ ಮತ್ತೆ ಕಳೆ ತುಂಬಿದೆ.
ಧುಮ್ಮಿಕ್ಕಿ ಬೀಳುತ್ತಿರುವ ಹಾಲ್ನೊರೆಯಂತಹ ನೀರಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ರಾಜ, ರಾಣಿ, ರೋರರ್, ರಾಕೆಟ್ ಕವಲುಗಳಿಗೆ ಮತ್ತೆ ಬಂತು ಜೀವ ಕಳೆ ಪಡೆದುಕೊಂಡಿವೆ.
ತುಂಗ ಜಲಾಶಯದ ಎರಡು ಗೇಟ್ ಒಪನ್
ಅದರಂತೆ ಜೂನ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾದರೂ ತುಂಗ ಜಲಾಶಯ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ನದಿಗೆ 6 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಹರಿಸಲಾಗುತ್ತಿದೆ.
588.24 ಅಡಿ ಎತ್ತರದ ಸಣ್ಣ ಡ್ಯಾಂನಲ್ಲಿ ನೀರು ಭರ್ತಿಯಾಗಿದ್ದು 5 ಸಾವಿರ ಕ್ಯೂಸೆಕ್ ನೀರನ್ನ ಪವರ್ ಹೌಸ್ ನಿಂದಲೂ ಎರಡು ಗೇಟುಗಳ ಮೂಲಕ ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. 22 ಜಲಾಶಯದ ಗೇಟ್ ನಲ್ಲಿ 10 ಮತ್ತು 11 ನೇ ಗೇಟನ್ನ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/17906