Girl in a jacket

ಯೋಗ ಡೇ-ಶಿವಮೊಗ್ಗದಲ್ಲಿ ಭರ್ಜರಿಯಾಗಿ ನಡೆದ ಯೋಗ ದಿನ

ಸುದ್ದಿಲೈವ್/ಶಿವಮೊಗ್ಗ

10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಎಲ್ಲಡೆ ನಡೆಯುತ್ತಿದೆ. ಬೆಳಗ್ಗಿನ ಜಾವದಿಂದಲೇ ಎದ್ದು ಯೋಗ ನಡೆಸುವುದು ಇಂದಿನ ವಿಶಿಷ್ಠವೂ ಆಗಿದೆ. ಅದರಂತೆ ಇಂದು ಶಿವಮೊಗ್ಗದಲ್ಲಿ  ಹಲವೆಡೆ ಯೋಗಾಭ್ಯಾಸವನ್ನ ನಡೆಸಲಾಗಿದೆ

ಆದಿಚುಂಚನಗಿರಿ ಆಟದ ಮೈದಾನ, ನೆಹರೂ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆಯ ಅಂಗವಾಗಿ ಇಂದು ಯೋಗಾಭ್ಯಸವನ್ನ ನಡೆಸಲಾಗಿದೆ. ಆದಿಚುಂಚನಗಿರಿ ಆಟದ ಮೈದಾನದಲ್ಲಿ  ಯೋಗ ದಿನಾಚರಣೆಯ ಅಂಗವಾಗಿ ಯೋಗಭ್ಯಾಸ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆದಿದೆ.

ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್ ಎಸ್ ನ ಅಖಿಲಭಾರತ ಕಾರ್ಯಕಾರಿ ಸಮಿತಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ,  ಅನುಭವಿಸಬಹುದಾದ್ದನ್ನು ವಿವರಿಸಲು ಸಾಧ್ಯವಿಲ್ಲ. ಎಂಟು ಅಂಗಗಳಲ್ಲಿ ನಾಲ್ಕು ಅಂಗಗಳನ್ನು ಗುರುಗಳಿಂದ ‌ಕೇಳಿ ತಿಳಿಯಬಹುದು ಎಂದು ತಿಳಿಸಿದರು.

ಅಷ್ಟಾಂಗಗಳು ಯಮ‌ ಮತ್ತು ನಿಯಮಗಳ ಮೇಲೆ ನಿಂತಿದೆ, ಪತಂಜಲಿ ಮಹರ್ಷಿಗಳು ಪ್ರತಿಪಾದಿಸಿರುವುದು ಅಹಿಂಸಾ, ಸತ್ಯ, ಆಸ್ಥೆಯ, ಬ್ರಹ್ಮಚರ್ಯ,‌ ಅಪರಿಗ್ರಹಗಳ ಬಗ್ಗೆ .
ನಿಯಮಗಳು ವ್ಯಕ್ತಿಗತವಾದದ್ದು, ಅಂತರಂಗ ಮತ್ತು ಬಹಿರಂಗದ ಶುದ್ಧೀಕರಣವಾಗಬೇಕು ಎಂದಿದ್ದಾರೆ. ಇದಕ್ಕೆ ಯೋಗ ಸೂಕ್ತ ಸಲಕರಣೆಯಾಗಿದೆ. ಇಂದು ಮನುಷ್ಯನಲ್ಲಿ ಸಂತೋಷ  ಮಾಯವಾಗಿದೆ. ಅದನ್ನು ಹುಡುಕುವಂತಾಗಿದೆ ಎಂದು ತಿಳಿಸಿದರು.

ತಪಸ್ಸು ಏನು‌ಹೇಳುತ್ತದೆ ಎಂದರೆ  ತಾನು ಏನು ಮಾಡುತ್ತೇನೆ ಎನ್ನುವುದನ್ನು ಬೇರೆಯವರಿಗೆ ಬೋಧನೆ ಮಾಡುವುದನ್ನ ತಿಳಿಸುತ್ತದೆ. ಸ್ವಧ್ಯಾಯ ಇದು ಅತೀ ಮುಖ್ಯ. ನನ್ನಿಂದಾದ ತಪ್ಪನ್ನು‌ ಮತ್ತೆ ಮಾಡದೆ ಇರುವುದು. ದಿನವೂ ಮಾಡಿದ ಕೆಲಸವನ್ನು ನೆನಪಿಸಿಕೊಳ್ಳುವುದು. ರಾಮಾಯಣದಲ್ಲಿ ಅದ್ಭುತ ಸಾಹಿತ್ಯ ಇದೆ ಇದನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.

ಈಶ್ವರ ಪ್ರಣೀದಾನವೆಂದರೆ ಶ್ರದ್ಧಾ ಭಕ್ತಿಯಿಂದ ಪ್ರಣಿದಾನ ಮಾಡುವುದು.ಮಹಿಳಾ ಸಬಲೀಕರಣ ಹೊಸದಾಗಿ ಮಾಡಬೇಕಿಲ್ಲ. ಮಹಿಳೆಯರು ಸ್ವಭಾವಿಕವಾಗಿಯೇ ಸಬಲರಾಗಿದ್ದಾರೆ. ಇದನ್ನು ಶಂಕರಾಚಾರ್ಯ ರು ಪ್ರತಿಪಾದಿಸಿದ್ದಾರೆ.

ಇಂದು‌ಜೀವನ ಮೌಲ್ಯಗಳಲ್ಲಿ ಕುಸಿತವಾಗಿದೆ. ಮನೆ ಶಾಲೆ ದೇವಸ್ಥಾನ ಪಕ್ಕದವರು ನಮ್ಮನ್ನು ತಿದ್ದುವರಾಗಿದ್ದರು. ಈಗಯಾರನ್ನೂ ಯಾರೂ ತಿದ್ದಲು ಸಾಧ್ಯವಾಗುತ್ರಿಲ್ಲ. ಇದು ಜೀವನ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ ಎಂದರು.

ವಾರದಲ್ಲಿ ಒಂದು ದಿನ‌ಮನೆ ಮಂದಿ ಎಲ್ಲಾ ಒಟ್ಟಿಗೆ ೧೦ ನಿಮಿಷ ಕುಳಿತುಕೊಂಡು ಭಜನೆ ೩ ಬಾರಿ ಓಂಕಾರ ಮಾಡಿ ಸುಮ್ಮನೆ ಮಾತನಾಡುವುದು, ಒಟ್ಟಿಗೆ ಕುಳಿತು ಆನಂದದಿಂದ ಊಟ ಮಾಡಿದರೆ ಒಂದಿಷ್ಟು ಮೌಲ್ಯ ಸುಧಾರಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಭಾರತೀಯ ಭಾಷೆಗಳು ಅದ್ಭುತ ಭಾಷೆ. ಸಂಬಂಧ ವಾಚಕ‌ ಶಬ್ಧಗಳನ್ನು ಸಾಯಿಸಲಾಗುತ್ತಿದೆ. ಮನೆ ಮಂದುಯೆಲ್ಲಾ ಪ್ರವಾಸಕ್ಕೆ ಹೋಗಿ ಒಂದು ದಿನ‌ಕಳೆದರೆ ನೆಮ್ಮದಿ‌ ಪ್ರಾಪ್ತಿಯಾಗಲಿದೆ.ಮನೆಯೇ ಮೊದಲ ಪಾಠಶಾಲೆ ಆಗಬೇಕು. ಮನೆ ಆಧಾರಾಲಯವಾಗಬೇಕು ಎಂದರು.

ಇದನ್ನೂ ಓದಿ-https://suddilive.in/archives/17377

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close