ಸುದ್ದಿಲೈವ್/ಶಿವಮೊಗ್ಗ
ನೈಋತ್ಯ ರೈಲ್ವೆ ವಿಭಾಗ ಪ್ರಯಾಣಿಕರಿಗೆ ಮಹತ್ವದ ಪ್ರಕಟಣೆಯೊಂದನ್ನ ನೀಡಿದೆ. ಆಯ್ದ ದಿನಗಳಲ್ಲಿ ಕೆಲವು ರೈಲುಗಳ ರದ್ದತಿ / ಭಾಗಶಃ ರದ್ದತಿ / ತಿರುವು / ನಿಯಂತ್ರಣ / ಮರುಹೊಂದಿಕೆ ಸಮಯವನ್ನು ನಿಗದಿಪಡಿಸಿ ಪ್ರಕಟಣೆ ನೀಡಿದೆ.
ಲೆವೆಲ್ ಕ್ರಾಸಿಂಗ್ ನಲ್ಲಿ ರೈಲ್ವೆ ಅಂಡರ್ ಬ್ರಿಡ್ಜ್ ಸೇತುವೆ ಕಾಮಗಾರಿಗಾಗಿ ಗರ್ಡರ್ ಅಳವಡಿಕೆ ಮತ್ತು ತೆಗೆಯಲು ಲೈನ್ ಮತ್ತು ಪವರ್ ಬ್ಲಾಕ್ ಮಾಡುವ ಕಾರಣಕ್ಕೆ ಕೆಲವು ರೈಲುಗಳನ್ನ ಭಾಗಶಃ ರದ್ದು ಪಡಿಸಲಾಗಿದೆ. ನಿಟ್ಟೂರು – ಸಂಪಿಗೆ ರಸ್ತೆ ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಹಳಿಯಲ್ಲಿ ಗರ್ಡರ್ ಅಳವಡಿಸುವ ಮತ್ತು ತೆಗೆಯುವ ಕಾಮಗಾರಿಯನ್ನು ಹಮ್ಮಿಕೊಂಡಿಳ್ಳಲಾಗಿದೆ. ಈ ನಿಟ್ಟಿನಲ್ಲಿ ಇದೆ ಜೂನ್ 27 ರಿಂದ ಜುಲೈ 4ರವರೆಗೆ 8 ರೈಲುಗಳನ್ನು ರದ್ದುಪಡಿಸಲಾಗಿದೆ. ಕೆಲವನ್ನು ಭಾಗಶಃ ರದ್ದು ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.ಅದರ ವಿವರ ಹೀಗಿದೆ.
ಶಿವಮೊಗ್ಗಕ್ಕೆ ಸಂಬಂಧಿಸಿದಂತೆ ಎರಡು ಟ್ರೈನ್‌ಗಳನ್ನು ಕ್ಯಾನ್ಸಲ್ ಮಾಡಲಾಗಿದ್ದು 16579 ಯಶವಂತಪುರ-ಶಿವಮೊಗ್ಗ ಟೌನ್, 16580 ಶಿವಮೊಗ್ಗ ಟೌನ್-ಯಶವಂತಪುರ ರೈಲುಗಳ ಸಂಚಾರ ಜೂನ್ 27ರಿಂದ ಜುಲೈ 4ರವರೆಗೆ ರದ್ದಾಗಿವೆ.
ಇನ್ನೂ ಬೆಂಗಳೂರು-ತಾಳಗುಪ್ಪ 20651 KSR Bengaluru-Talguppa ಸಮಯದಲ್ಲಿ 10 ನಿಮಿಷಗಳ ಕಾಲ ಎನ್‌ರೂಟ್ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಉಳಿದಂತೆ ತುಮಕೂರು – ಚಾಮರಾಜನಗರ, ಚಾಮರಾಜನಗರ – ಮೈಸೂರು, ಚಾಮರಾಜನಗರ – ಯಶವಂತಪುರ, ಯಶವಂತಪುರ – ಚಾಮರಾಜನಗರ, ತುಮಕೂರು – ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು–ತುಮಕೂರು, ಯಶವಂತಪುರ ಟ್ರೈನ್‌ಗಳನ್ನ ನಿಗದಿತ ಅವಧಿ (ಜೂನ್ 27 ರಿಂದ ಜುಲೈ 4ರವರೆಗೆ ) ಯಲ್ಲಿ ರದ್ದಾಗಲಿದೆ. ಉಳಿದಂತೆ ರೈಲ್ವೆ ಇಲಾಖೆಯ ಪ್ರಕಟಣೆ ಹೀಗಿದೆ.
ಇದನ್ನೂ ಓದಿ-https://suddilive.in/archives/17640