ಭಾನುವಾರ, ಜೂನ್ 30, 2024

ಕಾರ್ಖಾನೆ ಡಿಸ್ ಇನ್ ವೆಸ್ಟ್ ಮೆಂಟ್ ಬಗ್ಗೆ ಸಚಿವ ಹೆಚ್ ಡಿಕೆ ಏನಂದ್ರು?

ಸುದ್ದಿಲೈವ್/ಶಿವಮೊಗ್ಗ

ಮಾಜಿ ಕೇಂದ್ರ ಸಚಿವ ಜಯರಾಮ್ ರಮೇಶ್ ಅವರು ಭಾರತದ ಐದು ಕಾರ್ಖಾನೆ ಬಗ್ಗೆ ನನ್ನ ಮುಂದೆ ಐದು ಪ್ರಶ್ನೆ ಇಟ್ಟಿದ್ದರು. ಆ ಪ್ರಶ್ನೆಗೆ ಮಾಹಿತಿ ಪಡೆಯಲು ಭದ್ರಾವತಿ ವಿಐಎಸ್ ಎಲ್ ಭದ್ರಾವತಿಗೆ ಭೇಟಿ ನೀಡಿರುವುದಾಗಿ ಕೇಂದ್ರ ಬೃಹತ್ ಮತ್ತು ಉಕ್ಕು ಸಚಿವ ಹೆಚ್ ಡಿ‌ ಕುಮಾರ ಸ್ವಾಮಿ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾರ್ಮಿಕರ ಬದುಕು, ಕಾರ್ಖಾನೆ ಉಳಿಸುವ ಕುರಿತು ಏನು ಮಾಡಬಹುದು ಎಂಬಿದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇನೆ. ಮಾಹಿತಿ ಪಡೆದು ಮುಂದಿನ ದಿನಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

ಆತ್ಮನಿರರ್ಭಾರ್ ಯೋಜನೆ, ಮೇಕ್ ಇನ್ ಇಂಡಿಯಾ ಮತ್ತು ಸ್ಟೀಲ್ ಆಥಾರಿಟಿ ಇಂಡಿಯಾದ ಕಾನ್ಸೆಪ್ಟ್ ಮತ್ತು 2017 ರ ಪಾಲೀಸಿಯಂತೆ ಮೋದಿಯವರ ಕನಸನ್ನ ನನಸಾಗಿಸಲು ಕಾರ್ಖಾನೆಗೆ ಭೇಟಿ ನೀಡಿದ್ದಾಗಿ ಹೇಳಿದರು.

2017 ರ ಪಾಲಿಸಿ ಪ್ರಕಾರ 2030 ರ ವೇಳೆಗೆ ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣ ತಯಾರಿಕೆಯ ಗುರಿ ಹೊಂದಿದ್ದೇವೆ.ಗುರಿ ಮುಟ್ಟಲು ಹಲವು ಯೋಜನೆಗಳನ್ನ ಆರಂಭಿಸಿದ್ದೇವೆ. ಈ ಹಿನ್ನಲೆಯಲ್ಲಿ ಚಿಂತನೆ ನಡೆಸುವುದಾಗಿ ಹೇಳಿದರು.

ಡಿಸ್ ಇನ್ ವೆಟ್ಸ್ ಮೆಂಟ್, ಕ್ಲೋಸಿಂಗ್ ನಿಂದ ಹೊರಗೆ ತರಬೇಕು ಎಂಬುದು ಕಾರ್ಮಿಕರ ಒತ್ತಾಸೆ, ಕಾರ್ಮಿಕರಿಗೆ ಈಗ 13 ದಿನ ಕೆಲಸವಿದೆ ಅದನ್ನ 26 ಕ್ಕೆ ಏರಿಸಬೇಕು ಎಂಬ ಆಗ್ರಹವಿದೆ. ಈ ಬಗ್ಗೆ ತಮ್ಮ ನಿಲುವಿನ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡಿದ್ದು, ಈ ಎಲ್ಲಾ ಬೇಡಿಕೆ ಇದೆ. ಪಾರ್ಲಿಮೆಂಟ್ ನಡೆಯುತ್ತಿದೆ. ನಾನು ಈ ಬಗ್ಗೆ ಸಾರ್ವಜನಿಕ ಚರ್ಚೆ ಮಾಡಲು ಸಾಧ್ಯವಿಲ್ಲ.

ಆದರೆ ಕಾರ್ಖಾನೆ ಉಳಿವಿನ ಬಗ್ಗೆ ಸಾಧಕ ಬಾಧಕವನ್ನ ಕ್ರೂಢಿಕರಿಸಿ ಮುಂದಿನ ದಿನಗಳಲ್ಲಿ ಏನು ಮಾಡಬಹುದು ಅದನ್ನ ಮಾಡುತ್ತೇನೆ. ಕಾರ್ಮಿಕರ ಒಬ್ಬೊಬ್ವರ ಬೇಡಿಕೆ ಇದೆ. ಅವರ ಬೇಡಿಕೆಯನ್ನ ಕಾನೂನು‌ ವ್ಯಾಪ್ತಿ ಯೊಳಗೆ ಈಡೇರಿಸಲು ಸಾಧ್ಯವಾದರೆ ಬಗೆ ಹರಿಸುವುದಾಗಿ ಭರವಸೆ ನೀಡಿದರು.

ಸಙಡೂರಿನ ರಮಣದುರ್ಗದಲ್ಲಿ ಮೈನ್ಸ್ ಗೆ ಅವಕಶ ನೀಡಿದ್ದರೂ ಆರಂಭವಾಗಿಲ್ಲ ಈ ಬಗ್ಗೆನೂ ಈಗ ಆರಂಭದ ಹೆಜ್ಜೆ ಇಟ್ಟಿದ್ದೇವೆ. ಇವೆಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ.

ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಎಂ ಬದಲಾವಣೆ ವಿಚಾರ ನಮ್ಮ ಪಕ್ಷಕ್ಕೆ ಸೇರಿಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಮಸ್ಯೆ. ಅದನ್ನ ಅವರ ಮಾತನಾಡುತ್ತರೆ. ಮಂಡ್ಯದಲ್ಲಿ ಸಚಿವ ಚಲುರಾಯಸ್ವಾಮಿ ಏರ್ ಪೋರ್ಟ್ ಗೆ ಕುಮಾರ ಸ್ವಾಮಿ ಸಹಾಯ ಮಾಡಬೇಕು ಎಂದಿದ್ದಾರೆ.

ಈ ಬಗ್ಗೆನೂ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರ ಪ್ರಪೋಸಲ್ ಏನಿದೆ ಕೊಡಲಿ ಯೋಚಿಸುವುದಾಗಿ ಹೇಳಿದ ಸಚಿವರು ಎಮ್ಮೆಹಟ್ಟಿಯ 13 ಜನರ ದುರಂತ ಸಾವಿನ ಹಿನ್ನಲೆಯಲ್ಲಿ ಭೇಟಿ ನೀಡಿರುವೆ ಅವರ ಪರಸ್ಥಿತಿ ಗಂಭೀರವಿದೆ. ಮುಂದಿನ ದಿನಗಳಲ್ಲಿ ಏನು ಸಹಾಯ ಮಾಡಬಹುದು ಮಾಡುವೆ ಎಂದರು.‌

ಇದನ್ನೂ ಓದಿ-https://suddilive.in/archives/18141

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ