Girl in a jacket

ಜನಸ್ಪಂಧನೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಮನವಿ-ಡಿಎಸ್ಎಸ್ ಅಂಬೇಡ್ಕರ್ ವಾದ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಜನಸ್ಪಂಧನ ಕಾರ್ಯಕ್ರಮವು ಇಂದು ಕುವೆಂಪು ರಂಗ ಮಂದಿರದಲ್ಲಿ ನಡೆದಿದೆ. ಕೆಪಿಎಸ್ ಶಾಲೆಯಲ್ಲಿ ನೇಮಕಾತಿ, ಅಲ್ಪಸಂಖ್ಯಾತರ ಶಾಕೆಯಲ್ಲಿ ಬಿಸಿಯೂಟದ ಬಗ್ಗೆ ಮಕ್ಕಳು ಮನವಿ ಮಾಡಿದ್ದು ವಿಷೇಶವಾಗಿತ್ತು.

ಭದ್ರಾವತಿ ನಾಗೇಂದ್ರ ಅವರು, ಎಂಎಸ್ ಐಎಲ್ ನಿಯೋಜನೆಗೆ ಅರ್ಜಿ , ವಸಂತ ಕುಮಾರ್ ಅನುಕಂಪ ಆಧಾರದ ಕೆಲಸ, ಮೌಲಾನಾ ಅಬ್ದುಲ್ ಕಲಾಂ ಅಲ್ಪಸಂಖ್ಯಸ್ಥರ ಶಾಲೆಯಲ್ಲಿ ಮಕ್ಕಳು ಬಿಸಯೂಟ ಕೊಡಲ್ಲ ಎಂದು ಬಂದು ಸಚಿವರಿಗೆ ಮನವಿ ನೀಡಿದರು.

ಸೋಮವಾರದಿಂದ ಬಿಸಿಯೂಟಕ್ಕೆ ಅವಕಾಶ ನೀಡಲು ಸಚುವರು ಸೂಚನೆ ನೀಡಿದರು. ಕುವೆಂಪುರಂಗ ಮಂದಿರದಲ್ಲಿ ನಡೆದ ಜನಸ್ಪಂಧನೆ
ಕಾರ್ಯಕ್ರಮದಲ್ಲಿ ಜನರು ಕಡಿನೆ ಸಂಖ್ಯೆಯಲ್ಲಿದ್ದರು. 11-15 ರವರದಗೆ 149 ಅರ್ಜಿಗಳು ಬಂದಿದ್ದವು. ಭದ್ರಾವತಿಯ ಜಿಮ್ ಮಾಸ್ಟರ್  ರತಿಲ್ ಕುಮಾರ್ ಸಾವಿನ ಕುರಿತು ಎರಡನೇ ಜನಸ್ಪಂದನೆಗೆ ಬಂದಿದ್ದು ವಿಶೇಷವಾಗಿತ್ತು.

ಡಿಎಸ್ ಎಸ್ ಪ್ರತಿಭಟನೆ

ಜನಸ್ಪಂಧನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪ್ರತಿಭಟನೆಯ ರೂಪದಲ್ಲಿ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಲು ಯತ್ನಿಸಲಾಯಿತು

ದಲಿತರ ಭೂಮಿಯನ್ನ ಎಂಪಿಎಂ ನವರು ಆಕ್ರಮಿಸಿಕೊಂಡಿದ್ದು ಜಂಟಿ ಸರ್ವೆ ಮಾಡಿಸಿ ಹದ್ದುಬಸ್ತು ಸರ್ವೆ ಮಾಡಿಸುವಂತೆ ಒತ್ತಾಯಿಸಿ ಅನಿರ್ದಿಷ್ಟ ಅವಧಿ ಪ್ರತಿಭಟಿಸುತ್ತಿರುವ ಭೂಮಿ ನೀಡುವಂತೆ ಆಗ್ರಹಿಸಿದರು. ರಂಗ ಮಂದಿರದ ಗೇಟ್ ಬಳಿ ಪ್ರತಿಭಟನೆ ಮೂಲಕ ಬರುವಾಗ ಪೊಲೀರು ತಡೆ ಹಿಡಿಸಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಸಂಘಟನೆಯವರಿಗೆ ಗೇಟ್ ಬಳಿ ತಡೆಯಲಾಗಿದೆ. ಜನಸ್ಪಂಧನೆ ಕಾರ್ಯಕ್ರಮದಲ್ಲಿ ಮನವಿ ನೀಡಲು ಅವಕಾಶವಿಲ್ಲವಾ ಎಂದು ತಡೆದ ಪೊಲೀಸರ ಜೊತೆ ವಾಗ್ವಾದ ನಡೆಸಲಾಯಿತು.

ಇದನ್ನೂ‌ಓದಿ-https://suddilive.in/archives/17959

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು