Girl in a jacket

ದೆಹಲಿಯಲ್ಲಿ ಪ್ರಮಾಣ ವಚನ, ಶಿವಮೊಗ್ಗದಲ್ಲಿ ಸಂಭ್ರಮಾಚರಣೆ

ಸುದ್ದಿಲೈವ್/ಶಿವಮೊಗ್ಗ

ಅತ್ತ ದೆಹಲಿಯಲ್ಲಿ ಪ್ರಧಾನ ಮಂತ್ರಿಯಾಗಿ ನರೇಂದ್ರ ದಾಮೋದರ್ ದಾಸ್ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಇತ್ತ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುದ್ದಂತೆ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಹಿ ಹಂಚಿ ಸಂಭ್ರಮಿಸಲಾಯಿತು.

ಕಚೇರಿಯ ಅಂಗಳದಲ್ಲೇ ಶಾಸಕ ಚೆನ್ನಬಸಪ್ಪ, ಬಿಜೆಪಿ ಹಿರಿಯ‌ಮುಖಂಡ ಗಿರೀಶ್ ಪಟೇಲ್, ಎಂಎಲ್ ಸಿ ರುದ್ರೇಗೌಡ, ಮಾಜಿ ಎಂಎಲ್ ಸಿ ಆರ್ ಕೆ ಸಿದ್ದರಾಮಣ್ಣ ಮೊದಲಾದವರೊಂದಿಗೆ ಮೋದಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ವೀಕ್ಷಿಸಿದರು.

72 ಸಚಿವರ ಬೃಹತ್ ಗಾತ್ರದ ಮೋದಿ 3.O ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿಯಾಗಿ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಮನೋಹರ್ ಲಾಲ್ ಕಟ್ಟರ್, ನಿರ್ಮಲ ಸೀತರಾಮನ್, ಜೈಶಂಕರ್, ಹೆಚ್ ಡಿ ಕುಮಾರ ಸ್ವಾಮಿ,

ಪಿಯೂಷ್ ಗೋಯೆಲ್, ಧರ್ಮೇಂದ್ರ ಪ್ರಧಾನ್, ಜೀತಿನ್ ರಾಮ್ ಮಾಂಜಿ, ರಾಜೀವ್ ರಂಜನ್ ಸಿಂಗ್, ಪ್ರಹ್ಲಾದ್ ಜೋಷಿ, ಜ್ಯೋತಿರಾಧಿತ್ಯ ಸಿಂಧ್ಯ, ಶಿವರಾಜ್ ಸಿಂಗ್ ಚೌಹಾಣ್  ಸೇರಿ 72 ಜನ ನೂತನ ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಯಿಂದ 37 ಜನ ಸ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅದರಂತೆಯೇ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ದೆಹಲಿಯಲ್ಲಿ ಹೆಚ್ ಡಿ ಕುಮಾರ ಸ್ವಾಮಿ ಪ್ರಮಾಣ ವಚನ ಸ್ವೀಜರಿಸುತ್ತಿದ್ದಂತೆ ಸಂಭ್ರಮಾಚರಣೆ ನಡೆಸಲಾಯಿತು. ಬಿಜೆಪಿ ಕಚೇರಿಯನ್ನ ದೀಪದ ಅಲಂಕಾರದಲ್ಲಿ ಬೆಳಗಿಸಲಾಗಿತ್ತು.

ಇದನ್ನೂ ಓದಿ-https://suddilive.in/archives/16566

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು