ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕದಲ್ಲಿ ಎನ್.ಡಿ.ಎ. 16 ಸ್ಥಾನ ಗಳನ್ನು ಗೆದ್ದಿದೆ ನಿಜ. ಇದೇ ಸಂದರ್ಭದಲ್ಲಿ ಬಿಜೆಪಿ ಕಳೆದ ಬಾರಿಗಿಂತ 10 ಸ್ಥಾನಗಳನ್ನು ಕಳೆದುಕೊಂಡಿದೆ.
ಆದರೆ ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾ ), ಚಿತ್ರದುರ್ಗ ಮತ್ತು ಬೆಂಗಳೂರು (ಉ ), ಈ ಕ್ಷೇತ್ರಗಳಲ್ಲಿ ಒಕ್ಕೂಟದ ಗೆಲುವಿಗೆ ಜೆಡಿಎಸ್ ಜೊತೆಗಿನ ಮೈತ್ರಿ ಪ್ರಮುಖ ಕಾರಣವಾಯಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇಲ್ಲದಿದ್ದರೆ ಬಿಜೆಪಿ ಬಹುಷಃ 10 ರಿಂದ 11 ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬಿಜೆಪಿಯ ಸಾಂಪ್ರದಾಯಿಕ ಗೆಲುವಿನ ಕ್ಷೇತ್ರಗಳೆಂಬುದು ಎಲ್ಲರಿಗೂ ತಿಳಿದ ವಿಷಯ.
ಕಳೆದ ಬಾರಿ 2 ರಿಂದ 3.50 ಲಕ್ಷ ಮತಗಳಿಂದ ಗೆಲುವು ಸಾಧಿಸಿದ ಬೆಳಗಾವಿ, ಹಾವೇರಿ ಹುಬ್ಬಳ್ಳಿ- ಧಾರವಾಡ, ವಿಜಯಪುರ ಮುಂತಾದ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಲೀಡ್ ಕಡಿಮೆಯಾಗಿರುವುದನ್ನು ಗಮನಿಸಿದರೆ ಬಿಜೆಪಿಯ ರಾಜ್ಯ ನಾಯಕತ್ವ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ ಎಂಬುದಕ್ಕೆ ಇಂದಿನ ಫಲಿತಾಂಶ ಸಾಕ್ಷಿಯಾಗಿದೆ ಎಂಬ ಚರ್ಚೆ ಶುರುವಾಗಿದೆ.
ಇನ್ನು ಲಿಂಗಾಯತ ಪ್ರಾಬಲ್ಯದ ರಾಯಚೂರು, ಚಿಕ್ಕೋಡಿ, ಕಲ್ಬುರ್ಗಿ, ಕೊಪ್ಪಳ, ಬೀದರ್, ಬಳ್ಳಾರಿ, ದಾವಣಗೆರೆ ಯಲ್ಲಿನ ಸೋಲನ್ನು ನೋಡಿದಾಗ ಬಿ.ವೈ.ವಿಜಯೇಂದ್ರ ಅವರ ನಾಯಕತ್ವ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿಲ್ಲ ಎಂದೇ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಅದಲ್ಲದೇ ದೇಶದಲ್ಲಿ ಬಿಜೆಪಿ ಕಳೆದ ದಶಕಗಳಲ್ಲಿ ಗೆದ್ದು ಬಂದಂತೆ ಬಾರದೆ ಇರುವುದು ಈಗ ದೇಶದಲ್ಲಿಯೂ ನಾಯಕತ್ವ ಅಪಕತ್ವತೆಯನ್ನೂ ತೋರುತ್ತಿದೆ.
ಇದನ್ನೂ ಓದಿ-https://suddilive.in/archives/16239