Girl in a jacket

ಕೃತಜ್ಞತಾ ಸಭೆಯಲ್ಲಿ ಗೀತ ಶಿವರಾಜ್ ಕುಮಾರ್ ನನ್ನ ಭಾಷಣಕ್ಕೆ ಕರ್ಫ್ಯೂ ಹಾಕಲಾಗಿದೆ ಎಂದಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಚುನಾವಣೆ ಮುಗಿದ ನಂತರ ಎಐಸಿಸಿ ವಕ್ತಾರ ಸುರ್ಜೇವಾಲ ಕರೆ ಮಾಡಿ ನೀನು ಹುಲಿಯಂತೆ ಕೆಲಸ ಮಾಡಿದ್ದೀರಿ ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ತಿಳಿಸಿದರು.

ನಗರದ ಈಡಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಗೆ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕೃತಜ್ಞತಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

5.35 ಲಕ್ಷ ನನ್ನ ಪರ ಮತದಾನವಾಗಿದೆ.‌ನಮ್ಮ ಅಪ್ಪಾಜಿ (ಡಾ.ರಾಜ್ ಕುಮಾರ್) ಅಭಿಮಾನಿಗಳೆ ದೇವರು ಎನ್ನುತ್ತಿದ್ದರು. ನಾನು ನಿಮ್ಮನ್ನೇ (ಕಾರ್ಯಕರ್ತರರನ್ನ) ದೇವರು ಎಂದು ಕರೆಯುತ್ತೇನೆ ಎಂದ ಅವರು. ನಾವು ಮಾ.20 ರಂದು ಶಿವಮೊಗ್ಗಕ್ಕೆ ಬಂದ್ವಿ. ಶಿವರಾಜ್ ಕುಮಾರ್ ಅವರು ಶೂಟಿಂಗ್ ನೆಲ್ಲಾ ಬದಿಗೊತ್ತಿ ಪ್ರಚಾರಕ್ಕೆ ಬಂದರು. ಮಧು ತರಹ ಬೇಕಾದಷ್ಟು ಜನ ಕ್ಷೇತ್ರದಲ್ಲಿ ಸಹೋದರ ಸಹೋದರಿಯರು ದೊರೆತಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದರು.

ನಾನು ಇಲ್ಲೇ ಇರುವೆ. ಶಕ್ತಿಧಾಮ ಮಾಡುತ್ತೇವೆ. ಟಾಟಾ ಬೈ ಬೈ ಏನೂ ಇಲ್ಲ ಎಂದು ಕುಮಾರ್ ಅವರು ಮಾಡಿದ ಟ್ವೀಟ್ ಗೆ ಪರೋಕ್ಷ ಅಗಿ ಹೇಳಿದ್ದಾರೆ.‌ ನನ್ನ ಸೋಲಿನ ಜವಬ್ದಾರಿಯನ್ನ ಮಧು ಹೋರ ಬೇಕಿಲ್ಲ. ಐದು ಲಕ್ಷದ ಮುವತ್ತೈದು ಸಾವಿರ ಜನರ ಮತ ಬಂದಿದೆ. ಇದು ಸಾಮಾನ್ಯವಾದ ವಿಷಯವಲ್ಲ ಎಂದರು.

ಬೆಂಗಳೂರು ಬಿಟ್ಟು ಬರಲಿಕ್ಕೆ ಆಗೊಲ್ಲವೆಂಬುದೇನಿಲ್ಲ. ನನಗೆ ಕೆಲವೊಂದು ವಿಷಯ ಹೇಳುವುದಕ್ಕೆ ಕರ್ಫ್ಯೂ ಹಾಕಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯನ್ನ ಗೆಲ್ಲಿಸುವುದು ನನ್ನ ಗುರಿ ಎಂದ ಗೀತ ಅವರು ಗೆಲ್ತೀವಿ ಎಂದು ಬರ್ತೀವಿ. ಸೋಲಾಗಿದೆ. ನಮ್ಮ ತಂದೆಯೂ ಸೋತಿದ್ದಾರೆ. ಸೋಲೆ ಮುಂದಿನ ದಿನದ ಗೆಲವಾಗುತ್ತದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದರು.

ಇದನ್ನೂ ಓದಿ-https://suddilive.in/archives/16616

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು