ಸುದ್ದಿಲೈವ್/ಶಿವಮೊಗ್ಗ
ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕೆಡಪಿ ಸಭೆಯಲ್ಲಿ ಗೋಹತ್ಯೆ ವಿಷಯದಲ್ಲಿ ಶಾಸಕ ಚೆನ್ನಬಸಪ್ಪ ಮತ್ತು ನೂತನ ಎಂಎಲ್ ಸಿ ಬಲ್ಕಿಸ್ ಭಾನು ನಡುವೆ ಜುಗಲ್ ಬಂಧಿ ನಡೆದಿದೆ. ಆದರೆ ಸಭೆಯಲ್ಲಿ ಗೋಹತ್ಯೆ ಕಾನೂನು ರಾಜ್ಯದಲ್ಲಿ ಜಾರಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಠೀಕರಣನೇ ಹೊರ ಬೀಳದೆ ಇರುವುದು ದುರಂತವಾಗಿದೆ.
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆಯಾಗಿಲ್ಲ ಎಂದು ಬಸ್ಕೀಸ್ ಭಾನು ಎಲ್ಲೂ ಗೋಹತ್ಯೆ ನಡೆದಿಲ್ಲ ಹಬ್ಬಚೆನ್ಬಾಗಿ ನಡೆದಿದೆ ಎಂದರೆ ಇದಕ್ಕೆ ಶಾಸಕ ಚೆನ್ನಬಸಪ್ಪ ಹಬ್ಬದ ಬಗ್ಗೆ ಆಕ್ಷೇಪವಿಲ ಆದರೆ ಗೋಹತ್ಯೆ ನಡೆದಿಲ್ಲ ಎಂದರೆ ರಾಜೀನಾಮೆ ನೀಡುತ್ತೇನೆ ಎಂದರು.
ಇದಕ್ಕೆ ಸಭೆ ನಿಶಬ್ದವಾಗಿತ್ತು. ಇದಕ್ಜೆ ಶಾಸಕ ಆರಗ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಬೆಂಬಲಿಸಿದರು.ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಗೊಳಿಸಿ ಎಂದರು. ಇದಕ್ಕೆ ಎಸ್ಪಿ ಮಿಥುನ್ ಮಾತನಾಡಿ ಕಳೆದ ವರ್ಷ 21 ಗೋಹತ್ಯೆ ಪ್ರಕರಣ ದಾಖಲಾಗಿದೆ ಈ ವರ್ಷ 44 ಪ್ರಕರಣ ದಾಖಲಾಗಿದೆ ಎಂದರು.
ಗೋವಿನ ಬಗ್ಗೆ ಮಾಹಿತಿ ಇದ್ದರೆ ನಮ್ಮ ಗಮನಕ್ಕೆ ತನ್ನಿ ಗಮನಕ್ಕೆ ತಂದ ನಂತರ ಕ್ರಮವಾಗದಿದ್ದರೆ ನೀವು ಆರೋಪಿಸಿ ಎಂದಿದ್ದೆ ಎಂದ ಎಸ್ಲಿ ಅವರು ಈ ಬಗ್ಗೆ. 100 ದೂರು ಬಂದಿದೆ ಎಲ್ಲದ ಬಗ್ಗೆ ಕ್ರಮಜರುಗಿಸಲಾಗುವುದು ಎಂದರು
ಇದಕ್ಕೆ ಸಚಿವ ಮದು ಬಂಗಾರಪ್ಪ ಗೋಹತ್ಯೆ ನಿಷೇಧ ಕಾನೂನು ಬಗ್ಗೆ ನಾನು ಮಧ್ಯ ಪ್ರವೇಶಿಸೊಲ್ಲ. ಕಾನೂನು ಪಾಲನೆಯನ್ನ ಕಟ್ಟುನಿಟ್ಟಾಗಿ ಮಾಡಿ ಎಂದಿರುವೆ. ಕಾನೂನು ಬಿಟ್ಟರೆ ಜನಪ್ರತಿನಿಧಿಗಳು ನನ್ನ ಗಮನಕ್ಕೆ ತನ್ನಿ. ಗೋಹತ್ಯೆ ವಿಷಯ ಸೂಕ್ಷ್ಮ ವಿಚಾರವಾಗಿದೆ. ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇದಕ್ಕೆ ಆಕ್ಷೇಪಿಸಿದ ಶಾಸಕ ಚೆನ್ನಬಸಪ್ಪ ಸೂಕ್ಷ್ಮವಾಗಿದ್ದರೆ ಅದನ್ನ ಕ್ರಮ ಜರುಗಿಸಿ. ಹತ್ಯೆಯಾಗಿರುವ ಬಗ್ಗೆ ಕ್ರಮ ಜರುಗಿಸಿ ಎಂದರು. ಎಸ್ಪಿ ಮಿಥುನ್ ಮಾತನಾಡಿ ಗೋಹತ್ತೆ ಪ್ರಕರಣದಲ್ಲಿ ಕಾನೂನು ಬಾಹಿರವಾಗಿದ್ದರೆ ಕ್ರಮ ಎಂದರು. ಗೋಹತ್ಯೆಯೇ ಕಾನೂನು ಬಾಹಿರ ಎಂದು ಶಾಸಕ ಚೆನ್ನಿ ಹೇಳಿದ್ದು ಸಭೆಯ ಗಮನ ಸೆಳೆದಿತ್ತು.
ಮುನ್ಸಿಪಾಲ್ಟಿ ವಾಹನದಲ್ಲಿ ಗೋತ್ಯಾಜ್ಯ ಸಾಗಾಣೆ ಆಗಿದೆ ಇದು ಕಾನೂನು ವಾಹಿರವಲ್ಲವಾ ಎಂದ ಶಾಸಕ ಚೆನ್ನಿಗೆ ಎಸ್ಪಿ ವಿವರಣೆನೀಡಿ ಈ ವರ್ಷ 101 ಗೋರಕ್ಷಣೆ ಆಗಿದೆ ಎಂದು ಹೇಳಿದರು. ರಕ್ಷಕರ ವಿರುದ್ಧ ಎಷ್ಟು ಕೇದ್ ಹಾಕಿದ್ದೀರಿ ಎಂದು ಎಂಎಲ್ ಸಿ ಅರುಣ್ ಪ್ರಶ್ನಿಸಿದರು. ಶಾಸಕ ಚೆನ್ನಿಅವರಮಾತಿಗೆ ಭದ್ರಾವತಿ ಶಾಸಕ ಸಂಗಮೇಶ್ವರ್ ಭದ್ರಾವತಿಯಲ್ಲಿ ಗೋಹತ್ಯೆ ನಡೆದಿಲ್ಲ ಎಂದರು.
ಬಲ್ಕೀಸ್ ಭಾನು ಜಿಲ್ಲೆಯಲ್ಲಿ ಹಲವು ಸಮಸ್ಯೆ ಇದೆ ಬೇರೆ ವಿಷಯ ಮಾತನಾಡಿ ಎಂದರೆ ನಿಮ್ಮಬಗ್ಗೆ ಗೌರವ ವಿದೆ. ಗೋಹತ್ಯೆ ಸಮಸ್ಯೆ ಅಲ್ವಾ ಹಾಗಾದರೆ ಎಂದು ಆಕ್ಷೇಪಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗೋಶಾಲೆಯಲ್ಲಿ ಗೋಸಾಗಣೆ ಮಾಡಿ ಹತ್ಯೆ ಮಾಡಲಾಗಿದೆ ಕಾನೂನು ಸರಿಯಾಗಿ ಪಾಲನೆ ಆಗದಿದ್ದರೆ ಎರಡು ಧರ್ಮಗಳ ನಡುವೆ ಗಲಾಟೆ ಆಗಲಿದೆ ಎಂದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ ಗೋಶಾಲೆ ಆರಂಭಿಸಿ ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಹವಮಾನ ಆಧಾರಿತ ಬೆಳೆ ಬೆಳೆದ ಕಳೆದ ವರ್ಷದ ಅಂಕಿ ಅಂಶ ಹೊರಗಿಡುವಂತೆ ಹಾಗೂ ಯಾವ ಆಧಾರದ ಮೇಲೆ ಪರಿಹಾರ ನೀಡುತ್ತೀರಿ ಎಂದು ಎಂಎಲ್ ಸಿ ಭೋಜೇಗೌಡ ಆಕ್ಷೇಪಿಸಿದರು.
ಇಂದು ನಜೀರ್ ಸಾಬ್ ಸಭೆಯಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಭೋಜೇಗೌಡ, ರೈನ್ ಮ್ಯಾಪ್ ನ ಕಚೇರಿ ಇಲ್ಲ. ಯಾವ ಊರಿನಲ್ಲಿ ಎಷ್ಟು ಮಳೆಯಾಗಿದೆ ಎಂಬ ಅಂಕಿ ಅಂಶಗಳಿಲ್ಲ ಎಂದು ಆಕ್ಷೇಪಿಸಿದರು.
25 ವಾರಕ್ಕೆ ಮೇವು ಸಂರಕ್ಷಿಸಲಾಗಿದೆ. ಮೇವಿನಬಗ್ಗೆ ಯಾವುದೇ ತೊಂದರೆಯಾಗಿಲ್ಲ. ಗೋಶಾಲೆ ಆರಂಭ ವಿಳಂಬವಾಗಿರುವ ಬಗ್ಗೆ ಶಾಸಕ ಚೆನ್ನಬಸಪ್ಪ ಆಕ್ಷೇಪಿಸಿದರು. ಜಾಗವನ್ನ ಮೂರನೇಯವರು ಆಕ್ಷೇಪಿಸಲಾಗಿದೆ ಎಂದರೆ ಡಿಸಿ ಆದೇಶಕ್ಕೆ ಕಿಮ್ಮತ್ತು ಏನು ಎಂದು ಆರೋಪಿಸಿದರು.
ಇದನ್ನೂ ಓದಿ-https://suddilive.in/archives/18050