ಶನಿವಾರ, ಜುಲೈ 6, 2024

ವಾಜಪೇಯಿ ಲೇಔಟ್ ನ 158 ನಿವೇಶನ ಹಂಚಿಕೆ ರದ್ದು

ಸುದ್ದಿಲೈವ್/ಶಿವಮೊಗ್ಗ

ಸೂಡಾದಿಂದ ವಾಜಪೇಯಿ ಲೇಔಟ್ ನಲ್ಲಿ ಈ ಹಿಂದೆ ಹಂಚಿಕೆಯಾದ 1163ನಿವೇಶನಗಳಲ್ಲಿ 152 ನಿವೇಶನ ಹಂಚಿಕೆಯನ್ನ ಎಡಿಸಿ ನೇತೃತ್ವದ ಸಮಿತಿ ರದ್ದು ಮಾಡಿ ಆದೇಶ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ 2010-11 ರಲ್ಲಿವಾಜಪೇಯಿ 1163 ನಿವೇಶ ಹಂಚಿಕೆಯಾಗಿತ್ತು. ಜ್ಞಾನೇಶ್ ಅವರು ಸೂಡ ಅಧ್ಯಕ್ಷರಾಗಿದ್ದರು.  ಅವರ ಅವಧಿಯಲ್ಲಿ  ಹಂಚಿಕೆಯಾದಾಗ,  ಕಾನೂನು ಉಲ್ಲಂಘನೆ, ಸೀನಿಯರಿಟಿ ಮೂಲಕ ಹಂಚಿಕೆಯಾಗಿಲ್ಲ.

ಅಧ್ಯಕ್ಷರ ವಿವೇಚನಾ‌ಕೋಟದಲ್ಲಿ 142 ನಿವೇಶನ ಹಂಚಿಕೆಯಾಗಿದ್ದು ನಿಯಮ ಉಲ್ಲಂಘನೆ  ಆಗಿವೆ.  ಎಂಬ ಆರೋಪ ಕೇಳಿ ಬಂದಿತ್ತು. ಕುಟುಂಬಕ್ಕೆ ಒಂದುಸೈಟು ಎಂಬ ನಿಯಮವಿದ್ದರೂ ಉಲ್ಲಂಘಿಸಿ ಗಂಡ ಹೆಂಡತಿಗೆ ತಲಾ ಒಂದೊಂದು ಸೈಟು ನೀಡಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ಹಂಚಲಾದ ನಿವೇಶನಗಳು ರದ್ದಾಗಿವೆ.

ಈಎಲ್ಲಾ ಪ್ರಕರಣಗಳಲ್ಲಿ ಆಗಿನ ಜಿಲ್ಲಾಧಿಕಾರಿಗಳು ಎಡಿಸಿಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ನೀಡಲು ನ್ಯಾಯಾಲಯ ಆದೇಶಿಸಿತ್ತು. ಅದರ ಪ್ರಕಾರ 142 ನಿವೇಶನಗಳು ಮತ್ತು  32 ಗಂಡ ಹೆಂಟತಿ ಪ್ರಕರಣದಲ್ಲಿ 16ನಿವೇಶನಗಳ ಹಂಚಿಕೆ ರದ್ದಾಗಿದೆ.

ಲೋಕಾಯುಕ್ತದಲ್ಲಿ ರದ್ದಾದ ನಿವೇಶದಲ್ಲಿ 745 ರದ್ದಾಗಿತ್ತು.‌ಇದರ ವಿರುದ್ದ 228 ನ್ಯಾಯಾಲಯಕ್ಕೆ ಮೊದಲು ರಾಜ್ಯ ಉಚ್ಚನ್ಯಾಯಾಲಯಕ್ಕೆ ಹೋಗಿದ್ದರು. ನಂತರ  267 ಜನ ನ್ಯಾಯಾಲಯದ ಮೊರೆ ಹೋಗಿದ್ದರು.  ಅದರಲ್ಲಿ 250 ಪ್ರಕರಣ ನ್ಯಾಯಲಾಯಕ್ಕೆ ಹೋಗಿಲ್ಲ. ಸಮಿತಿ ಮುಂದೆ 347 ಅರ್ಜಿಗಳಲ್ಲಿ  158 ನಿವೇಶನ ಹಂಚಿಮೆ ರದ್ದಾಗಿದೆ. ಈ ಸಮಿತಿಯ ಮುಂದೆ 745 ಅರ್ಜಿಗಳು ಬರಲಿದ್ದು ಬಗೆಹರಿಸಲಾಗುತ್ತದೆ.  ಆಪೀಸ್ ನಲ್ಲಿರುವ 17 ಜರಿಗೆ ನೀಡಿದ ಒಟ್ಟು ನಿವೇಶನಗಳು ರದ್ದಾಗಿದೆ ಎಂದರು.

ರದ್ದಾದ ವ್ಯಕ್ತಿಗಳು ಮತ್ತೆ ನ್ಯಾಯಾಲಯದಮೊರೆ ಹೋಗದಿದ್ದರೆ ಈ ನಿವೇಶನಗಳು ಮರು ಹಂಚಿಕೆಯಾಗಲಿದೆ. ಇಲ್ಲವಾದಲ್ಲಿ ಮರು ಹಂಚಿಕೆ ಕಷ್ಟವೆಂದರು.

ಇದನ್ನೂ ಓದಿ-https://suddilive.in/archives/18626

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ