ಗುಡ್ಡೇಕಲ್ಲು ಬಾಲುಸುಬ್ರಹ್ಮಣ್ಯ ದೇವಸ್ಥಾನ |
ಸುದ್ದಿಲೈವ್/ಶಿವಮೊಗ್ಗ
ಈ ವರ್ಷದ ಆಡಿಕೃತ್ತಿಕೆ ಹರೋಹರ ಜಾತ್ರೆಯು ಜು.28 ಮತ್ತು 29 ರಂದು ನಡೆಯಲಿದೆ. ಜು.28 ರಂದು ಭರಣಿ ಕಾವಡಿ ಉತ್ಸವ ಮತ್ತು ಸೋಮವಾರ ಆಡಿಕೃತ್ತಿಕೆ ಹರೋಹರ ಜಾತ್ರೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ದೇವಸ್ಥಾನ ಟಸ್ಟ್ ನ ಅಧ್ಯಕ್ಷ ಡಿ.ರಾಜಶೇಖರ್, ಜಾತ್ರ ಮಹೋತ್ಸವಕ್ಕಾಗಿ ಬಸ್ ಮತ್ತು ಲಾರಿಗಳಿಗೆ ಮಾರ್ಗ ಬದಲಾಯಿಸಲಾಗುವುದು. ಹೊಳೆಬೆನವಳ್ಳಿ ಮತ್ತು ಇತರೆ ಎರಡು ಪಾಯಿಂಟ್ ನ್ನ ಗುರುತಿಸಿ ಬದಲೀ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಒಳಗೆ ಮತ್ತು ಹೊರಗೆ ಹೋಗಲು ಸುಗಮದಾರಿ ಮಾಡಲಾಗಿದೆ ಎಂದರು.
ದೇವಸ್ಥಾನದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಹಿಂದೆ ಪಿಕ್ ಪ್ಯಾಕೆಟ್, ಚೈನ್ ಸ್ನ್ಯಾಚಿಂಗ್ ನಡೆದ ಉದಾಹರಣೆಗಳಿವೆ. ಇವುಗಳು ಇತ್ತೀಚಿನ ವರ್ಷದಲ್ಲಿ ಕಡಿಮೆಯಾಗಿದೆ. ಕಳೆದ ಬಾರಿ ಮಹಿಳೆಯೋರ್ವಳಿಂದ ಮೊಬೈಲ್ ಕಳುವಾಗಿತ್ತು ಅದರ ವಿರುದ್ಧ ಸೂಕ್ತ ಕೈಗೊಳ್ಳಲಾಗಿದೆ ಎಂದರು.
ಬಾಯಿ ಮತ್ತು ಬೆನ್ನಿಗೆ ಸಿಗಿಸಿಕೊಂಡು ಬಂದು ಹರಕೆ ತೀರಿಸುವುದು ನಿರ್ಬಂಧವಿದೆ. ತಜ್ಞರನ್ನ ನೇಮಿಸಲಾಗುತ್ತದೆ. ಕಾವಡಿ ಹೊತ್ತು ಬರಲು ಅವಕಾಶವಿದೆ. ಚುಚ್ಚಿಕೊಂಡು ಬರುವುದು ಬೇಡ ಎಂಬುದು ಟ್ರಸ್ಟ್ ನ ಉದ್ದೇಶವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಜಾತ್ರೆ ಕುರಿತು ಡಿ.ರಾಜಶೇಖರ್ ಸುದ್ದಿಗೋಷ್ಠಿ |
151 ಅಡಿ ಬಾಲಮೂರ್ತಿಯನ್ನ ಸ್ಥಾಪಿಸಬೇಕಿತ್ತು. ಡಿಸಿ ಅನುಮತಿ ಹಾಕಿದಾಗ ಡಿಸಿ ಐದು ಅನುಮತಿ ನೀಡಿದ್ದರು ಪಾಲಿಜೆ, ಪೊಲೀಸ್, ಏರ್ ಪೋರ್ಟ್ ಅಥಾರಿಟಿಯಿಂದ ಅನುಮತಿ ಪಡೆಯಬೇಕಿದೆ. ಸಂಸದರು ಇದರ ಅನುಮತಿ ಕೊಡಿಸುವ ಜವಬ್ದಾರಿ ತೆಗೆದುಕೊಂಡಿದ್ದಾರೆ. ಅನುಮತಿ ಪಡೆದು ಏಕಶಿಲೆ ಪ್ರತಿಮೆ ನಿರ್ಮಸಲಾಗುವುದು ಎಂದರು.
ಬಾಲಸುಬ್ರಹ್ಮಣ್ಯ ಸ್ವಾಮಿಗೆ ಪ್ರತಿ ಮಂಗಳವಾರ ಕೃತ್ತಿಕೆ, ಷಷ್ಠಿ, ಹುಣ್ಣಿಮೆ ತೈಪೋಸಂ, ಪಂಗುನಿ, ಉತ್ತಿರ ರಥೋತ್ಸವ, ಕಾರ್ತಿಕ ದೀಪೋತ್ಸವದ ದಿನದಂದು ವಿಷೇಶ ಪೂಜೆ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜು, ರವಿಕುಮಾರ್, ರಘುಕುಮಾರ್, ಲೋಕೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ-https://www.suddilive.in/2024/07/blog-post_769.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ