ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಅರಣ್ಯ ಸಚಿವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಾಲ್ಕೈದು ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದು ಕಾಟಾಚಾರಕ್ಕೆ ನಡೆದ ಸಭೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ ಶ್ರೀನಿವಾಸ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಂದಾಯ ಸಚಿವ ಕೃಷ್ಣಭೈರೆಗೌಡರು ಮಲೆನಾಡಿನ ಸಮಸ್ಯೆ ಬಗೆಹರಿಸಲು ಆಗಲ್ಲ ಎಂದಿದ್ದರು. ಅವರ ಹೇಳಿಕೆ ಬೆನ್ನಲ್ಲೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಭೆ ನಡೆಸಿದ್ದಾರೆ. ಯಾವ ಉಪಯೋಗವಿಲ್ಲದ ಸಭೆಯಾಗಿದೆ. ಸಂಸದ ರಾಘವೇಂದ್ರ ಮತ್ತು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಭಾಗಿಯಾಗಿರುವುದು ನಗೆ ಪಾಟಲು ಎಂದು ಆರೋಪಿಸಿದರು
ಯಾವ ಮಾತನ್ನ ಆಡದ ಸಂಸದರು ಮತ್ತು ಮಾಜಿ ಸಚಿವರು ತಮ್ಮಅವಧಿಯಲ್ಲಿ ಏನೂಮಾಡದೆ ಈಗ ಅರಣ್ಯ ಸಚಿವರು ಬಂದಿದ್ದಾರೆ ಎಂದು ಸಭೆಯಲ್ಲಿ ಕಾಟಾಚಾರಕ್ಕೆ ಭಾಗಿಯಾಗಿದ್ದಾರೆ. ಅರಣ್ಯ ಹಕ್ಕಿನ ಬಗ್ಗೆ ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದರೆ ಅದೇ ಪಕ್ಷವರು ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು.
ಅರಣ್ಯ ಸಮಸ್ಯೆಯ ಬಗ್ಗೆ ಮನವಿ ನೀಡಲು ಹೋದಾಗ ಅರಣ್ಯ ಮಂತ್ರಿ ಸಭೆಗೆ ಹೋಗುವೆ ಎನ್ನುತ್ತಾರೆ. ಇನ್ ಸ್ಪೆಕ್ಟರ್ ಹಿಡಿದು ಎಳೆದಾಡುತ್ತಾರೆ ಎಂದ ತೀ.ನಾ.ಶ್ರೀ, ಪತ್ರಿಕೆಯವರು ಅರಣ್ಯ ಸಮಸ್ಯೆಯ ಬಗ್ಗೆ ಬರೆದಿದ್ದನ್ನ ಓದಿದ್ದರೆ ಸಮಸ್ಯೆ ಅರ್ಥ ಆಗುತ್ತಿತ್ತು. ಚುನಾವಣೆಗೂ ಮುನ್ನಾ ಸಿದ್ದರಾಮಯ್ಯ ಮತ್ತು ಡಿಕೆಶಿ ಶಿವಮೊಗ್ಗಕ್ಕೆ ಬಂದಾಗ ತಕ್ಷಣವೇ ಜಿಲ್ಲಾ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.
14 ತಿಂಗಳು ಆಯಿತು ಬಗೆಹರಿಸಲಾಯಿತು. ಇಗ ನ್ಯಾಯಾಲಯಕ್ಕೆ ಮದ್ಯಾಂತರ ಅರ್ಜಿ ಹಾಕಿರುವುದನ್ನೇ ಈ ಇಬ್ವರು ಅರಣ್ಯ ಮತ್ತು ಶಿಕ್ಷಣ ಸಚಿವರು ಚಂದ್ರಗ್ರಹಕ್ಕೆ ಹೋಗಿ ಬಂದವರಂತೆ ಮಾತನಾಡುತ್ತಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜ್ಯದಲ್ಲಿ ಹೊಂದಾಣಿಕೆ ಇದೆ. ಲೂಟಿಹೊಡೆಯಲು ಹೊಙದಾಣಿಕೆ ಇದೆ. ಜನರ ಸಮಸ್ಯೆ ಬಗೆಹರಿಸಲು ಇವರಿಗೆ ಒಟ್ಟಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲ್ಲಾ ಎಂದು ಕೆಂಡಕಾರಿದರು.
ಸಂಸತ್ ನಲ್ಲಿ ಸಂಸದ ಮಾತನಾಡಬೇಕು. ಅರಣ್ಯ ಸಚಿವರಿಗೆ ಮಲೆನಾಡ ಸಮಸ್ಯೆಯೇ ಗೊತ್ತಾಗುತ್ತಿಲ್ಲ. ಮಲೆನಾಡಿನ ಜನ ತ್ಯಾಗ ಮಾಡದಿದ್ದರೆ ಗಾಜನೂರು, ಭದ್ರ, ಸಾವೇಹಕ್ಲು, ಜೋಗ ಆಗ್ತಾಇರಲಿಲ್ಲ. ಸಂಸತ್ ನಲ್ಲಿ ಮಾತಬಾಡಬೇಕು. ಮದನ್ ಗೋಪಾಲ್ ಎಂಬ ಅಧಿಕಾರಿಗಳು ಅರಣ್ಯ ಹಕ್ಕು ಕಾಯ್ದೆಗೆ ಕೇಂದ್ರದ ಅನುಮತಿ ಬೇಡ ಎಂದು ವಾದಿಸಿದ್ದವರು. ಸುಪ್ರೀಂ ಕೋರ್ಟ್ ಚಂದ್ರಗ್ರಹದಲ್ಲಿಲ್ಲ. ಕೇಂದ್ರ ಸರ್ಕಾರದ ಮೂಲಕ ಸಮಸ್ಯೆ ಬಗೆಹರಿಸಿ ಎಂದರು.
ನಿನ್ನ ಗಲಾಟೆಗೆ ಹೋಗಿಲ್ಲ. ಆದರೆ ಇನ್ನು ಮುಂದೆ ನಮ್ಮ ಭಾಷೆ ಬೇರೆಯಾಗಬೇಕಿದೆ. ಬರುವ ಸಚಿವರಿಗೆ ಬೇರೆ ಭಾಷೆಯಲ್ಲಿ ಮಾತನಾಡಬೇಕಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ-https://suddilive.in/archives/19073
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ