ಶನಿವಾರ, ಜುಲೈ 6, 2024

ಸಿದ್ದರಾಮಯ್ಯ ಸರ್ಕಾರ ರೈತರ ಹಿತ ಕಾಪಾಡಲು ವಿಫಲ

ಸುದ್ದಿಲೈವ್/ಶಿವಮೊಗ್ಗ

ರೈತ ಮುಖಂಡ ಚಂದ್ರಶೇಖರ್ ಕೋಡಿಹಳ್ಳಿ ಶಿವಮೊಗ್ಗದಲ್ಲಿಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯನವರ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಹೆಚ್ ಎಸ್ ರುದ್ರಪ್ಪನವರ ನೆನಪಿನ ಜೂ.19 ರಂದು ನಡೆಯಲಿ ಕಾರ್ಯಕ್ರಮದ ಬಗ್ಗೆ ಸುದ್ದಿಗೋಷ್ಠಿನಡೆಸಲು ಬಂದ ಚಂದ್ರಶೇಖರ್, ಐದು ಗ್ಯಾರೆಂಟಿಗಿಂತ ತಮ್ಮಗಾರೆಂಟಿ ರಚಿಸಲು ಮುಂದಾಗಿರುವುದು ವಿಫಲರಾಗಿದರು.

ಬರಗಾಲದಿಂದ ಆದ ನಷ್ಠ ದೊಡ್ಡದು. ಕೇಂದ್ರಕಕೆ36 ಸಾವಿರ ರೂ ನಷ್ಠವೆಂದು ಅಂದಾಜಿಸಲಾಯಿತು. ಕೇಂದ್ರ 17 ಸಾವಿರ ಕೋಟಿ ಕೊಟ್ಟರೆ ಎಂದು ಹೇಳಿತು. ನಂತರ 3 ಸಾವಿರ ಕೋಟಿ ಕೊಟ್ಟ ಕೇಂದ್ರದ ಹಣವನ್ನ 200 ಕೋಟಿ ಕೊಟ್ಟು ಕೈತೊಳೆದುಕೊಂಡಿತು.

ಗ್ಯಾರೆಂಟಿಯನ್ನೂ ಸಂಪೂರ್ಣ ನೀಡದ ರಾಜ್ಯ ಸರ್ಕಾರ ಬರಗಾಲವನ್ನ ನಿಭಾಯಿಸಲಾಗಲಿಲ್ಲ. ಉತ್ಪಾದಕನಾಗಿರುವ ರೈತನಿಗೆ ಚೈತ್ನನ್ಯ ತುಂಬುವ ಬದಲು

ಕೃಷಿ  ಕಾಯ್ದೆಯನ್ನು ಭೂಮಿಕಾಯ್ದೆಯನ್ನ ತಂದಾಗಸಿಡಿದೆದ್ದ ಸಿದ್ದರಾಮಯ್ಯನವರು ಇದನ್ನ ತಡೆದುಹಿಡಿದು ಸುಧಾರಣ ನೀತಿ ತರಬೇಕಾದ ಸಿಎಂ ರೈತರಲ್ಲದವರು ಕೃಷಿಗೆ ಕೈಹಾಕುವಂತಿಲ್ಲ ಎಂಬ ಕಾನೂನು ತರುವ ಬದಲು ಬಿಎಸ್ ವೈ ತಂದ ಕಾಯ್ದೆಯನ್ನೇ ಜಾರಿಗೆ ತಂದು ರೈತರ ಬಾಯಿಗೆ ಮಣ್ಣು ಹಾಕಲಾಗಿದೆ.

ಭೂಸುಧಾರಣ ಕಾಯ್ದೆ ಜಾರಿಗೆ ತಂದ ಕಾರಣ 10ಲಕ್ಷ ಜನ ಕೃಷಿಯಿಂದ ದೂರ ಉಳಿದರು. ಎಪಿಎಂಸಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಖಾಸಗಿ ಅವರಿಗೆ ಅವಕಾಶ ನೀಡಲಾಗಿದೆ. ಕೆಟ್ಟ ಪರಿಣಾಮವಿದು. ಇದನ್ನ ತಕ್ಷಣ ವಾಪಾಸ್ ಪಡೆಯಬೇಕು.‌ ಸರ್ಕಾರಾಡ್ಡದಾರಿಯಲ್ಲಿ ಹೋಗುತ್ತಿದೆ ತಿದ್ದುಪಡಿ ಮಾಡಿಕೊಳ್ಳಬೇಕು.

ವಾಲ್ಮೀಖಿ ಅಭಿವೃದ್ಧಿ ನಿಗಮದ ಹಣ ಖಾಸಗಿಯವರಿಗೆ ಹಣ ಹೋಗುತ್ತೆ ಎಂದರೆ ಸರ್ಕಾರ ಸತ್ತುಹೋಗಿದೆಯಾ? ಬಿಡಿಎ ಸೈಟ್ ನ್ನ ಬಡವರಿಗೆ ಕೊಟ್ಟು ತಪ್ಪಾಯಿತು ಎನ್ನಿ ಅದರ ಬದಲು ಸಮರ್ಥಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ರಾಕೇಶ್ ಟಿಕಾಯಿತ್ ಅವರು ಕಾಂಗ್ರೆಸ್ ಬಿಜೆಪಿಯಿಂದ ಚುನಾವಣೆ ಸ್ಪರ್ಧಿಸಿ ವಿಫಲರಾಗಿದ್ದರು. ರೈತರ ಹೋರಾಟ ಮುಂದು ವರೆದಿತ್ತು. ಭಾತಮರತದಲ್ಲಿ ಕೃಷಿ ಕಾಯ್ದೆ ವಿತ್ ಡ್ರಾ ಆಗಿತ್ತು. ಈ ಕಾಯ್ದೆಯನ್ನ ಕರ್ನಾಟಕದಲ್ಲಿ ವಿತ್ ಡ್ರಾ ಮಾಡಲು ಹೇಳಬೇಕಿತ್ತು. ಅದನ್ನ ಹೇಳದ ಟಿಕಾಯಿತ್ ಕಾತ್ಯಕ್ರಮವೊಂದಕ್ಕೆ ಸಿದ್ದರಾಮಯ್ಯತನ್ನ ಆಹ್ವಾನಿಸಲು ಬಂದಿರುವುದು ಸರಿಯಲ್ಲ ಎಂದು ಗುಡುಗಿದರು.

ರೈತ ಸಾಲ ಕಟ್ಟದಿದ್ದರೆ ಕೆನರಾ ಬ್ಯಾಂಕ್ ರೈತರ ಮನೆಗೆ ಬೀಗ ಹಾಕುತ್ತಿದೆ. ಇದನ್ನ ತಡೆಯಬೇಕು ಎಂದು ಆಗ್ರಹಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ