ಸುದ್ದಿಲೈವ್/ಶಿವಮಗ್ಗ
ಸರ್ಕಾರಿ ಕಟ್ಟಡಗಳ ಉದ್ಘಾಟನೆಗೆ ಮುನ್ನವೇ ಸೋರುತ್ತಿರುವ ಬಗ್ಗೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತೀವ್ರವಾಗ್ದಾಳಿ ನಡೆಸಿ ಭ್ರಷ್ಠಾಚಾರ ನಡೆದಿರುವ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಪೊಲೀಸ್ ವಸತಿ ಕಟ್ಟಡ, ಅಗ್ನಿಶಾಮಕದಳ ಕಚೇರಿ, ಗ್ರಾಮೀಣ ಅಭಿವೃದ್ಧಿ ಭವನ ಸೇರಿ ಬಿಜೆಪಿ ಅವಧಿಯಲ್ಲಿ ಕಾಮಗಾರಿ ನಡೆದಿದೆ. ಈ ಕಾಮಗಾರಿ ಉದ್ಘಾಟನೆಗೂ ಮುನ್ನ ಸೋರುತ್ತಿದೆ. ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ 100 ಕೋಟಿಗೂ ಅಧಿಕ ಬ್ರಹ್ಮಾಂಡ ಭ್ರಷ್ಠಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಸಣ್ಣ ಮಳೆಗೆ ಸೋರುತ್ತಿದೆ. ಮಲೆನಾಡಿನಲ್ಲಿ ಮಳೆ ಸಾಮಾನ್ಯ ಬಹುತೇಕ ಎಲ್ಲಾಕಾಮಗಾರಿ ಕಳಪೆಯಾಗಿದೆ. ಬಿಜೆಪಿ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಮತ್ತು ಕಟ್ಟಡದ ಕಾಮಗಾರಿಗಳು ಬಹುತೇಕ ಭ್ರಷ್ಠಾಚಾರ ನಡೆದಿರುವ ಶಂಕೆ ಇದೆ. ಕಳಪೆ ಕಾಮಗಾರಿ ಮತ್ತು ಭ್ರಷ್ಠಾಚಾರದಲ್ಲಿ ತಮ್ಮದು ಏನಾದರು ಪಾತ್ರವಿದೆಯಾ ಎಂದು ಆಯನೂರು ಮಂಜುನಾಥ್ ತೀರ್ಥಹಳ್ಳಿ ಶಾಸಕ ಆರಗರನ್ನ ಪ್ರಶ್ನಿಸಿದ್ದಾರೆ.
ಪಾತ್ರಿಲ್ಲವೆಂಬುದಾದರೆ ನೀವು ಸ್ಪಷ್ಟಪಡಿಸಬೇಕು ಹಾಗೂ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವರು ಮೊನ್ನೆ ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಟ್ಟಡಗಳ .ಉದ್ಘಾಟನೆ ಕಾರ್ಯಕ್ರಮದಲ್ಲಿ ಸೌಜನ್ಯಕ್ಕೆ ಕಟ್ಟಡವು ಸೋರುತ್ತಿದೆ ಎಂದಿದ್ದಾರೆ ಎಂದ ಆಯನೂರು ಮಂಜುನಾಥ್ ತೀರ್ಥಹಳ್ಳಿಯಿಂದ ಕೋಣಂದೂರು ತನಕ ಸಚಿವ ಮಧು ಬಂಗಾರಪ್ಪನವರ ಕಾರಿನಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರಯಾಣಬೆಳೆಸಿ ಕಟ್ಟಡ ಸೋರುವಿಕೆ ಬಗ್ಗೆ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಈ ಹೇಳಿಕೆ ಕುತೂಹಲ ಮೂಡಿಸಿದೆ.
ಈ ಹೊಂದಾಣಿಕೆ ರಾಜಕಾರಣ ಸಾರ್ವಜನಿಕರ ತೆರಿಗೆ ಹಣ ಪೋಲಾಗಲು ಕಾರಣವಾಗ್ತಾ ಇದೆಯಾ ಎಂಬ ಅನುಮಾನ ಹೆಚ್ಚಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಜಿಲ್ಲೆಯಲ್ಲಿ ನಡೆಯುವ ಭ್ರಷ್ಠಾಚಾರ ಹೊರಬೀಳದಂತೆ ಕಾಪಾಡುವ ಶಕ್ತಿ ಯಾವುದು ಎಂಬ ಪ್ರಶ್ನೆಯೊಂದಿಗೆ ಆಯನೂರು ಅವರ ಸುದ್ದಿಗೋಷ್ಠಿ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ-https://suddilive.in/archives/19311
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ