ಇಮಾಮ್ ಬಾಡಾ, ಸೀಗೆಹಟ್ಟಿ ಹಾಗೂ ಕುಂಬಾರ ಗುಂಡಿ ಬಡಾವಣೆ ನಿವಾಸಿಗರಿಗೆ ಪಾಲಿಕೆ ಅಲರ್ಟ್ ಯಾಕೆ ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆಯ ವತಿಯಿಂದ ಇಮಾಮ್ ಬಾಡಾ, ಕುಂಬಾರಗುಂಡಿ ಹಾಗೂ ಸೀಗೆಹಟ್ಟಿಯಲ್ಲಿ ನದಿಗಳಲ್ಲಿಹೆಚ್ಚು ನೀರು ಹರಿಸುವ ಮುನ್ನಚ್ಚರಿಕೆ ನೀಡಲಾಗಿದೆ.

ಇಂದು ಸಂಜೆ ಬಿಬಿ ಸ್ಟ್ರೀಟ್, ಇಮಾಮ್ ಬಾಡಾ, ಸೀಗೆಹಟ್ಟಿ, ಕುಂಬಾರಗುಂಡಿಯಲ್ಲಿ ತುಂಗನದಿಗೆ ಇಳಿಯದಂತೆ ಹತ್ತಿರ ಹೋಗದಂತೆ ಪಾಲಿಕೆ ಎಚ್ಚರಿಸಿದೆ. ಈ ಕುರಿತು ಪಾಲಿಕೆ ವಾಹನದಲ್ಲಿ ಅಲರ್ಟ್ ಮಾಡಲಾಗುತ್ತಿದೆ.

ಇಂದು ಸಂಚೆಯ ವೇಳೆಗೆ ನದಿಗೆ ಗಾಜನೂರು ಜಲಾಶಯದಿಂದ 42 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ನಂತರ ಈ ನೀರಿನ ಮಟ್ಟ 60 ಕ್ಯೂಸೆಕ್ ಗೆ ಏರಿಕೆಯಾಗಿದೆ. ಯಾವುದೇ ವೇಳೆ  70 ಸಾವಿರ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆಯಿರುವುದರಿಂದ ಅಲರ್ಟ್ ಘೋಷಿಸಲಾಗಿದೆ.

90 ರಿಂದ 1 ಲಕ್ಷ‌ಕ್ಯೂ ಸೆಕ್ ನೀರು ಹರಿದು ಬಂದರೆ ನಗರ ಪ್ರದೇಶದ ನದಿ ಬುಡದ ಜನರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. 2019 ರಲ್ಲಿ 1.40 ಕ್ಯೂಸೆಕ್ ನೀರು ಹರಿದು ಬಂದುಸೇತುವೆಯ ಬುಡಕ್ಕೆ ಬಡದಿತ್ತು. ಸಧ್ಯಕ್ಕೆ ಗಾಜನೂರು ಜಲಾಶಯದ 22 ಗೇಟನ್ನ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/18519

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close