ಸುದ್ದಿಲೈವ್/ಶಿವಮೊಗ್ಗ
ಚಕ್ರ- ಸಾವೆಹಕ್ಲು ಮುಳುಗಡೆ ಸಂತ್ರಸ್ಥರ ಖಾತೆ ಜಮೀನಿಗೆ ಪಟ್ಟಣದ ದಂಧೆಕೋರರು ಆಕ್ರಮ ಪ್ರವೇಶ ಮಾಡಿ ಕೃಷಿ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಚಕ್ರ-ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಸಮಿತಿಯು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ.
ಶಿವಮೊಗ್ಗ ತಾಲ್ಲೂಕು, ಮುಳುಗಡೆ ಸಂತ್ರಸ್ಥರು ಸ್ವಾಧೀನಾನುಭವದಲ್ಲಿರುವ ಕೆಲವು ಪೋಡಿಯಾಗಿರುವಂತಹ ಜಮೀನಿಗೆ-ಶಿವಮೊಗ್ಗದ ಆಕ್ರಮ ದಂಧೆಕೋರರು ಯಾವುದೇ ಖಾತೆ, ಪಹಣಿ, ದಾಖಲೆಗಳು ಇಲ್ಲದೇ ಇರುವಂತಹ ಸಂತ್ರಸ್ಥರ ಮೀಸಲು ಜಮೀನಿಗೆ ಪ್ರವೇಶಿಸಬಾರದೆಂದು ಸರ್ಕಾರಿ ಆದೇಶವಿದ್ದರೂ ಕೂಡ.
ಆಕ್ರಮವಾಗಿ ಜಮೀನಿಗೆ ಪ್ರವೇಶ ಮಾಡಿ ರಾತ್ರಿ ವೇಳೆಯಲ್ಲಿ ಸಂತ್ರಸ್ಥರ ಜಮೀನಿನ ಮಣ್ಣನ್ನು ಜೆ.ಸಿ.ಬಿ. ಮೂಲಕ ತೆಗೆದು ಆಕ್ರಮವಾಗಿ ಪಟ್ಟಣಕ್ಕೆ ಮಾರಾಟ ಮಾಡಿ ದಂಧೆ ನಡೆಸುತ್ತಿದ್ದಾರೆ ಖಾತೆ ಪಹಣಿ ಹೊಂದಿ ಜೋಡಿಯಾಗಿರುವ ಜಮೀನಿಗೆ 25 ಕ್ಕಿಂತ ಅಧಿಕ ಜನರ ಗುಂಪು ಈ ಮಣ್ಣು ತೆಗೆಯುವ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದೆ. ಶಿವಮೊಗ್ಗ ನಗರದ 15 ಕಿ. ಮೀ. ದೂರದ ರಾಗಿಗುಡ್ಡದ ವಾಸಿಯಾದ 1). ನಾಸೀರ್ವುದ್ದೀನ್ ರವರ ಒಂದು ಗುಂಪು,
ಅಲ್ತಾಫ್ ಅಹ್ಮದ್ ರವರ ಎರಡನೇ ಗುಂಪು, ರಿಯಾಜ್ ಅಹ್ಮದ್ ಅವರ ಮೂರನೇ ಗುಂಪು ಸೇರಿ ಇತರೇ 15 ಕ್ಕೂ ಅಧಿಕ ಜನರ 5-6 ಕ್ಕೂ ಅಧಿಕ ಗುಂಪುಗಳನ್ನು ಕಟ್ಟಿಕೊಂಡು ಬಂದು ಸಂತ್ರಸ್ಥರ ಜಮೀನಿಗೆ ಆಕ್ರಮ ಪ್ರವೇಶ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೃಷಿ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದು, ಈ ಕೂಡಲೇ ದೌರ್ಜನ್ಯ ನೆಡೆಸುತ್ತಿರುವವರನ್ನು ಬಂದಿಸುವಂತೆ ಕೋರಿ ಮುಳುಗಡೆ ಸಂತ್ರಸ್ಥರ ಸಮಿತಿಯ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_867.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ