ಜಿಲ್ಲೆಯ ಪ್ರಮುಖ ನದಿಗಳ ಜಲಾಶಯಗಳಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ನೀರಿನ ಮಟ್ಟ ಏರಿಕೆಯಾಗಿದೆ. ತುಂಗ, ಭದ್ರ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ನಿನ್ನೆ ಭದ್ರ ಜಲಾಶಯದಲ್ಲಿ 148.3 ಅಡಿ ಇದ್ದ ನೀರಿನ ಮಟ್ಟ ಕಳೆದ 24 ಗಂಟೆಗಳಲ್ಲಿ 153 ಅಡಿ ಹೆಚ್ಚಳಿಕೆಯಾಗಿದೆ. ಸರಿಸುಮಾರು 5 ಅಡಿ ನೀರು ಹರಿದುಬಂದಿದೆ. ನಿನ್ನೆ 27 ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ, ಇಂದು 42,165 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಈ ದಿನಕ್ಕೆ ಡ್ಯಾಂ ನ ಮಟ್ಟ ಸರಿಸುಮಾರು 145 ಅಡಿಗೆ ಏರಿಕೆಯಾಗಿತ್ತು.
ಅದರಂತೆ ತುಂಗ ಜಲಾಶಯಕ್ಕೆ 71454 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 70 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದ್ದು, 1000 ಕ್ಯೂಸೆಕ್ ನೀರನ್ನ ತುಂಗ ಮೇಲ್ದಂಡೆಯಲ್ಲಿ ಹರಿಸಲಾಗುತ್ತಿದೆ.
ಅದರಂತೆ ಲಿಂಗನಮಕ್ಕಿಯಲ್ಲಿ ಕಳೆದ 24 ಗಂಟೆಯಲ್ಲಿ 3.10 ಅಡಿ ನೀರು ಸಂಗ್ರಹವಾಗಿದೆ. 69226 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ನಿನ್ನೆ 1784.70 ಅಡಿ ನೀರು ಸಂಗ್ರಹವಾಗಿದ್ದರೆ. ಇಂದು 1787.80 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಲಿಂತ ಈ ವರ್ಷ ಸರಿಸುಮಾರು 30 ಅಡಿ ನೀರು ಸಂಗ್ರಹವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ