ಸುದ್ದಿಲೈವ್/ಶಿರಾಳಕೊಪ್ಪ
ಶಿರಾಳಕೊಪ್ಪ ಪೊಲೀಸ್ ಠಾಣೆಯ ಪಿಎಸ್ ಐ ಅವರು ಗೋಹತ್ಯೆ ವಿಚಾರದಲ್ಲಿ ಕಾನೂನು ರೀತಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಇಂದು ಹಿಂದೂ ಸಙಘಟನೆಗಳ ಒಕ್ಕೂಟ ಶಿಕಾರಿಪುರ ಸಿಪಿಐಗೆ ಮನವಿ ನೀಡಿದೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಒಂದು ಸೂಕ್ಷ್ಮ ಪ್ರದೇಶವಾಗಿದ್ದು ಸುಮಾರು ಒಂದು ವರ್ಷಕ್ಕೆ ಮೇಲ್ಪಟ್ಟಂತೆ ಶಿರಳಕೊಪ್ಪದಲ್ಲಿ ನಡೆಯುತ್ತಿರುವ ಗೋ ಹತ್ಯೆಯನ್ನು ವಿರೋಧಿಸಿ ಕಾನೂನಾತ್ಮಕವಾಗಿ ಹಿಂದೂ ಸಂಘಟನೆಗಳು ಸಂಘಟನೆಯ ಕಾರ್ಯಕರ್ತರು ಶಿಕಾರಿಪುರ ತಾಲೂಕು ಕಚೇರಿಗೆ ಶಿರಾಳಕೊಪ್ಪ ಪುರಸಭೆ ಕಚೇರಿಗೆ ಮತ್ತು ಸಿಪಿಐ ಕಚೇರಿಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಶಿವಮೊಗ್ಗ ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಗೋ ಹತ್ಯೆ ನಡೆಯುತ್ತಿರುವುದು ತಡೆಯಬೇಕಾಗಿ ಹಲವಾರು ಬಾರಿ ಮನವಿ ಮತ್ತು ಆಗ್ರಹ ಪತ್ರಗಳನ್ನು ನೀಡಿರುವುದಾಗಿ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಜನಜಾಗೃತಿ ಹೋರಾಟಗಳನ್ನು ಮಾಡಿದ್ದು ಕೆಲವು ಪ್ರಕರಣಗಳ ಮಾಹಿತಿಯನ್ನು ನೀಡಲಾಗಿದೆ. ಮೊನ್ನೆ ಬಕ್ರೀದ್ ಹಬ್ಬದ ದಿನದಂದು ಶಿರಾಳಕೊಪ್ಪದಲ್ಲಿ ಕಂಡು ಬಂದ ಪ್ರಕರಣದಲ್ಲಿ ಸಾವಿರಾರು ಗೋವುಗಳ ಹತ್ಯೆ ಮಾಡಿ ತಂದು ಹಾಕಿರುವ ಖಲೀಜಗಳು ಮತ್ತು ಅವಶೇಷಗಳು ಕಂಡು ಬಂದಿದೆ. ಇದು ಕಾನೂನು ವಿರೋಧಿ ಕೃತ್ಯವಾಗಿದೆ. ಜೂ.17 ರಂದು 10 ಗಂಟೆ ಸುಮಾರಿಗೆ ಸಾಮಾಜಿಕ ಕಾರ್ಯಕರ್ತ ದೇವರಾಜ್ ರವರು ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಇನ್ಸ್‌ಪೆಕ್ಟರ್ ರುದ್ರೇಶ್ ರವರಿಗೆ ಕರೆ ಮಾಡಿ ಹಳ್ಳೂರ್ ಕೇರಿ ಸರ್ಕಲ್ ಇಂದ ಮುಂಭಾಗದ ಜಮೀನಿನಲ್ಲಿ ಹಲವಾರು ಗೋವುಗಳನ್ನು ಹತ್ಯೆ ಮಾಡಿ ಗೋವುಗಳ ಖಲೀಜಗಳನ್ನು ತಂದು ಹಾಕಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿತ್ತು.
ಅವರು ಸಬ್ ಇನ್ಸ್ಪೆಕ್ಟರ್ ಅವರಿಗೆ ಹೇಳಿ ಕಳಿಸುತ್ತೇನೆ ಬರುತ್ತಾರೆ ಎಂದು ಭರವಸೆ ನೀಡಿದ್ದರು. ಸಾವಿರಾರು ಗೋವುಗಳನ್ನು ಹತ್ಯೆ ಮಾಡಿ ಖಲೀಜುಗಳನ್ನು ಬಿಸಾಡಿರುವ ಸರ್ವೇ ನಂಬರ್ 21ರ ಶಿರಾಳಕೊಪ್ಪ ಸ್ಥಳದಲ್ಲಿ ದೇವರಾಜ್ ರವರು ಇದ್ದು ಅದರ ಮಧ್ಯೆ ಕೆಲವರು ಬಂದು ದೇವರಾಜ್ ರವರ ಮೇಲೆ ಹಲ್ಲೆಯನ್ನು ಸಹ ಮಾಡಿದ್ದಾರೆ.
ಇನ್ಸ್ಪೆಕ್ಟರ್ ಸಬ್ ಇನ್ಸ್ಪೆಕ್ಟರ್ ಮತ್ತು ತಾವುಗಳು ಸ್ಥಳಕ್ಕೆ ಬಂದು ದೇವರಾಜ್ ರವರನ್ನು ರಕ್ಷಿಸಿದ್ದು ಜೀಪ್ ನಂ ಕೆ.ಎ-14 ಜಿ-1194 ಸಂಖ್ಯೆಯ ಶಿರಳಕೊಪ್ಪ ಠಾಣೆಯ ಜೀಪ್ ನಲ್ಲಿ ದೇವರಾಜ್ ರವರನ್ನು ಕಳಿಸಿಕೊಟ್ಟಿದ್ದು ದೇವರಾಜ್ ರವರ ಮೇಲೆ ಹಲ್ಲೆ ಆದ ವಿಚಾರವಾಗಿ ಶಿರಳಕೊಪ್ಪ ಠಾಣೆಯಲ್ಲಿ ಈ ಸಂಬಂಧ 0134/2024 ಪ್ರಕರಣವು ಸಹ ದಾಖಲಾಗಿರುತ್ತದೆ ಮತ್ತು ನಡೆದಿರುವ ಗೋಹತ್ಯೆ ವಿಚಾರವಾಗಿ ಸಹ ದೇವರಾಜ್ ರವರು ದೂರನ್ನು ನೀಡಿದ್ದು ಸುಮೊಟೊ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಪ್ರಕರಣ ಸಂಖ್ಯೆ 0133/ 2024 ಸುಮೊಟೊ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ ಎಂದು ದಾಖಲಿಸಲಗಿದೆ.
ದಾಖಲಿಸಿಕೊಂಡಿರುವ ಸುಮೊಟೊ ಪ್ರಕರಣದಲ್ಲಿ ಗೋಮಾಂಸದ ತ್ಯಾಜ್ಯಗಳು ಇರುವುದು ಸತ್ಯ ಬಿಟ್ಟರೆ ಉಳಿದೆಲ್ಲ ವಿಚಾರಗಳು ಸತ್ಯಕ್ಕೆ ದೂರವಾಗಿದ್ದು ವೈದ್ಯಾಧಿಕಾರಿಗಳು ಸಹ ಪ್ರಕರಣದಲ್ಲಿ ಸೂಚಿಸುವ ಸಮಯಕ್ಕೆ ಠಾಣೆಗೆ ಬಂದಿರುವುದಿಲ್ಲ ಠಾಣೆಯ ಸಿಸಿಟಿವಿ ಪುಟೇಜನ್ನು ತಾವುಗಳು ಪರೀಕ್ಷಿಸಿದರೆ ಸತ್ಯಾಂಶ ಹೊರಬರುತ್ತದೆ. ಸಂಪೂರ್ಣ ಪ್ರಕರಣದ ಸಮಯ ಪಂಚನಮೆಯ ಸಮಯ ಸ್ಥಳಕ್ಕೆ ಭೇಟಿ ನೀಡಿರುವ ಸಮಯ ಎಲ್ಲವೂ ಸುಳ್ಳಾಗಿದ್ದು ಆಗ ತಾನೆ ತಂದು ಹಾಕಿರುವ ಗೋವಿನ ಕಲೀಜಗಳು ಸ್ಥಳದಲ್ಲಿ ಇದ್ದರೂ 8-10 ದಿನದ ಮುಂಚೆ ತಂದು ಹಾಕಿದ್ದಾರೆ ಎಂದು ಉದ್ದೇಶಪೂರ್ವಕವಾಗಿ ಪ್ರಕರಣದ ವರದಿಯನ್ನು ತಮ್ಮ ಇಷ್ಟಕ್ಕೆ ಬಂದಂತೆ ಸುಳ್ಳಾಗಿ ದಾಖಲಿಸಿಕೊಂಡಿದ್ದಾರೆ
ಹಾಗಾದರೆ 8-10 ದಿನಗಳ ಮುಂಚೆ ಸಾವಿರಾರು ಗೋವುಗಳು ಹತ್ಯೆ ಮಾಡಿ ತಂದು ಹಾಕಿರುವುದು ಏಕೆ ಇವರ ಗಮನಕ್ಕೆ ಬಂದಿಲ್ಲ ಸುಮಾರು ಸಾವಿರಾರು ಗೋವುಗಳು ಹತ್ಯೆ ಆದರೂ ಸಹ ಮೂರು ನಾಲ್ಕು ತಿಂಗಳಿನಲ್ಲಿ ಸಬ್ ಇನ್ಸ್ಪೆಕ್ಟರ್ ರವರು ಮೇಲ್ನೋಟಕ್ಕೆ ಮಾತ್ರ ನಾವು ನೀಡಿರುವ ಮಾಹಿತಿ ಆದರದ ಮೇಲೆ ಕೆಲವು ಪ್ರಕರಣಗಳನ್ನು ದಾಖಲಿಸಿ ಕೊಂಡು ಕೆಲಸ ನಿರ್ವಹಿಸುತ್ತಿರುವುದು ಎದ್ದು ಕಾಣುತ್ತಿದೆ.
ಈ ಎಲ್ಲ ವಿಚಾರಗಳನ್ನು ನೋಡಿದರೆ ಮೇಲ್ನೋಟಕ್ಕೆ ಗೋ ಹಂತಕರ ಜೊತೆಯಲ್ಲಿ ಸಬ್ ಇನ್ಸ್ಪೆಕ್ಟರ್ ರಮೇಶ್ ರವರಿಗೆ ಸಂಬಂಧ ಇದೆ ಎಂಬ ಅನುಮಾನ ಮೂಡಿ ಬರುತ್ತಿದೆ. ಪ್ರಕರಣವನ್ನು ಹಾದಿ ತಪ್ಪಿಸಲು ಮೇಲ್ಕಂಡ ರೀತಿಯಲ್ಲಿ ಸುಮೋಟೋ ಪ್ರಕರಣವನ್ನು ದಾಖಲು ಮಾಡಿರುವ ಸಬ್ ಇನ್ಸ್ಪೆಕ್ಟರ್ ರಮೇಶ್ ಮತ್ತು ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಈ ಕೂಡಲೇ ಮೂರು ದಿನಗಳಲ್ಲಿ ತನಿಖೆ ಮಾಡಿ ಅಮಾನತುಗೊಳಿಸಬೇಕಾಗಿ ಒಕ್ಕೂಟ ಆಗ್ರಹಿಸುತ್ತಿದ್ದೇವೆ.
ಮತ್ತು ಶಿರಾಳಕೊಪ್ಪದಲ್ಲಿ ಸಂಪೂರ್ಣ ಗೋಹತ್ಯೆ ನಿಲ್ಲಿಸಬೇಕೆಂದು ಆಗ್ರಹಿಸಿರುವ ಒಕ್ಜೂಟ. ನಮ್ಮ ಈ ಎರಡು ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ಗೋ ಹತ್ಯೆಯಿಂದ ನೊಂದ ಹಿಂದೂ ಸಮಾಜ ಇವೆಲ್ಲ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಕಾನೂನಾತ್ಮಕ ಹೋರಾಟವನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿ ಜನಂದೋಲನ ಚಳುವಳಿಯನ್ನು ನಡೆಸಲಾಗುತ್ತದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಮಯದಲ್ಲಿ ಶಿವರಾಜ್. ಪ್ರದೀಪ್. ಎಸ್ ಕೆ ಮೂರ್ತಿ. ಲೋಕೇಶ್. ಕುಮಾರಸ್ವಾಮಿ. ಶರತ್. ಸದ್ಗುಣ.ರಾಜ್ ಭಜರಂಗಿ. ವಿಶ್ವಣ್ಣ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/18566