ಶನಿವಾರ, ಜುಲೈ 20, 2024

ಮಳೆಗೆ ಮನೆ ಮತ್ತು ಗೋಡೆಗಳು ಹಾನಿಯ ಜೊತೆಗೆ ವಾಹನಗಳು ಜಖಂ


 ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದಲ್ಲಿ ಮಳೆಯು ಅವಾಂತರ ಸೃಷ್ಠಿಸಿದೆ. ಮಳೆಗಳ ಆರ್ಭಟಕ್ಕೆ ಮನೆಗಳು ಮತ್ತು ಮನೆಯ ಗೋಡೆಗಳು ಹಾಗೂ ಮರಗಳು ಉರುಳಿ ಬೀಳಲು ಆರಂಭಿಸಿದೆ. 


ಬುದ್ದವಾರ ಬಿದ್ದ ಮಳೆಯು ಬುದ್ದನಗರದ ಸರ್ಕಾರಿ ಶಾಲೆ ಕಾಂಪೌಂಡ್ ಕುಸಿದಿದೆ. ಸ್ಕೂಲ್ ಕಾಂಪೌಡ್ ಉರುಳಿ ‌ಬಿದ್ದಿದ್ದರೆ ಹಾನಿ ಎಂದು ಸುದ್ದಿ ಆಗಿ ಬಿಡುತ್ತಿತ್ತು. ಆದರೆ ಕಾಂಪೌಡ್ ಪಕ್ಕದಲ್ಲಿ ನಿಲ್ಲಿಸಿದ್ದ 800 ಕಾರಿನ ಮೇಲೆ ಉರುಳಿ ಬಿದ್ದು ಕಾರು ಜಖಂಗೊಳ್ಳುವಂತೆ ಮಾಡಿದೆ. 


ಇದರ ಜೊತೆಗೆ 800 ಕಾರಿನ ಹಿಂಭಾಗದಲ್ಲಿ  ನಿಂತಿದ್ದ ಓಮಿನಿ ಕಾರು ಸಹ ಹಾನಿಗೊಳಗಾಗಿದೆ.  ಅದರಂತೆ ಸಂತೆಯಲ್ಲಿ ಸೊಪ್ಪು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪದ್ಮಾವತಿ ಎಂಬುವರ ಮನೆ ಸಂಪೂರ್ಣ ಹಾನಿಯಾಗಿದೆ.  ಮಿಳಘಟ್ಟದಲ್ಲಿ ಪದ್ಮಾವತಿ ಯಾನೆ ಮಲ್ಲಮ್ಮ ಎಂಬುವರು ಶೀಟಿನ ಮನೆಯಲ್ಲಿ ವಾಸವಾಗಿದ್ದರು‌ ಗುರುವಾರ ರಾತ್ರಿ ಮನೆ ಉರುಳಿ ಬಿದ್ದಿದೆ. 



ಮನೆ ಹಾನಿಯಿಂದಾಗಿ ಶಾಲೆ ಮತ್ತು ಮನೆಗಳು ಬೀಳುವ ಜೊತೆಗೆ ಶಾಲೆ ಕಾಂಪೌಂಡುಗಳು ಹಾನಿಗೊಳಗಾಗಿವೆ, ಓಮಿನಿ ಕಾರು ಹೇಮಂತ್ ಎಂಬುವರಿಗೆ ಸೇರಿದ್ದರೆ 800 ಕಾರು ವಿಜಯ ಎಂಬುವರಿಗೆ ಸೇರಿದ್ದಾಗೆದೆ.

ಇದನ್ನೂ ಓದಿ-https://www.suddilive.in/2024/07/blog-post_683.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ