ಸೋಮವಾರ, ಜುಲೈ 1, 2024

ಢೆಂಘಿ ಜ್ವರ-ಮೆಗ್ಗಾನ್ ನಲ್ಲಿ ತಿಂಗಳಿಂದ ತಿಂಗಳಿಗೆ ದಾಖಲಾತಿ ಹೆಚ್ಚಳ

ಸುದ್ದಿಲೈವ್/ಶಿವಮೊಗ್ಗ

ಎಲ್ಲಡೆ ಢೇಂಘಿ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಢೇಂಘಿ ಜ್ವರ ಶಿವಮೊಗ್ಗದ ಜನರನ್ನೂ ಇನ್ನೂ ಹೆಚ್ಚು ಕಂಗಡೆಸಿಸಿದೆ. ಚಿಕಿತ್ಸೆಗಾಗಿ ಮೆಗ್ಗಾನ್ ನಲ್ಲಿ ಹೆಚ್ಚಿನ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ.

ಡೇಂಘಿ ಜ್ವರದಿಂದ‌ ಮೆಗ್ಗಾನ್ ಗೆ ಎರಡು ರೀತಿಯ ರೋಗಿಗಳು ಬಂದು ದಾಖಲಾಗುತ್ತಿದ್ದಾರೆ. ಕೆಲವರು ಶೀತ ಜ್ವರ, ಕೆಮ್ಮುವಿನಿಂದ ಬಂದು ದಾಖಲಾದವರಿಗೆ ನಂತರ ಡೆಂಘಿ ಲಕ್ಷಣಗಳು ಕಂಡು ಬಂದರೆ ಇನ್ನು ಕೆಲವರಿಗೆ ಡೆಂಘಿ ಜ್ವರವೇ ನೇರವಾಗಿ ಪೀಡಿಸುತ್ತಿರುವುದರಿಂದ‌ ಅವರನ್ನ ಮೆಗ್ಗಾನ್ ನಲ್ಲಿ ದಾಖಲಿಸಲಾಗಿದೆ.

ಢೆಂಘಿ ಜ್ವರ ಪ್ರತಿ ತಿಂಗಳು ಶಿವಮೊಗ್ಗದಲ್ಲಿ ತಿಂಗಳಿಂದ ತಿಂಗಳಿಗೆ ಹೆಚ್ಚಿಗೆಯಾಗಿದೆ. ಪರೀಕ್ಷೆ ನಡೆಸಿದ ಆಧಾರದ ಮೇರೆಗೆ ವ್ಯಕ್ತಿಗಳಲ್ಲಿ ರೋಗ ಲಕ್ಷಣ ಕಂಡು ಬಂದಿದೆ.

ಜನವರಿಯಲ್ಲಿ 159 ವ್ಯಕ್ತಿಗಳಲ್ಲಿ ಪರೀಕ್ಷೆ ನಡೆಸಿದರೆ 41 ಜನರಿಗೆ ರೋಗ ಲಕ್ಷಣ ಕಂಡು ಬಂದಿತ್ತು. ಶೇ.25.8 ರಷ್ಟು ರೋಗಿಗಳು ಮೆಗ್ಗಾನ್ ಗೆ ದಾಖಲಾಗಿದ್ದರು. ಫೆಬ್ರವರಿಯಲ್ಲಿ 174 ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, 47 ಜನರಲ್ಲಿ ರೋಗಗಳು ಕಂಡು ಬಂದಿದೆ. ಶೇ.27 ರಷ್ಟು ರೋಗ ಕಾಣಿಸಿಕೊಂಡಿದೆ.

ಮಾರ್ಚ್ ನಲ್ಲಿ 206 ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, 67 ಜನರಲ್ಲಿ ಢೇಂಘಿ ಜ್ವರ ಕಾಣಿಸಿಕೊಂಡು ಶೇ.32.5 ರಷ್ಟು ಏರಿಕೆಯಾಗಿತ್ತು. ಇದು ಏಪ್ರಿಲ್ ನಲ್ಲಿ ಶೇ.46 ರಷ್ಟು‌ ಏರಿಕೆ ಯಾಗಿದೆ.176 ಜನರನ್ನ ಪರೀಕ್ಷೆಗೆ ಒಳಪಡಿದಿದರೆ 81 ಜನರಲ್ಲಿ ರೋಗಲಕ್ಷಣ ಕಾಣಿಸಿಕೊಂಡಿತ್ತು.

ಮೇ ನಲ್ಲಿ  ಇದರ ಶೇಕಡವಾರು ರೋಗಿಗಳ ಸಂಖ್ಯೆ 42.8ರಷ್ಟಿತ್ತು. ಏಪ್ರಿಲ್ ಗೆ ಹೋಲಿಸಿದರೆ ಈ ಶೇಕಡವಾರು ಕಡಿಯಾಗಿತ್ತು. 301 ಜನರನ್ನ ಪರೀಕ್ಷೆಗೆ ಒಳಪಡಿಸಿದರೆ 129 ಜನರಲ್ಲಿ ರೋಗಲಕ್ಷಣ ಕಾಣಿಸಿಕೊಂಡಿದೆ. ಜೂನ್ ತಿಂಗಳಲ್ಲಿ  ಶೇಕಡವಾರು ರೋಗಲಕ್ಷಣ ಹೆಚ್ಚಾಗಿದೆ. 331 ಜನರಲ್ಲಿ ಪರೀಕ್ಷೆ ನಡೆಸಿದರೆ 145 ಜನರಿಗೆ ರೋಗ ದೃಢಪಟ್ಟಿದೆ ಶೇ.43.8 ರಷ್ಟು ರೋಗ ಕಾಣಿಸಿಕೊಂಡಿದೆ.

ಇದನ್ನೂ ಓದಿ-https://suddilive.in/archives/18225

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ